ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಂಚಿಕೆ ಮಾಡಿದ ಸುಮಾರು 2 ಸಾವಿರ ನಿವೇಶನಗಳಿಗೆ ಮೂಲ ದಾಖಲೆ ಇಲ್ಲದೇ ಇರುವುದು ಜಾರಿ ನಿರ್ದೇಶನಾಲಯದ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಪ್ರಾಧಿಕಾರದಿಂದ ಹಂಚಿಕೆ ಮಾಡಿರುವ 5 ಸಾವಿರ ನಿವೇಶನಗಳಲ್ಲಿ ಸುಮಾರು 2 ಸಾವಿರ ನಿವೇಶನಗಳಿಗೆ ಯಾವುದೇ ಬಾಂಡ್ ಪೇಪರ್ಗಳೇ ಇಲ್ಲದಿರುವುದು ತನಿಖೆಯಲ್ಲಿ ಪತ್ತೆಯಾಗುವ ಮೂಲಕ ಮುಡಾದಲ್ಲಿ ಬಹುದೊಡ್ಡ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ.
50:50 ಅನುಪಾತವನ್ನೇ ವರದಾನ ಮಾಡಿಕೊಂಡ ಖದೀಮರು 1950 ನಿವೇಶನಗಳನ್ನು ಪಡೆದಿದ್ದಾರೆ. 1950 ನಿವೇಗಳ ಪೈಕಿ ಒಬ್ಬೊಬ್ಬರು 30, 40, 50 ಸೈಟ್ ಪಡೆದುಕೊಂಡಿದ್ದಾರೆ. 60:40, 50:50ರ ಅನುಪಾತದಲ್ಲಿ ಒಟ್ಟು ಮುಡಾ 5 ಸಾವಿರ ಸೈಟ್ಗಳನ್ನು ಹಂಚಿಕೆ ಮಾಡಿದೆ. ಈ ಪ್ರಕರಣದ ತನಿಖೆಗೆ ಇಳಿದ ಇಡಿ ಮೂಲ ದಾಖಲೆಯನ್ನು ಹುಡುಕಿದೆ. ಈ ವೇಳೆ ಮುಡಾದಲ್ಲಿ ಈ ಆಸ್ತಿಗೆ ಸಂಬಂಧಿಸಿದಂತೆ ಬಾಂಡ್ ಪೇಪರ್ಗಳು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಮುಡಾ ಯಾವ ಮಾನದಂಡದ ಅಡಿಯಲ್ಲಿ ಈ ಸೈಟ್ ಹಂಚಿಕೆ ಮಾಡಲಾಗಿದೆ? ಈ ಸೈಟ್ಗಳನ್ನು ಪಡೆದವರ ಹಿನ್ನೆಲೆ ಏನು? ಈ ನಿವೇಶನಗಳನ್ನು ಪಡೆಯಲು ಇವರು ನೀಡಿದ ದಾಖಲೆ ಏನು ಇತ್ಯಾದಿಗಳ ವಿವರವನ್ನು ಈಗ ಇಡಿ ಕಲೆ ಹಾಕಲು ಮುಂದಾಗಿದೆ.




