ಇಸಮುದ್ರದಲ್ಲಿ ಭೀಕರ ಕೃತ್ಯ: ಅತ್ಯಾಚಾರ ಎಸಗಿ ಹತ್ಯೆ: ಆರೋಪಿ ಬಂಧನಕ್ಕೆ ಒತ್ತಾಯ

5 years ago

ಚಿತ್ರದುರ್ಗ: ಭರಮಸಾಗರ ಹೋಬಳಿ ಇಸಮುದ್ರ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿ ಶಶಿಕಲಾ (13) ಮೇಲೆ ಅಮಾನವೀಯವಾಗಿ ದೃಷ್ಕೃತ್ಯ ಎಸಗಿರುವ ಆರೋಪಿ ಹಾಡುಹಗಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಭೀಕರ ಘಟನೆ  ಶುಕ್ರವಾರ (23-7-2021ರಂದು) ಊರಿನ ಪಕ್ಕದ ಜಮೀನಿನಲ್ಲಿ ನಡೆದಿದೆ.

ಇದು ಎಂತಹ ಅಮಾನವೀಯ ಕೃತ್ಯವೆಂದರೆ ಇಂತಹ ಘಟನೆಗಳನ್ನು ದೂರದ ಉತ್ತರ  ಪ್ರದೇಶವೋ, ಬಿಹಾರವೋ ಅಂದುಕೊಂಡಿದ್ವಿ. ಆದರೆ ನಮ್ಮದೇ ತಾಲ್ಲೂಕಿನಲ್ಲಿ ನಡೆದಿರುವುದು ನೋಡಿದರೆ, ಎಂತಹವರ ಹೃದಯವೂ  ಛಿದ್ರಛಿದ್ರವಾಗುತ್ತದೆ.

ಗ್ರಾಮದಿಂದ ಕೂಗಳತೆ ದೂರ ಅಷ್ಟೇ, ಅಷ್ಟೇನೂ ಬೆಳೆಯದ ಮೆಕ್ಕೆಜೋಳದ ಬೆಳೆ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮೃತ್ಯಪಾಶವಾಗಿದ್ದು, ಇಡೀ ಗ್ರಾಮವೇ  ತಲೆತಗ್ಗಿಸುವ ವಿಚಾರವಾಗಿದೆ.

ಶಶಿಕಲಾ ಪ್ರಾಥಮಿಕ ಶಾಲೆಯಲ್ಲಿ ಡ್ಯಾನ್ಸ್, ಹಾಡು, ಟಿಕ್ ಟಾಕ್ ಮೊದಲಾದೆಡೆ ಪ್ರತಿಭೆ ತೋರಿದ್ದಳು. ಕಿರಿಯ ವಯಸ್ಸಿನ  ಶಶಿಕಲಾ  ಪ್ರಶಸ್ತಿ, ಪುರಸ್ಕಾರ  ಪಡೆದುಕೊಂಡ  ಪ್ರತಿಭಾನ್ವಿತ ವಿದ್ಯಾರ್ಥಿನಿ. ಈ ವಿಷಯದ ಕುರಿತು ಆಕೆಗೆ ಟ್ಯೂಷನ್ ಹೇಳಿಕೊಟ್ಟು ಆಗಾಗ್ಗೆ ಬುದ್ಧಿವಾದ ಹೇಳುತ್ತಿದ್ದ ಹೈಸ್ಕೂಲ್ಕ್ ಶಿಕ್ಷಕ ಹಾಲೇಶಪ್ಪ ಅವರು ಭಾರವಾದ ಮನಸ್ಸು ತುಂಬ ನೋವು ತುಂಬಿಕೊಂಡೇ ಮಾತನಾಡುತ್ತಿದ್ದರು. ಅತ್ಯಾಚಾರ  ಮತ್ತು ಹತ್ಯೆಗೀಡಾದ ಶಶಿಕಲಾ ತಂದೆ, ತಾಯಿಯ ನೋವಂತು ಹೇಳತೀರದಾಗಿತ್ತು.

ಬಯಲು ಬಹಿರ್ದೆಸೆಯೇ ಮೃತ್ಯುಗೆ ಕಾರಣವಾಯಿತೆ?

ನಿರಂತರವಾಗಿ ಬರುತ್ತಿದ್ದ ಮಳೆಯಿಂದಾಗಿ ಶೌಚಾಲಯವಿಲ್ಲದ ಮನೆಯಾದ್ದರಿಂದ ಬಹಿರ್ದೆಸೆಗೆ ಬಯಲನ್ನೇ ಅಶ್ರಯಿಸಬೇಕಾಗಿತ್ತು. ಮಧ್ಯಾಹ್ನವಾಗಿತ್ತು. ಮಳೆ ಬರುತ್ತಿತ್ತು. ಬಯಲು ಬಹಿರ್ದೆಸೆಗೆ ಹೋದ ಬಾಲಕಿ ಶಶಿಕಲಾ  ಬಹಳ ಹೊತ್ತಾದರೂ ಬಾರದೆ ಇರುವುದರಿಂದ  ಆಸ್ಪತ್ರೆಯಿಂದ ಬಂದ ತಾಯಿ, ತಂದೆ ಮಗಳನ್ನು ಹುಡುಕಿ ಮೆಕ್ಕೆಜೋಳದ ಜಮೀನು ಕಡೆ ಹೋದಾಗ, ಅಲ್ಲಿ ನೋಡಿದರೆ ಹೆತ್ತ ತಾಯಿಯ ಹೃದಯವೇ ಕಿತ್ತು ಬರುವಂತಹ ದೃಶ್ಯ. ತಾಯಿ ಬಾಯಿ, ಬಾಯಿ ಬಡಿದುಕೊಂಡರು ಸಾವಿನ ದವಡೆಗೆ ಹೋದ  ಮಗಳನ್ನು  ಕಂಡು ಅಳಲು ಆರಂಭಿಸಿ ಜನರನ್ನು ಕೂಗಿ ಕರೆದರು. ಮೃತಪಟ್ಟಿದ್ದ ಮಗಳು ವಾಪಸು ಬರಲು ಸಾಧ್ಯವೇ? ಹೇಗೆ ಸಾಧ್ಯ ಹೇಳಿ?

ಶಶಿಕಲಾ  ಮೇಲೆ ನಡೆದಿರುವ  ಅಮಾನವೀಯ ಅತ್ಯಾಚಾರ  ಮತ್ತು  ಭೀಕರ ಕೊಲೆಯಂತಹ ಘಟನೆಗಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡುತ್ತಿವೆ. ಆದಾಗ್ಯೂ  ಪೊಲೀಸ್  ಇಲಾಖೆ, ಅವರದೇ ಆದ ಕಾರ್ಯದಲ್ಲಿ  ತೊಡಗಿಸಿಕೊಂಡು ಆರೋಪಿಯನ್ನು ಬಂಧಿಸಲು ತಲಾಶ್ ನಡೆಸಿದ್ದರು?

ಚಿತ್ರ ಡಾನ್ ಬಾಸ್ಕೋ ಸಂಸ್ಥೆಯ ಕಳಕಳಿ

ಅತ್ಯಾಚಾರ ಮತ್ತು ಹತ್ಯೆಗೀಡಾದ ಶಶಿಕಲಾ ಅಪ್ರಾಪ್ತ ವಯಸ್ಸಿನ ಬಾಲಕಿಯ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದವರು ಚಿತ್ರ ಡಾನ್ ಬಾಸ್ಕೋ ಸಂಸ್ಥೆಯ ಸಿಬ್ಬಂದಿ. ನ್ಯಾಯಕ್ಕಾಗಿ  ಹೋರಾಟ ನಡೆಸುವ ಮಾತುಗಳನ್ನಾಡಿದರು.

ಚಿತ್ರ ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕ ಫಾದರ್ ಜೋಸೆಫ್, ವೀಣಾ, ಮಂಜುನಾಥ್, ಮಹಾಂತೇಶ್, ಬೋಮ್ಮಣ್ಣ, ಕರ್ನಾಟಕ ಶಾಂತಿ & ಸೌಹಾರ್ದ  ವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್  ಮುಂತಾದವರು  ಹಾಜರಿದ್ದರು.

Leave a Reply