ನೊಬೆಲ್ ಪ್ರಶಸ್ತಿಗೆ ನರೇಂದ್ರ ಮೋದಿ ಪರಿಗಣನೆ ಸುಳ್ಳು ಸುದ್ದಿ

3 years ago

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ನೊಬೆಲ್ ಪ್ರಶಸ್ತಿಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂಬ ವದಂತಿಗಳ ಕುರಿತು ನಾರ್ವೇಯ ನೊಬೆಲ್ ಸಮಿತಿಯ ಉಪ ನಾಯಕ ಅಸ್ಲೆ ಟೋಜೆ ಪ್ರತಿಕ್ರಿಯಿಸಿದ್ದು, ‘ಇದು ಸಂಪೂರ್ಣವಾಗಿ ಸುಳ್ಳು’ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಈ ಕುರಿತು ನಕಲಿ ಟ್ವೀಟ್ ಕಳುಹಿಸಲಾಗಿದೆ ಎಂದು ತೋಜೆ ಹೇಳಿದ್ದು, ‘ನಾವು ಅದರ ಕುರಿತು ಚರ್ಚಿಸುವ ಮೂಲಕ ಹೆಚ್ಚಿನ ಗಾಳಿ ಸುದ್ದಿ ಹಬ್ಬಿಸಬಾರದು ಎಂದಿದ್ದಾರೆ.

 

ತಮ್ಮ ಭಾರತ ಭೇಟಿ ಉದ್ದೇಶದ ಕುರಿತು ಪ್ರತಿಕ್ರಿಯಿಸಿದ ಅವರು, “ನಾನು ನಾರ್ವೇಯ ನೊಬೆಲ್ ಸಮಿತಿಯ ಉಪ ನಾಯಕನಾಗಿ ಭಾರತಕ್ಕೆ ಬಂದಿಲ್ಲ. ನಾನು ಅಂತರರಾಷ್ಟ್ರೀಯ ಶಾಂತಿ ಮತ್ತು ತಿಳುವಳಿಕೆಯ ನಿರ್ದೇಶಕನಾಗಿ ಮತ್ತು ಭಾರತದ ಸ್ನೇಹಿತನಾಗಿ ಇಲ್ಲಿದ್ದೇನೆ” ಎಂದರು.

Leave a Reply