ರಾಹುಲ್ ಗಾಂಧಿ ಒಬ್ಬ ಡ್ರಗ್ಸ್ ಅಡಿಕ್ಟ್: ನಳಿನ್ ಕುಮಾರ ಕಟೀಲ್

5 years ago

ಹುಬ್ಬಳ್ಳಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಡ್ರಗ್ಸ್ ಅಡಿಕ್ಟ್, ಪೆಡ್ಲರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಡುವೆ ಪೈಪೋಟಿ ಇದೆ. ಅವರಿಗೆ ಪಕ್ಷವನ್ನೇ ಮುನ್ನಡೆಸಲಾಗುತ್ತಿಲ್ಲ. ದೇಶವನ್ನು ಮುನ್ನಡೆಸುತ್ತಾರಾ? ಎಂದು ಪ್ರಶ್ನಿಸಿದರು.

ನಮ್ಮ ಪ್ರಧಾನಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂದರೆ, ಸಿದ್ದರಾಮಯ್ಯ ಸಾಬರ್ ಕಾ ಸಾಥ್, ಸಾಬರ್ ಕಾ ವಿಕಾಸ್ ಎನ್ನುತ್ತಿದ್ದಾರೆ. ಸೋಲಿನ ಭೀತಿಯಿಂದ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೋಡೆತ್ತಲ್ಲ. ಕಾಡೆತ್ತು. ಒಬ್ಬರಿಗೊಬ್ಬರು ಕಾದಾಟ ಶುರು ಮಾಡಿಕೊಂಡಿದ್ದಾರೆ ಎಂದರು.

ಮುಂದಿನ ಚುನಾವಣೆ ಹೊತ್ತಿಗೆ ಕಾಂಗ್ರೆಸ್ 2 ಹೋಳಾಗಿರುತ್ತದೆ. ಡಿ.ಕೆ.ಶಿವಕುಮಾರ್ ಅವರು ತಿಹಾರ್ ಜೈಲಿಗೆ ಸ್ವಾತಂತ್ರ್ಯ ಹೋರಾಟಮಾಡಿ ಹೋಗಿದ್ದರಾ ಅಥವಾ ಸಂಗ್ರಾಮದ ಕುರಿತು ಕಥೆ ಬರೆಯಲು ಹೋಗಿದ್ದರಾ ಎಂದು ಪ್ರಶ್ನಿಸಿದರು.

Leave a Reply