ಬೆಂಗಳೂರು: ತನ್ನ ಮಗಳನ್ನು ರೂಪದರ್ಶಿ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದ ತಾಯಿಯೊಬ್ಬಳು ಮೋಸದ ಬಲೆಗೆ ಬಿದ್ದು 3.74 ಲಕ್ಷ ರೂಗಳನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ತನ್ನ ಮಗಳನ್ನು ಚಿಕ್ಕ ವಯಸ್ಸಿನಿಂದಲೇ ಮಾಡೆಲಿಂಗ್ ಮಾಡುವ ಆಸೆಗೆ ಬಿದ್ದ ತಾಯಿ ಸುಮಾ ಎಂಬುವರು ಇದಕ್ಕಾಗಿ ಹಲವರನ್ನು ಸಂಪರ್ಕಿಸುತ್ತಿದ್ದರು. ಈ ವೇಳೆ ಸಾಮಾಜಿಕ ಜಾಲತಾಣ ಒಂದರಲ್ಲಿ ನೋಡಿದ ಜಾಹೀರಾತು ನಂಬಿ 3.74 ಲಕ್ಷ ಹಣ ಕಳೆದುಕೊಂಡು ಪೊಲೀಸರ ಮೊರೆ ಹೋಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರೂಪದರ್ಶಿ ಮಾಡುವ ಕುರಿತ ಜಾಹೀರಾತನ್ನು ಸುಮಾ ನೋಡಿದ್ದರು. ಅದರಲ್ಲಿ ಲಿಟ್ಲ್ ನೆಸ್ಟ್ ಎಂಬ ಚೈಲ್ಡ್ ಮಾಡೆಲಿಂಗ್ ಲಿಂಕ್ ಫೇಸ್ ಬುಕ್‌ಪೇಜ್‌ನಲ್ಲಿ ಬಂದಿತ್ತು. ಅದನ್ನು ಕ್ಲಿಕ್ ಮಾಡಿದ ಲಿಂಕ್ ಮೂಲಕವೇ ಮಗುವಿನ ದಾಖಲಾತಿಗಳನ್ನು ಪಡೆದುಕೊಂಡಿದ್ದ ವಂಚಕರು, ಬಳಿಕ ಟೆಲಿಗ್ರಾಂ ಗ್ರೂಪ್‌ಗೆ ಸೇರಿಕೊಳ್ಳಿ ಎಂದು ಮತ್ತೊಂದು ಲಿಂಕ್ ಕಳುಹಿಸಿದ್ದರು. ಇದರ ಜೊತೆಗೆ ಕೆಲವೊಂದು ಟಾಸ್ಕ್ ನೀಡಿ ಅದಕ್ಕಾಗಿ 11 ಸಾವಿರ ರೂ. ಕಳಿಸಿ ಎಂದಿದ್ದ ಅಡ್ಮಿನ್ ನಂತರ ಈ ಹೂಡಿಕೆಗೆ ತಾವು ಗಳಿಸಿದ ಲಾಭ ಎಂದು 19 ಸಾವಿರ ವಾಪಾಸ್ ನೀಡಿದ್ದ.
ಇದಾದ ಬಳಿಕ ಸೈಬರ್ ಚೋರರು ಮಾಡಲಿಂಗ್ ಮತ್ತು ಲಾಭದ ಆಸೆ ಹುಟ್ಟಿಸಿ ಸುಮಾ ಅವರಿಂದ ಹಂತಹಂತವಾಗಿ ಮೂರು ಮುಕ್ಕಾಲು ಲಕ್ಷ ಹಣ ದೋಚಿದ್ದಾರೆ. ಸದ್ಯ ಮೋಸ ಹೋಗಿರುವುದು ತಿಳಿದ ಮಹಿಳೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಸಿದ್ದಾರೆ.




