ಬಾಬಾ ಬುಡನ್ ಗಿರಿ ದರ್ಗಾ ವಿಚಾರವಾಗಿ ಸುಪ್ರೀಂಕೋರ್ಟ್ ಆದೇಶ ಪರಿಗಣಿಸಿಯಾದರೂ ಕಾಂಗ್ರೆಸ್ ಸರ್ಕಾರ ಸತ್ಯದ ಪರವಾಗಿ ನಿಲ್ಲುವ ಧೈರ್ಯ ತೋರಲಿ: ಅಫ್ಸರ್ ಕೊಡ್ಲಿಪೇಟೆ
ಚಿಕ್ಕಮಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲೆಯ 2024-27 ರಅವಧಿಯ ನೂತನ ಜಿಲ್ಲಾಧ್ಯಕ್ಷರಾಗಿ ಮುಸ್ತಫಾ ಆಲ್ದೂರು ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಶ್ರೀನಿವಾಸ್ ದಂಟರಮಕ್ಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ರಿಜ್ವಾನ್ ಹುಸೇನ್ ಹಾಗೂ ಮೊಹಮ್ಮದ್ ಮುಬಾರಕ್, ಕಾರ್ಯದರ್ಶಿಗಳಾಗಿ ಅಜ್ನಾನ್ ಚಿಕ್ಕಮಗಳೂರು ಕೋಶಾಧಿಕಾರಿಯಾಗಿ ಮೊಹಮ್ಮದ್ ಆಲಿ, ಹಾಗೂ ಸಮಿತಿ ಸದಸ್ಯರುಗಳಾಗಿ ಕೆ.ಪಿ ಖಾಲಿದ್, ಅಮ್ಜದ್ ಕಡೂರು, ಹಾಫಿಜ್ ಮೊಹ್ಸೀನ್ ರವರು ಆಯ್ಕೆಯಾಗಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಜಿಲ್ಲಾ ಸಮಿತಿಯ ಚುನಾವಣಾ ಪ್ರಕ್ರಿಯೆಯನ್ನು ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು ಹಾಗೂ ರಾಜ್ಯ ಸಮಿತಿ ಸದಸ್ಯ ಹಾಗೂ ಚಾಮರಾಜನಗರ ನಗರಸಭೆಯ ಕೌನ್ಸಿಲರ್ ಅಬ್ರಾರ್ ಅಹ್ಮದ್ ನಡೆಸಿಕೊಟ್ಟರು.
ಜಿಲ್ಲಾ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಬಾಬಾ ಬುಡನ್ ಗಿರಿ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಮುಸ್ಲಿಮರಿಗೆ ಅನ್ಯಾಯ ಮಾಡುತ್ತಲೇ ಬಂದಿವೆ. ಇದರ ವಿರುದ್ಧ ಹೋರಾಟ ಕೈಗೊಂಡಿರುವ ಸಯ್ಯದ್ ಗೌಸ್ ಮೋಹಿದ್ದೀನ್ ಶಾಖಾದ್ರಿ ಅವರಿಗೆ ಮೊದಲ ಹಂತದ ಜಯ ಲಭಿಸಿದ್ದು, ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ ಎಂದರು.
ಈ ಕಾನೂನು ಹೋರಾಟದಲ್ಲಿ ಎಸ್‌ಡಿಪಿಐ ಪಕ್ಷ ಸಯ್ಯದ್ ಗೌಸ್ ಮೋಹಿದ್ದೀನ್ ಶಾಖಾದ್ರಿ ಅವರಿಗೆ ಬೆಂಬಲವಾಗಿ ನಿಂತಿತ್ತು ಎಂಬ ಹೆಮ್ಮೆ ನಮಗಿದೆ. ಮಧ್ಯಂತರ ಆದೇಶ ಈ ಹೋರಾಟದಲ್ಲಿ ಮೊದಲ ಗೆಲುವಾಗಿದ್ದು, ಮುಂದೆ ಪೂರ್ಣ ಪ್ರಮಾಣದ ನ್ಯಾಯ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
17ನೇ ಶತಮಾನದ ಸೂಫಿ ಕ್ಷೇತ್ರವಾದ ಬಾಬಾ ಬುಡನ್ ಗಿರಿಯನ್ನು ಹಿಂದುತ್ವ ಪಡೆಗಳು ತಮ್ಮದೆಂದು ಸಾಧಿಸಲು ಹೊರಟು ನಿಂತಿವೆ. ಅದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸರ್ಕಾರ ಮಣಿಯುವ ದೌರ್ಬಲ್ಯ ಪ್ರದರ್ಶಿಸಿವೆ. 2017ರಲ್ಲಿ ಇಲ್ಲಿ ಹಿಂದುತ್ವ ಪಡೆಗಳಿಗೆ ಅನುಕೂಲವಾಗುವಂತೆ ಅವರ ಕಾರ್ಯಗಳಿಗೆ ಅನುವು ಮಾಡಿಕೊಡಲಾಗಿದೆ. ಜೊತೆಗೆ ಶತಮಾನಗಳಿಂದ ನಡೆದುಕೊಂಡು ಬರುತ್ತಿದ್ದ ಪ್ರಾರ್ಥನೆಗೆ ತೊಡಕು ಉಂಟು ಮಾಡಲಾಗಿದೆ. ಈ ನಿಟ್ಟಿನಲ್ಲಿ ಈಗ ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ಆದೇಶದ ಅನುಗುಣವಾಗಿಯೇ ಅಂತಿಮ ತೀರ್ಪು ಬರಲಿದ್ದು, ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಹಳೆಯ ಸಂಪ್ರದಾಯಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಪ್ರಕರಣದ ಭಾಗವಾಗಿ ದರ್ಗಾದಲ್ಲಿ ನಡೆಯಬೇಕಾದ ಪೂಜಾ ವಿಧಾನಗಳ ಬಗ್ಗೆ ಕರ್ನಾಟಕ ಸರ್ಕಾರ ತನ್ನ ಅಭಿಪ್ರಾಯವನ್ನು ಮಾರ್ಚ್ ಒಳಗೆ ತಿಳಿಸಬೇಕೆಂದು ಆದೇಶ ನೀಡಿದೆ. ಅದರಂತೆ ಕರ್ನಾಟಕ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಗೃಹಮಂತ್ರಿ ಪರಮೇಶ್ವರ್ ಅವರ ನೇತೃತ್ವದಲ್ಲಿ ಸಂಪುಟ ಉಪಸಮಿತಿಯನ್ನು ರಚಿಸಿದೆ. ಆ ಸಮಿತಿಯು ಜನವರಿ 17 ರಂದು ಸಂಬಂಧಪಟ್ಟವರೆಲ್ಲರ ಸಭೆಯೊಂದನ್ನು ಕರೆದು ಅಭಿಪ್ರಾಯವನ್ನು ಸಂಗ್ರಹಿಸಿದೆ ಎಂದರು.
ಆದರೆ ಇದೆ ವಿಷಯಕ್ಕೆ ಸಂಬಂಧಪಟ್ಟಂತೆ ಹಿಂದಿನ ಕಾಂಗ್ರೆಸ್ ಸರ್ಕಾರ 2017 ರಲ್ಲಿ ನ್ಯಾ. ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಂಶೋಧಕರಾದ ಷ. ಶೆಟ್ಟರ್ ಮತ್ತು ಪ್ರೊ. ರಹಮತ್ ತರೀಕೆರೆ ಅವರನ್ನೂ ಒಳಗೊಂಡ ಒಂದು ಹೈ ಪವರ್ ಸಮಿತಿಯನ್ನು ನೇಮಿಸಿತ್ತು. ಅದು ಸಂಬಂಧಪಟ್ಟವರ ಎಲ್ಲರಿಂದಲೂ ಅಹವಾಲು ಮತ್ತು ದಾಖಲೆಗಳನ್ನು ಸಂಗ್ರಹಿಸಿತ್ತು. ಮತ್ತು ಎಲ್ಲಾ ಆಯಾಮಗಳಿಂದಲೂ ಪ್ರಕರಣವನ್ನು ವಿಶ್ಲೇಷಿಸಿತ್ತು ಎಂದರು.
ನ್ಯಾ. ನಾಗಮೋಹನ್ ದಾಸ್ ಸಮಿತಿಯು ತನ್ನ ವರದಿಯಲ್ಲಿ ಪ್ರಾರಂಭದಿಂದಲೂ ಸದರಿ ಸಂಸ್ಥೆ ದರ್ಗಾ ಆಗಿದೆ ಎಂಬುದಕ್ಕೆ ದಾಖಲೆ ಇದೆಯೇ ವಿನಾ, ದತ್ತ ಪೀಠವಾಗಿತ್ತೆಂಬುದಕ್ಕೆ ಯಾವುದೇ ದಾಖಲೆಯಿಲ್ಲವೆಂದೂ, ದರ್ಗಾದಲ್ಲಿ ಅರ್ಚಕರ ನೇಮಕಾತಿ ಮಾಡಿದರೆ ಮತ್ತು ಆಗಮ ಪೂಜಾ ಪದ್ಧತಿಯನ್ನು ಜಾರಿ ಮಾಡಿದರೆ ದರ್ಗಾದ ಧಾರ್ಮಿಕ ಸ್ವರೂಪವೇ ಬದಲಾಗುತ್ತದೆ ಮತ್ತು ಅಂಥಾ ಕ್ರಮವು 1991ರ ಧಾರ್ಮಿಕ ಸ್ಥಳಗಳ ಕಾಯಿದೆಯ ಉಲ್ಲಂಘನೆಯಾಗುತ್ತದೆ ಎಂದು ಹೇಳಿತ್ತು ಎಂದರು.
2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಈವರೆಗೆ ದರ್ಗಾದಲ್ಲಿ ಆಗಿರುವ ಅನ್ಯಾಯವನ್ನು ಸರಿ ಮಾಡುವ ಗೋಜಿಗೆ ಹೋಗಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರಕ್ಕೆ ಸತ್ಯದ ಪರವಾಗಿ ನಿಲ್ಲುವ ಅವಕಾಶ ಒದಗಿ ಬಂದಿದೆ. ಸಂಘಿಗಳ ಸುಳ್ಳುಗಳಿಗೆ ಬಲಿಯಾಗದೆ ಅಥವಾ ರಾಜಿ-ಖಾಜಿ ಮರೆಮೋಸಗಳನ್ನು ಮಾಡದೆ ತನ್ನದೇ 2018 ರ ಆದೇಶಕ್ಕೆ ಬದ್ದರಾಗಿ ಸುಪ್ರೀಂಗೆ ವರದಿ ನೀಡಬೇಕೆಂದು ಆಗ್ರಹಿಸಿದರು.




