ಕಷ್ಟದಲ್ಲೂ ಅವಕಾಶವನ್ನು ಕಂಡುಕೊಂಡ ಯಶಸ್ವಿ ಉದ್ಯಮಿ ಮೂರ್ತಿ ನಾಯಕ್: ಬಿ.ಟಿ.ಲಲಿತಾ ನಾಯಕ್

3 years ago

#MurthyNaik #successful #entrepreneur #found #opportunity #difficulties #BTLalitaNaik #Banjara

ಬೆಂಗಳೂರು: ಬಡ ಬಂಜಾರ ಸಮುದಾಯದ ಹೆಸರಾಂತ ಉದ್ಯಮಿ ಎಂ.ಎನ್ ಮೂರ್ತಿ ನಾಯಕ್ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ನಗರದ ಸಾಮ್ರಾಟ್ ಹೋಟಲಿನಲ್ಲಿಎಂ.ಎಚ್ ನಾಗರಾಜು ಬರೆದಿರುವ ‘ಸಾಧನೆಯ ಶಿಖರ ಮೂರ್ತಿ ನಾಯಕ್’ಕೃತಿಯನ್ನು ವಿಧಾನಸಭೆಯ ಉಪ ಸಭಾಧ್ಯಕ್ಷ  ರುದ್ರಪ್ಪ ಮಾನಪ್ಪ ಲಮಾಣಿ ಬಿಡುಗಡೆಗೊಳಿಸಿದರು. ಕೃತಿಕುರಿತು ಸಾಂಸ್ಕೃತಿಕ ಚಿಂತಕ ಎಲ್.ಎನ್. ಮುಕುಂದರಾಜ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಾಹಿತಿ ಬಿ.ಟಿ.ಲಲಿತಾನಾಯಕ್, ರಂಗತಜ್ಞ ಡಾ.ಎ.ಆರ್ ಗೋವಿಂದಸ್ವಾಮಿ, ಖ್ಯಾತ ಉದ್ಯಮಿ ಎಂ.ಎನ್ ನರಸಿಂಹಮೂರ್ತಿನಾಯಕ್, ಶಾಸಕರಾದ ಹೆಚ್.ನಿಂಗಪ್ಪ, ವಿಧಾನ ಪರಿಷತ್ ಪರಿಷತ್ ಸದಸ್ಯ ಪ್ರಕಾಶ್ರಾಥೋಡ್, ಮಾಜಿ ಸಚಿವ ಬಾಬುರಾವ್ಚೌಹಾಣ್, ರಾಣಿ ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರುದ್ರಪ್ಪ ಲಮಾಣಿ, ಕೃತಿಯಲ್ಲಿ ಮೂರ್ತಿ ನಾಯಕ್ ಅವರು ಅತ್ಯಂತ ಬಡತನದಿಂದ ರಸ್ತೆ ಬದಿ ವ್ಯಾಪಾರಿಯಾಗಿ, ಊರೂರುಗಳಿಂದ ಖಾಲಿ ಬಾಟಲ್ಗಳನ್ನು ಸಂಗ್ರಹಿಸಿ ತೊಳೆದು ಮಾರುತ್ತಾ ಡಿಸ್ಟಿಲರಿಗಳೆ ಇವರನ್ನುಅವಲಂಭಿಸುವಂತಾ ಸಾಧನೆ ದೊಡ್ಡದು ಎಂದರು.

ಬಿ.ಟಿ ಲಲಿತಾನಾಯಕ್ ಮಾತನಾಡಿ, ಮೂರ್ತಿ ನಾಯಕ್ ಅವರು ಓದಿದ್ದು ಎಸ್.ಎಸ್.ಎಲ್.ಸಿ ಮಾತ್ರ. ಆದರೂ ಒಬ್ಬ ಯಶಸ್ವಿ ಉದ್ಯಮಿ, ಧರ್ಮದರ್ಶಿ, ಸಿನಿಮಾ ಫೈನಾನ್ಸರ್, ಹಲವು ಉದ್ಯಮಿಗಳ ಸಂಘಟನೆಗಳ ಪದಾಧಿಕಾರಿ, ಉತ್ತಮ ತಂದೆ, ಗಂಡ, ಸಂಬಂಧಿ, ಸಮಾಜಮುಖಿ ಕೆಲಸಗಾರ ಎಂದರು.

ಪದೇಪದೇ ಕಷ್ಟಗಳು ಬಂದಾಗ, ನನ್ನ ಹಣೆಬರಹ ಸರಿ ಇಲ್ಲ ಅಂತ ಸುಮ್ಮನೆ ಕೂರದೆ ಮುಂದೆ ನನಗೋಸ್ಕರ ತುಂಬಾ ಒಳ್ಳೆಯ ದಿನಗಳು ಕಾಯುತ್ತಿವೆ ಎಂದು ತಮ್ಮ ಕಾಯಕದಲ್ಲಿಎದೆಗುಂದದೆ ಮುನ್ನುಗಿದ್ದರು, ಆಶಾವಾದಿಯಾಗಿದ್ದರು, ಕಷ್ಟದಲ್ಲೂಅವಕಾಶವನ್ನುಕಂಡುಕೊಂಡ ಯಶಸ್ವಿ ಉದ್ಯಮಿ ಎನಿಸಿದರು. ಸಹ ಹೃದಯಿ ಜನಾಂಗದಲ್ಲಿ ಮೂರ್ತಿ ನಾಯಕ್ ಸಾಧನೆ ಇತರರಿಗೆ ಮಾದರಿ ಎಂದರು.

ರಂಗತಜ್ಞ ಡಾ. ಗೋವಿಂದಸ್ವಾಮಿ ಮಾತನಾಡಿ,
“ದುಡಿಯೋನಿಗೆ ಗೊತ್ತು ಮಣ್ಣಿನ ಹಾಗೂ ಹಣದ ಬೆಲೆ
ಹೆತ್ತೋರಿಗೆಗೊತ್ತು ಹೆಣ್ಣಿನ ಬೆಲೆ
ಬಡವರಿಗೆ ಗೊತ್ತು ದುಡ್ಡಿನ ಹಾಗೂ ಊಟದ ಬೆಲೆ”
ಈ ಮೂರು ತಿಳಿದವರಿಗೆ ಗೊತ್ತು “ಜೀವನದ ಬೆಲೆ” ಅನ್ನುವ ಹಾಗೆ ಬಾಳಿದವರು ನಮ್ಮ ಈ ಎಂ.ಎನ್.ಮೂರ್ತಿ ನಾಯಕ್. ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರು ತಳ ಸಮುದಾಯಗಳು ವಿಶೇಷವಾಗಿ ದಲಿತರು, ಬುಡಕಟ್ಟುಗಳು, ಅಲೆಮಾರಿ ಸಮುದಾಯಗಳು ಶೈಕ್ಷಣಿಕವಾಗಿ ಇಂದು ಪ್ರಗತಿ ಸಾಧಿಸಿದ್ದರೂ ಕೂಡ ಕೈಗಾರಿಕೆ, ಉದ್ಯಮ ಕ್ಷೇತ್ರದಲ್ಲಿಅದರಲ್ಲೂಆರ್ಥಿಕ ಪ್ರಗತಿಯಲ್ಲಿ ಯಶಸ್ಸು ಶೂನ್ಯ. ಮಾರ್ತಿ ನಾಯಕ್ ಅಲೆಮಾರಿ, ದಲಿತರಿಗೆ ಯುವ ಶಾಸಕರಿಗೆ, ವಿದ್ಯಾರ್ಥಿಗಳಿಗೆ ಸದಾ ಸಹಾಯಹಸ್ತ ಚಾಚುವ ದಾನಿ, ಉಚಿತ ಶಾಲೆ, ಹಾಸ್ಟೆಲ್ ಮಾಡಿದ್ದಾರೆ, ವೃದ್ದಾಶ್ರಮ ಮಾಡಿದ್ದಾರೆ. ಎಂ.ಎನ್ ಮೂರ್ತಿ ನಾಯಕ್.ಇವರು ಸಣ್ಣ ಸಣ್ಣ ಕೆಲಸಗಳನ್ನೇ ‘ಒಂದು ಮನಸ್ಸಿನಿಂದ ಮಹಾನ್ ರೀತಿಯಲ್ಲಿ’ಮಾಡುತ್ತಾ ಬಂದುದರ ಫಲವಾಗಿ ಇವರಿಗೆ ಗೆಲುವು ಸಿದ್ದಿಸಿದೆ ಎಂದರು.

Leave a Reply