ಬೆಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ)ದ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಉಗ್ರ ನಾಸೀರ್ ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗುವಂತೆ ಮಾಡಲು ಉಗ್ರರ ತಂಡ ರೂಪಿಸಿದ್ದ ಭೀಕರ ಸಂಚು ಪತ್ತೆಯಾಗಿದೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಗ್ರೆನೇಡ್ ಸ್ಫೋಟ ಮಾಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಗಿ ಭದ್ರತೆಯಲ್ಲಿರುವ ಮೋಸ್ಟ್ ವಾಟೆಂಡ್ ಉಗ್ರ ನಾಸೀರ್ ನನ್ನು ಹೊರ ತರಲು ಜೈಲು ಅಧಿಕಾರಿಗಳ ನೆರವು ಪಡೆದು ಉಗ್ರರ ತಂಡ ರೂಪಿಸಿದ್ದ ಸಂಚನ್ನು ತೀವ್ರ ತನಿಖೆಯಲ್ಲಿ ಎನ್ ಐಎ ಅಧಿಕಾರಿಗಳು ಬಯಲಿಗೆದಿದ್ದಾರೆ.
ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಬಂಧಿತ ಮನೋವೈದ್ಯ ನಾಗರಾಜ್, ಎಎಸ್ಐ ಚಾಂದ್ ಪಾಷಾ ಹಾಗೂ ಶಂಕಿತ ಉಗ್ರನ ತಾಯಿ ಫಾತೀಮಾರನ್ನು ತೀವ್ರ ವಿಚಾರಣೆಯಲ್ಲಿ ಉಗ್ರ ನಾಸೀರ್ ನನ್ನು ಹೊರತರಲು ಉಗ್ರರ ತಂಡ ರೂಪಿಸಿದ್ದ ಸಂಚನ್ನು ಯತ್ನವನ್ನು ಬೆಂಗಳೂರಿನ ಸಿಸಿಬಿ ಹಾಗೂ ಕೇಂದ್ರ ತನಿಖಾ ಘಟಕ ವಿಫಲಗೊಳಿಸಿರುವುದು ಬೆಳಕಿಗೆ ಬಂದಿದೆ.
ಉಗ್ರ ನಾಸೀರ್ ಕಳೆದ 2009ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯಾಗಿದ್ದು, ಆತನನ್ನು ಅಲ್ಲಿಂದ ತಪ್ಪಿಸಿಕೊಳ್ಳುವಂತೆ ಮಾಡಲು ಉಗ್ರರು ಎರಡು ಬಾರಿ ವಿಫಲ ಯತ್ನ ನಡೆಸಿದ್ದರು ಎಂಬುದನ್ನು ಎನ್ಐಎ ಪತ್ತೆಮಾಡಿದೆ.
ಸಿನಿಮೀಯ ರೀತಿಯಲ್ಲಿ ಉಗ್ರ ನಾಸೀರ್ ಜೈಲಿನಿಂದ ತಪ್ಪಿಸಿಕೊಳ್ಳಲು ಸಂಚು ಸಿದ್ಧವಾಗಿತ್ತು. ಅದಕ್ಕೆ ಎಎಸ್ಐ ಚಾಂದ್ ಪಾಷಾ ಪ್ರಮುಖ ಸೂತ್ರಧಾರರಾಗಿದ್ದರು. ಚಾಂದ್ ಪಾಷಾಗೆ ನಾಸೀರ್‌ನನ್ನು ಕೋರ್ಟ್‌ಗೆ ಕರೆದೊಯ್ಯುವ ಜವಾಬ್ದಾರಿ ಇತ್ತು. ನಾಸೀರ್ನನ್ನು ಕೋರ್ಟ್ಗೆ ಕರೆದೊಯ್ಯಲು ಒಂದು ಜೀಪ್, ಒಬ್ಬ ಇನ್ಸ್ಪೆಕ್ಟರ್ ಅಥವಾ ಪಿಎಸ್ಐ ನಿಯೋಜನೆ ಮಾಡಲಾಗುತ್ತಿತ್ತು. ಆ ಸಂದರ್ಭದಲ್ಲಿ ಮಾರ್ಗ ಮಧ್ಯೆ ಗ್ರೆನೇಡ್ ಸ್ಫೋಟಿಸಿ ಪೊಲೀಸರ ಗಮನ ಬೇರೆಡೆ ಸೆಳೆಯುವಂತೆ ಮಾಡಿ ನಾಸೀರ್ ಪರಾರಿಯಾಗುವಂತೆ ಮಾಡುವುದು ಸಂಚಿನ ಭಾಗವಾಗಿತ್ತು. ಈ ಎಲ್ಲ ಮಾಹಿತಿಯನ್ನು ಫಾತಿಮಾ ಮೂಲಕ ಉಗ್ರ ಜುನೈದ್ಗೆ ರವಾನೆ ಮಾಡಲಾಗುತ್ತಿತ್ತು ಎಂಬುದನ್ನು ಎನ್ಐಎ ಪತ್ತೆ ಮಾಡಿದೆ.
ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಮೂಲಕ ಸಂಚುಕೋರರಿಗೆ ಗ್ರೆನೇಡ್ ಪೂರೈಕೆಯಾಗುತ್ತಿತ್ತು. 2023ರಲ್ಲಿ ಸಿಸಿಬಿ ದಾಳಿ ಸಂದರ್ಭ ಕೊಡಿಗೆಹಳ್ಳಿ ಮನೆಯ ಅಲ್ಮೆರಾದಲ್ಲಿ ನಾಲ್ಕು ಗ್ರೆನೇಡ್ಗಳು ಪತ್ತೆಯಾಗಿದ್ದವು. ಹೀಗಾಗಿ ಉಗ್ರರ ಸಂಚು ವಿಫಲವಾಗಿತ್ತು. ಜುನೈದ್, ಮೊಹಮ್ಮದ್ ಅರ್ಷದ್ ಖಾನ್, ಸುಹೈಲ್, ಫೈಜಲ್, ತಬ್ರೇಜ್, ಮುದಾಸಿರ್ ಸೇರಿಕೊಂಡು ಸಂಚು ರೂಪಿಸಿದ್ದು,ಅದಕ್ಕೆ ಎಎಸ್ಐ ಚಾಂದ್ ಪಾಷಾ ನೆರವು ನೀಡಿದ್ದ.
ಉಗ್ರ ನಾಸೀರ್ ಪರಾರಿ ಸಂಚು ಪ್ರಕರಣದಲ್ಲಿ ಮೂವರನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ ಚಾಂದ್ ಪಾಷಾ ಹಾಗೂ ಶಂಕಿತ ಉಗ್ರನ ತಾಯಿ ಅನೀಸ್ ಫಾತೀಮಾರನ್ನು ಮಂಗಳವಾರ ರಾತ್ರಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಸದ್ಯ ಎಎಸ್ಐ ಚಾಂದ್ ಪಾಷಾನನ್ನು 6 ದಿನಗಳ ಕಾಲ ಕಸ್ಟಡಿಗೆ ಪಡೆಯಲಾಗಿದೆ.




