ಬಿಡುಗಡೆ ಆದ ಮುರುಘಾ ಶರಣರು

2 years ago

#Muruga #sharana #released #posco

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಪೋಕ್ಸೋ ಪ್ರಕರಣದಲ್ಲಿ  ಜಾಮೀನು ಪಡೆದಿರುವ ಮುರುಘಾ ಶರಣರು ಕಡೆಗೂ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.

ಮಠದ ಹಾಸ್ಟೆಲ್‌ನಲ್ಲಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸಿಲುಕಿ, ಪೋಕ್ಸೋ ಕೇಸ್ ದಾಖಲಾಗಿ ಕಳೆದ ವರ್ಷ ಜೈಲುಸೇರಿದ್ದ ಮುರುಘಾ ಶರಣರಿಗೆ ಹೈಕೋರ್ಟ್, ಕಳೆದ ನ. 8ರಂದು ಜಾಮೀನು ಮಂಜೂರು ಮಾಡಿತ್ತು. ಇದೀಗ 14 ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾದಂತಾಗಿದೆ.

ಮಠದ ಹಾಸ್ಟೆಲ್‌ನಲ್ಲಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮುರುಘಾಶ್ರೀಗಳ ವಿರುದ್ಧ ಎರಡು ಪೋಕ್ಸೋ ಪ್ರಕರಣಗಗಳು ದಾಖಲಾಗಿದ್ದವು. ಈ ಪೈಕಿ ಒಂದೇ ಪ್ರಕರಣದಲ್ಲಿ ಮಾತ್ರ ಮುರುಘಾಶ್ರೀಗಳು ಬಂಧನವಾಲಾಗಿತ್ತು. ಇದೇ ಒಂದನೇ ಪ್ರಕರಣರದಲ್ಲಿ ನವೆಂಬರ್ 8ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಹೀಗಾಗಿ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಇಂದು ಮುರುಘಾಶ್ರೀಗಳನ್ನು‌ ಬಿಡುಗಡೆಯಾಗಿದ್ದಾರೆ. 

ಸದರಿ ಪ್ರಕರಣದಲ್ಲಿ ಜಾಮೀನು ನೀಡುವ ವೇಳೆ ಚಿತ್ರದುರ್ಗದಲ್ಲಿ ನೆಲೆಸುವಂತಿಲ್ಲ ಎಂದು ಕೋರ್ಟ್‌ ಷರತ್ತು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಮುರುಘಾ ಶರಣರು ಜೈಲಿನಿಂದ ದಾವಣಗೆರೆಗೆ‌ ತೆರಳಿದರು. ದಾವಣಗೆರೆಯ ಜಯದೇವ ವೃತ್ತದ ಬಳಿ ಇರುವ ಶಿವಯೋಗಿ ಮಂದಿರಕ್ಕೆ ಧಾವಿಸಿದ ಅವರು ಜಯದೇವ ಸ್ವಾಮೀಜಿ ಗದ್ದುಗೆಗೆ ನಮನ ಸಲ್ಲಿಸಿದರು.

ಅನಂತರ ಸುದ್ದಿಗಾರರೊಂದಿ ಮಾತನಾಡಿದ ಅವರು, ವಿಚಾರಣೆ ನ್ಯಾಯಾಲಯದಲ್ಲಿ ಇರುವುದರಿಂದ ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ. ಇನ್ನು ಮುಂದೆ ಒಳ್ಳೆಯದು ಮಾಡೋಣ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಎಂದರು. 

ಬಳಿಕ ದೊಡ್ಡಪೇಟೆಯಲ್ಲಿ ವಿರಕ್ತ ಮಠಕ್ಕೆ ಭೇಟಿ ನೀಡಿದರು. ಮಠಕ್ಕೆ ಬರುತ್ತಿದ್ದಂತೆ ಅವರ ಭಕ್ತರು ಮುರುಘಾ ಶರಣರಿಗೆ ಜೈಕಾರ ಹಾಕಿದರು. ಚಿತ್ರದುರ್ಗ ಪ್ರವೇಶಕ್ಕೆ ನಿರ್ಬಂಧವಿರು ಇಲ್ಲದಿರುವುದರಿಂದ ಮುರುಘಾಶ್ರೀಗಳು ಶಿವಯೋಗಿ ಮಂದಿರದಲ್ಲೇ ಉಳಿದುಕೊಳ್ಳುವ ಸಾಧ್ಯತೆ ಇವೆ.

Leave a Reply