ಸೌತ್ ಇಂಡಿಯ ಗಾರ್ಮೆಂಟ್ಸ್ ಅಸೋಸಿಯೇಷನ್ *27ಸೌತ್ ಇಂಡಿಯ ಗಾರ್ಮೆಂಟ್ಸ್ ಫೇರ್
ದಿನಾಂಕ 26,27,28ಮೂರು ದಿನಗಳ ಕಾಲ ಗಾರ್ಮೆಂಟ್ಸ್ ಮೇಳ
ದೇಶದಲ್ಲಿ ತಯಾರಿಕೆಯಾಗುವ ಬಟ್ಟೆ ಖರೀದಿಸಿ,ದೇಶದ ಆರ್ಥಿಕ ಅಭಿವೃದ್ದಿಗೆ ಸಹಕಾರಿಸಿ
ಬೆಂಗಳೂರು: ದಕ್ಷಿಣ ಭಾರತ ಗಾರ್ಮೆಂಟ್ಸ್ ಅಸೋಸಿಯೇಷನ್ ವತಿಯಿಂದ 27ನೇಸೌತ್ ಇಂಡಿಯ ಗಾರ್ಮೆಂಟ್ಸ್ ಮೂರು ದಿನಗಳ ಕಾಲ ನಡೆಯುವ ಮೇಳವನ್ನು ಅರಮನೆಮೈದಾನ ಪ್ರಿನಸ್ಸ್ ಶೀರಿನ್ ಆಯೋಜಿಸಲಾಗಿತ್ತು. ಚನ್ನಬಸಪ್ಪ ಆಂಡ್ ಸನ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸಿ.ಶಿವಕುಮಾರ್, ಐ.ಆರ್.ಡಿ.ಎಸ್.ನಾ ಜಿ.ಆರ್.ಅರ್ಕಾದಾಸ್, ಚಲನಚಿತ್ರ ನಟಿ ಕಾವ್ಯ ಶೆಟ್ಟಿರವರು, ಸೌತ್ ಇಂಡಿಯ ಗಾರ್ಮೆಂಟ್ ತಯಾರಕರು, ಮಾರಾಟ ಸಂಘದ ಅಧ್ಯಕ್ಷ ಅನುರಾಗ್ ಸಿಂಗ್ಲ ಉದ್ಘಾಟನೆ ಮಾಡಿದರು.

ಸಂಘದ ಕಾರ್ಯದರ್ಶಿ ರಾಜೇಶ್ ಚಾಹವತ್,ಉಪಾಧ್ಯಕ್ಷರಾದ ನರೇಶ್ ಲಖನ್ ಪಾಲ್,ಕಿಶೋರ್ ಜೈನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯರ,ಕಿರಿಯರ ಮತ್ತು ಮಕ್ಕಳ,ಮಹಿಳೆಯರ ವಿಶೇಷ ಉಡುಪುಗಳ ಪ್ರದರ್ಶನ ಮಾರಾಟ ಮತ್ತು ರೂಪದರ್ಶಿಯರಿಂದ ಫ್ಯಾಷನ್ ಶೋ ಏರ್ಪಡಿಸಲಾಗಿತ್ತು.
ಇದೇ ವೇಳೆ ಮಾತಾಡಿದ ಅನುರಾಗ್ ಸಿಂಗ್ಲ, ಭಾರತ ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದೆ. ಗಾರ್ಮೆಂಟ್ಸ್ ಉದ್ಯಮಕ್ಕೆ ಉತ್ತಮ ಭವಿಷ್ಯ ರೂಪಿಸಲು ಗಾರ್ಮೆಂಟ್ಸ್ ಮೇಳ ಆಯೋಜಿಸಲಾಗಿದೆ. ನಮ್ಮ ಸಂಘವು 1996ರಲ್ಲಿ ಆರಂಭವಾಗಿದೆ. ಗಾರ್ಮೆಂಟ್ಸ್ ಕಂಪನಿಗಳಲ್ಲಿ ಹಲವಾರು ಸಮಸ್ಯೆಗಳಿದ್ದು, ಗಾರ್ಮೆಂಟ್ಸ್ ಉದ್ಯಮದಲ್ಲಿ ಮಾರಾಟ ತೆರಿಗೆ, ಎಕ್ಸೈಸ್ ಡ್ಯೂಟಿ ಸಮಸ್ಯೆಗಳ ಬಗ್ಗೆ ಸರ್ಕಾರದಲ್ಲಿ ಚರ್ಚಿಸಲಾಗುತ್ತಿದೆ ಎಂದರು.

ಗಾರ್ಮೆಂಟ್ಸ್ ಉದ್ಯಮದಲ್ಲಿ ಬೆಂಗಳೂರಿಗೆ ಉತ್ತಮ ಭವಿಷ್ಯವಿದೆ. ಸಾವಿರಾರು ಗಾರ್ಮೆಂಟ್ಸ್ ಕಂಪನಿಗಳಿಗೆ ಸಹಕಾರಿಯಾಗಲಿ ಎಂದು ಸಂಘ ಶ್ರಮಿಸುತ್ತಿದೆ. ಭಾರತ ದೇಶದ ನೂರಾರು ಕಂಪನಿಗಳು ಗಾರ್ಮೆಂಟ್ಸ್ ಮೇಳದಲ್ಲಿ ಪಾಲ್ಗೊಳ್ಳಲಿದೆ. ಯುವ ಉದ್ಯಮಿಗಳಿಗೆ ಮತ್ತು ಅನ್ಯ ರಾಜ್ಯದ ಗಾರ್ಮೆಂಟ್ಸ್ ಕಂಪನಿಗಳು ಬೆಂಗಳೂರು ನಗರದಲ್ಲಿ ಉದ್ಯಮ ಆರಂಭಿಸಲು ಸಹಕಾರ ನೀಡಲು ಸಂಘವು ಮಾರ್ಗದರ್ಶನ ನೀಡುತ್ತದೆ. ವಿದೇಶಿ ಬಟ್ಟೆ ತಯಾರಿಕ ಕಂಪನಿಗಳ ತ್ಯಜಿಸೋಣ, ಭಾರತದಲ್ಲಿ ತಯಾರಿಕೆಯಾದ ಬಟ್ಟೆಗಳನ್ನು ಧರಿಸೋಣ ಎಂದು ಕರೆನೀಡಿದರು.

ಪ್ರಧಾನಿ ನರೇಂದ್ ರಮೋದಿಯವರು ಕೇಂದ್ರ ಸರ್ಕಾರದಲ್ಲಿ ಲೋಕಲ್ ಟು ವೊಕಾಲ್ ಆಂದೋಲನವಾಗಬೇಕು. ಸ್ಥಳೀಯ ಸಣ್ಣ ಉದ್ಯಮಗಳಿಗೆ ಮತ್ತು ಸ್ಥಳೀಯ ತಯಾರಿಸಿದ ಗಾರ್ಮೆಂಟ್ಸ್ ಬಟ್ಟೆಗಳನ್ನು ದೇಶದ ಜನರೆ ಖರೀದಿಸಿದರೆ ಆರ್ಥಿಕವಾಗಿ ಭಾರತ ಸಧೃಢವಾಗುತ್ತದೆ, ಆತ್ಮನಿರ್ಭಾರ ಭಾರತವಾಗುತ್ತದೆ. ಭಾರತದ ಗಾರ್ಮೆಂಟ್ಸ್ ತಯಾರಿಸಿದ ಬಟ್ಟೆಗಳನ್ನು ದೇಶದ ಜನರು ಧರಿಸೋಣ ವಿದೇಶಿ ವ್ಯಾಮೋಹ ಬಿಡೋಣ ಎಂದು ಕರೆನೀಡಿದರು.
ಗಾರ್ಮೆಂಟ್ಸ್ ಉದ್ಯಮದ ಸಮಸ್ಯೆಗಳ ಮತ್ತು ಅಭಿವೃದ್ದಿಗಳ ಬಗ್ಗೆ ಕೇಂದ್ರ ಸಚಿವ ಪಿಯೂಶ್ ಗೋಯಲ್ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರಿಗೆ ಮನವಿ ಮಾಡಲಾಗುವುದು ಎಂದರು.




