ಕೋಟ್ಯಾಂತರ ಭಾರತೀಯರನ್ನು ತಲುಪುತ್ತಿರುವ ಧ್ರುವ ರಾಠಿ ವೀಡಿಯೋ ದೊಡ್ಡ ಚರ್ಚೆ, ಅಚ್ಚರಿಗೆ ಕಾರಣವಾಗಿದೆ. ಚುನಾವಣಾ ಪ್ರಚಾರ ಸಭೆಗಳಲ್ಲಿ “ನರೇಂದ್ರ ಮೋದಿ (ಆಡಳಿತದ) ವಿರುದ್ದ ಮಾತಾಡಬಾರದು, ಅದರಿಂದ ಮತಗಳಿಗೆ ಹೊಡೆತ ಬೀಳುತ್ತದೆ” ಎಂಬ ವಾದ ಮಂಡಿಸುವ ಟಿಪಿಕಲ್ ರಾಜಕಾರಣಿಗಳು, ಗೋಡೆಯ ಮೇಲೆ ಕುಳಿತವರು, ಹಾಗೆಯೆ ನೇರವಾಗಿ ಮಾತಾಡಲು ಧೈರ್ಯ ಸಾಲದ ಸಾಂಸ್ಕೃತಿಕ ಲೋಕದವರು ನರೇಂದ್ರ ಮೋದಿ ದುರಾಡಳಿತವನ್ನೇ ನೇರವಾಗಿ ಗುರಿಯಾಗಿಸಿರುವ ಧೃವ ರಾಠಿಯ ವೀಡಿಯೋಗಳನ್ನು ಜನ ಮುಗಿ ಬಿದ್ದು ನೋಡುತ್ತಿರುವುದನ್ನು ಅರ್ಥೈಸಲಾಗದೆ ಅಚ್ಚರಿ ವ್ಯಕ್ತ ಪಡಿಸುತ್ತಿದ್ದಾರೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಗೋಡೆಯ ಮೇಲಿನ ಬರಹ ಸ್ಪಷ್ಟವಾಗಿದೆ. ಜನರು ಮೋದಿ ಆಳ್ವಿಕೆಯಿಂದ ರೋಸಿ ಹೋಗಿದ್ದಾರೆ. ಅವರಿಗೆ ಈಗಿನ ಸರ್ವಾಧಿಕಾರಿ ಕಾರ್ಪೊರೇಟ್ ಪ್ರಭುತ್ವವನ್ನು ಧೈರ್ಯದಿಂದ ನೇರವಾಗಿ ಎದುರಿಸುವವರು ಬೇಕು. ಆ ಕುರಿತು ನಾಡಿನ ಜನಪರರು ಮುಂದಡಿ ಇಡಲು ಇದು ಸಕಾಲ.
ಫ್ಯಾಸಿಸ್ಟ್ ಬಿಜೆಪಿ ಸೋಲಿಸಲು “ಯಾವ ಕಡೆಗೂ ಸಲ್ಲುವ, ಮೋದಿ ಬಳಗದ ಆವೇಶಕ್ಕೆ ಬೆದರುವ” ಅವಕಾಶವಾದಿ ರಾಜಕಾರಣಿ, ಪಕ್ಷಗಳನ್ನು ಸದ್ಯ ಬೆಂಬಲಿಸುವುದು ಅನಿವಾರ್ಯವಾದರೂ, ಚುನಾವಣಾ ಸ್ಪರ್ಧೆಗೆ ಸೈದ್ದಾಂತಿಕ ಸ್ಪಷ್ಟತೆ ನೀಡಲು ನಾವೆಲ್ಲ ಜೊತೆಯಾಗಿ ದುಡಿಯಬೇಕಿದೆ. ಚುನಾವಣೆಯ ನಂತರವಂತೂ ಈಗಿನ ಕಾರ್ಪೊರೇಟ್ ಪ್ರಭುತ್ವದ ಎದುರಾಗಿ ಈ ಅವಕಾಶವಾದಿ ರಾಜಕಾರಣದ ಬದಲಿಗೆ ಸ್ಪಷ್ಟ ಅಜೆಂಡಾ, ಸೈದ್ದಾಂತಿಕ ತಿಳುವಳಿಕೆಯೊಂದಿಗೆ ದೊಡ್ಡದಾದ ಮೂಮೆಂಟ್ ಕಟ್ಟಲು ಮುಂದಾಗಬೇಕಿದೆ. ಭಾರತದ ಜನ ಸಮೂಹ ಅದನ್ನು ಬಯಸುತ್ತಿದೆ. ನಿರ್ವಾತವನ್ನು ತುಂಬುವುದು ಆಗಲೇಬೇಕಾದ ಕರ್ತವ್ಯ. ಧೃವ ರಾಠಿ ವೀಡಿಯೋಗೆ ದೊರಕುತ್ತಿರುವ ಭರ್ಜರಿ ಸ್ವೀಕೃತಿ ನೀಡುತ್ತಿರುವ ಸಂದೇಶ ಅದು. ಮೋದಿ, RSS, ಕಾರ್ಪೊರೇಟ್ ಕೂಟ ಸೋಲಿಸಲಾಗದ ಅಭೇದ್ಯ ಶಕ್ತಿ ಏನಲ್ಲ, ಅದು ಕುಸಿಯಲು ಸಿದ್ದಗೊಂಡಿರುವ ಕೋಟೆ. ಇಂಕ್ವಿಲಾಬ್ ಜಿಂದಾಬಾದ್.
- ಮುನೀರ್ ಕಾಟಿಪಳ್ಳ, ಸಾಮಾಜಿಕ ಹೋರಾಟಗಾರರು



