ಚರ್ಮ ಗಂಟು ರೋಗ: ತಜ್ಞರು ಹೇಳಿದ್ದೇನು???

4 years ago

ದೆಹಲಿ: ಚರ್ಮ ಗಂಟು ರೋಗಕ್ಕೆ ಒಳಗಾಗಿರುವ ಹಸುವಿನ ಹಾಲು ಕುದಿಸಿ ಕುಡಿಯುವುದರಿಂದ ಯಾವುದೇ ಆತಂಕವಿಲ್ಲ. ಹಸುವಿನ ಮಾಂಸ ಮತ್ತು ಹಾಲಿನಿಂದ ಈ ಕಾಯಿಲೆ ಮನುಷ್ಯರಿಗೆ ಹರಡುವುದಿಲ್ಲ. ಇದು ಜೂನೋಟಿಕ್ ಡಿಸೀಸ್ ಅಲ್ಲ ಎಂದು ಮಹಾರಾಷ್ಟ್ರದ ಪಶುವೈದ್ಯಕೀಯ ಇಲಾಖೆಯ ನಿರ್ದೇಶಕ ಸಚಿಂದ್ರ ಪ್ರತಾಪ್ ಸಿಂಗ್ ತಿಳಿಸಿದರು.

ಬಿಜೆಪಿ ಸಂಸದೆ ಮನೇಕಾ ಗಾಂಧಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಚರ್ಮರೋಗಪೀಡಿತ ಹಸುವಿನ ಹಾಲು ಬಳಸಬೇಡಿ ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿಂದ್ರ ಪ್ರಸಾದ್ ಸಿಂಗ್, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವರು ಸರ್ಕಾರಕ್ಕೆ ಮನವಿ ಮಾಡಿದರು.

ಭಾರತದಲ್ಲಿ ಮೊದಲ ಬಾರಿಗೆ ಈ ರೋಗವು 2022ರ ಏಪ್ರಿಲ್ ನಲ್ಲಿ ಗುಜರಾತಿನಲ್ಲಿ ಕಂಡು ಬಂದಿತು. ಇಲ್ಲಿಯವರೆಗೆ ಕರ್ನಾಟಕವನ್ನು ಒಳಗೊಂಡಂತೆ 15 ರಾಜ್ಯಗಳಲ್ಲಿ ಈ ಕಾಯಿಲೆ ಕಂಡುಬಂದಿದೆ.

ರೋಗದ ಲಕ್ಷಣಗಳು ಹೀಗಿವೆ:
1.  ಮಾರಕ ವೈರಸ್ ನಿಂದ ಹರಡುತ್ತದೆ. ರಕ್ತ ಹೀರುವ ಸೊಳ್ಳೆ ಮತ್ತು ಇತರ ಕೀಟಗಳಿಂದ ಮಾತ್ರ ಹರಡುತ್ತದೆ
2. ಪ್ರಾರಂಭದಲ್ಲಿ ಹಸುವಿಗೆ ಜ್ವರ ಕಾಣಿಸಿಕೊಳ್ಳುತ್ತದೆ
3.  2.5 cm ಅಳತೆಯ ಚರ್ಮ ಗಂಟು ಕಾಣಿಸಿಕೊಳ್ಳುತ್ತದೆ
4. ಹಸುವಿನ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ
5.  ಹಸುಗಳು ನೀರು ಆಹಾರ ತ್ಯಜಿಸುತ್ತವೆ
6.  ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ ಸಾವನ್ನಪ್ಪುತ್ತವೆ

ದೇಶದಲ್ಲಿ ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಮಧ್ಯ ಪ್ರದೇಶ ರಾಜ್ಯಗಳು ವ್ಯಾಕ್ಸಿನೇಷನ್‌ ಆರಂಭಿಸಿವೆ. ಉತ್ತರ ಪ್ರದೇಶ ಸರ್ಕಾರ 90% ವ್ಯಾಕ್ಸಿನೇಷನ್‌ ಮುಗಿಸಿದ ಮೊದಲ ಸರ್ಕಾರ ಎನಿಸಿದೆ.

ಕಾಯಿಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಉಂಟಾಗುತ್ತಿರುವ ಆತಂಕ ನಿವಾರಿಸಲು IVRI ನ ನಿರ್ದೇಶಕ ಅಶೋಕ ಕುಮಾರ್ ಮೊಹಾಂತಿ ಮಾತನಾಡಿ, ರೋಗಕ್ಕೆ ತುತ್ತಾದ ಹಸುವಿನ ಹಾಲನ್ನು ಕುದಿಸಿ ಅಥವಾ ಕುದಿಸದೆ ಬಳಸಿದರು ಮನುಷ್ಯರಿಗೆ ಯಾವುದೇ ಹಾನಿ ಇಲ್ಲ. ಏಕೆಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗವಲ್ಲ ಎಂದು ಸ್ಪಷ್ಟಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಡಾ.ರೀಟ ಗೋಯಲ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದ ಉದಾಹರಣೆಗಳಿಲ್ಲ. ಇದು ಪ್ರಾಣಿಗಳಿಂದ ಪ್ರಾಣಿಗಳಿಗೆ ಅಂದರೆ ಎಮ್ಮೆ, ಕುರಿ, ಹಸುಗಳಿಗೆ ಮಾತ್ರ ಹರಡುತ್ತದೆ ಎಂದರು. ಇದಕ್ಕು ಮೋದಲು ಈ ಕಾಯಿಲೆ ನಾಯಿಯನ್ನು ಒಳಗೊಂಡಂತೆ ಹಲವು ಪ್ರಾಣಿಗಳಲ್ಲಿ ಇತ್ತು. ಇದೇ ಮೊದಲ ಬಾರಿಗೆ ವ್ಯಾಪಕವಾಗಿ ಹರಡುತ್ತಿದೆ. ಸೂಕ್ತ ಸಮಯಕ್ಕೆ ಲಸಿಕೆ ಹಾಕುವ ಮೂಲಕ ವ್ಯಾಪಕ ಪ್ರಮಾಣದ ಹರಡುವಿಕೆ ತಡೆಗಟ್ಟಲು ಸಾಧ್ಯ ಎಂದರು.

Leave a Reply