ಹಾಸನದಲ್ಲಿ ಸಮವಸ್ತ್ರ ಧರಿಸಿ ಗುಂಡು ಹಾಕಿದ ಪೊಲೀಸರು

4 years ago

ವಿಡಿಯೋ ಬಿಡುಗಡೆ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದ ಕರ್ನಾಟಕ ರಾಷ್ಟ್ರ ಸಮಿತಿ

ಅಮಾನತು ಮಾಡಿ ಆದೇಶ ಹೊರಡಿಸಿದ ವರಿಷ್ಠಾಧಿಕಾರಿ

ಹಾಸನ: ಹಾಸನದಲ್ಲಿ ಸಮವಸ್ತ್ರದಲ್ಲಿರುವಾಗಲೇ ಆರೋಪಿಗಳ ಜೊತೆಯಲ್ಲಿ ಬಾರ್ ಒಂದರಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಇಬ್ಬರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತ್ತು ಮಾಡಿ ತನಿಖೆಗೆ ಆದೇಶ ಮಾಡಿದ್ದಾರೆ.

ಈ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ಮೊದಲು ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಅ್ಪಲೋಡ್ ಮಾಡಿದ್ದು, ಸದ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ ಇವರು ಹಾಸನ ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯ ಪೊಲೀಸರು. ಠಾಣೆಗೊ ಅಥವ ಜೈಲಿಗೊ ಅಥವ ನ್ಯಾಯಾಲಯಕ್ಕೊ ಕೆಲವು ಆರೋಪಿತರನ್ನು ಅಥವ ಸಾಕ್ಷಿಗಳನ್ನು ಅಥವ ದೂರುದಾರರನ್ನು ಕರೆದೊಯ್ಯುವ ಸಂದರ್ಭದಲ್ಲಿಯೇ ಆ ಖಾಸಗಿ ವ್ಯಕ್ತಿಗಳಿಂದಲೇ ಮದ್ಯ ಮತ್ತಿತರ ಅದಕ್ಕೆ ನಂಜಿಕೊಳ್ಳಲು ಬೇಕಾದ ಸಾಮಗ್ರಿ ತರಿಸಿಕೊಂಡು ಬಾರ್ ಅಥವ ಇನ್ಯಾವುದೋ ಕಟ್ಟಡದ ಮಹಡಿ ಮೇಲಿನ ಕೋಣೆಯಲ್ಲಿ ಸಮವಸ್ತ್ರ ಧರಿಸಿಕೊಂಡೆ “ಎಣ್ಣೆ ಪಾರ್ಟಿ” ಮಾಡುತ್ತಿದ್ದಾರೆ ಎಂದು ಬರೆದಿತ್ತು.

ಇಂದು ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಹಾಸನ ನಗರದಲ್ಲಿ ಆಗಿರುವ ಈ ಘಟನೆ ಮತ್ತು ಲೋಪದ ಕುರಿತು ರಾಜ್ಯ ಗೃಹ ಇಲಾಖೆಯ ಉನ್ನತಾಧಿಕಾರಿಗಳು, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣವೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಒತ್ತಾಯಿಸಿತ್ತು.

KRS ಪಕ್ಷದ KRS Party – Hassan ಹಾಸನ ಜಿಲ್ಲಾ ಕಾರ್ಯಕರ್ತರೊಬ್ಬರು ಪೊಲೀಸರು ಸಮವಸ್ತ್ರದಲ್ಲಿರುವಾಗ ಆರೋಪಿ ಜೊತೆ ಮದ್ಯ ಸೇವಿಸುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿದ್ದರು. ಆ ವಿಡಿಯೋವನ್ನು Karnataka Rashtra Samithi ಪಕ್ಷದ ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದ್ದರು ಮತ್ತು ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಸಮವಸ್ತ್ರದ‍ಲ್ಲೇ ಗುಂಡು ಹಾಕಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Leave a Reply