ಹಿಂದುತ್ವವಾದಿಗಳಿಗೆ ಅಥಾವ ಮೋದಿ ಭಕ್ತರಿಗೆ ಒಂದು ಆತಂಕ ಏನು ಎಂದರೆ, ಮುಸ್ಲಿಂ ಬಹುಸಂಖ್ಯಾತರು ಆದ ಪಕ್ಷದಲ್ಲಿ ನಮ್ಮ ಹಿಂದೂಗಳ ಮೇಲೆ ದೌಜನ್ಯ ನಡೆಯುತ್ತದೆ. ಆ ರೀತಿ ಆಗಬಾರದು ಎನ್ನುವುದಾದರೆ ಮೋದಿ ಈ ದೇಶಕ್ಕೆ ಬೇಕು ಎಂಬುವುದು. ಯಾವುದೇ ಧರ್ಮದವರು ಬಹುಸಂಖ್ಯಾತರು ಆಗಿದ್ದ ಪಕ್ಷದಲ್ಲಿ ಅಲ್ಪಸಂಖ್ಯಾತರ ಮೇಲೆ ದೌಜನ್ಯ ನಡೆಯುತ್ತದೆ ಎಂಬುವುದು ನಿಜ. ಹಾಗದರೆ ಈಗ ಹಿಂದೂಗಳು ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದೌಜನ್ಯ ನಡೆಯುತ್ತಿದೆಯಾ? ಇಲ್ಲ ತಾನೇ?
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಅದೇ ರೀತಿ ಈಗ ಯಾವ ರಾಜ್ಯದಲ್ಲಿ ಹಿಂದುತ್ವ ಪಕ್ಷ ಆಡಳಿತದಲ್ಲಿ ಇದೆಯೊ ಅಲ್ಲಿ ಸಹಾ ಅಲ್ಪಸಂಖ್ಯಾತರ ಮೇಲೆ ದೌಜನ್ಯ ನಡೆಯುತ್ತಿದೆ. ಅದೇ ರೀತಿ ಎಲ್ಲಿ ಮುಸ್ಲಿಂ ಬಹುಸಂಖ್ಯಾತರು ಆಗಿದ್ದಾರೊ ಅಲ್ಲಿ ಸಹಾ ಅಲ್ಲಿನ ಅಲ್ಪಸಂಖ್ಯಾತರ ಮೇಲೆ ದೌಜನ್ಯಗಳು ನಡೆದಿರಬಹುದು. ಆದರೆ ಯಾರು ದೌಜನ್ಯಗಳನ್ನು ಮಾಡುತ್ತಿದ್ದಾರೊ ಅವರೆಲ್ಲಾ ಆಯಾ ಮೂಲಭೂತವಾದಿಗಳ ಬೆಂಬಲಿಗರೇ ಹೊರತು ಜಾತ್ಯತೀತ ನಿಲುವುಗಳನ್ನು ಹೊಂದಿರುವ ವ್ಯಕ್ತಿಗಳಲ್ಲ. ಇವರೆಲ್ಲರೂ ಮನುಷ್ಯತ್ವ ಹೊಂದಿರುವ ವ್ಯಕ್ತಿಗಳು ಅಲ್ಲಾ ಎಂದೂ ತಿಳಿದುಕೊಳ್ಳಬೇಕಾಗುತ್ತದೆ.
ಇನ್ನೊಂದು ವಿಷಯ ತಿಳಿದುಕೊಳ್ಳಬೇಕು, ಇತ್ತೀಚೆಗೆಷ್ಟೆ,ಇಂತ ಅನಿಸಿಕೆಗಳು ಹೆಚ್ಚಾಗುತ್ತಿರುವುದು ಇಡೀ ದೇಶದಲ್ಲಿ ಎಲ್ಲಾ ಕಡೇಯು ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರ ದೌರ್ಜನ್ಯಗಳು ಕಂಡು ಬರುತ್ತಿಲ್ಲ. ಇಲ್ಲಿ ಇನ್ನೊಂದು ಪ್ರಶ್ನೆ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದೌಜನ್ಯಗಳಿಗಿಂತ ಅಥಾವ ಅಲ್ಪಸಂಖ್ಯಾ ರಿಂದ ಬಹುಸಂಖ್ಯಾತ ಮೇಲೆ ಆಗುತ್ತಿರುವ ದೌರ್ಜನ್ಯ ಸಂಖ್ಯೆ ಹೆಚ್ಚಳಕ್ಕಿಂತ ಹಿಂದೂ ಧರ್ಮದ ಮೇಲ್ವರ್ಗದ ಜನಗಳಿಂದ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ದೇಶದಲ್ಲಿ ನಿತ್ಯ ಕಾಣುತ್ತವೆ. ಆದರೆ ಹಿಂದೂತ್ವವಾದಿಗಳಿಗೆ ಅಲ್ಪಸಂಖ್ಯಾತರ ಮಾಡುವ ದೌರ್ಜನ್ಯಗಳು ಮಾತ್ರ ಕಾಣುತ್ತವೆ ಎಂಬುವುದು ವಿಪರ್ಯಾಸ. ಇನ್ನು ಹೇಳಬೇಕಾದರೆ ಒಂದು ಹಳ್ಳಿಯಲ್ಲಿ ಮೇಲ್ವರ್ಗ ಬಹುಸಂಖ್ಯಾತರು ಇರುವ ಹಳ್ಳಿಗಳಲ್ಲಿ ಅತಿಶೂದ್ರರು ಅನುಭವಿಸುವ ದೌಜನ್ಯಗಳು ಹಿಂದುತ್ವವಾದಿಗಳಿಗೆ ಲೆಕ್ಕ ಇಲ್ಲ.
ಮುಸ್ಲಿ೦ ದೇಶದಲ್ಲಿ ಬಹುಸಂಖ್ಯಾತರು ಆಗುತ್ತಾರೆ ಎಂಬ ಕಾಲ್ಪನಿಕ ಲೆಕ್ಕವನ್ನು ಸೃಷ್ಟಿಸಿ ಇದನ್ನೆ ದೊಡ್ಡದು ಮಾಡಿ ಭೀತಿ ಸೃಷ್ಟಿಸಿ ದೇಶ ಆಳುವ ಗುರಿಯನ್ನು ಮನುವಾದಿಗಳು ಮಾಡುತ್ತಿದ್ದಾರೆ. ದೇಶದ ಹಲವು ಲೇಖಕರು ಜನಸಂಖ್ಯೆಯ ವೈಜ್ಞಾನಿಕ ವಿವರಣೆ ನೀಡಿದರು ಸಹಾ ಈ ಮನುವಾದಿಗಳು ಮಾತ್ರ ಅಲ್ಪಸಂಖ್ಯಾತರು (ಮುಸ್ಲಿಂರು ) ಬಹುಸಂಖ್ಯಾತರು ಆಗುತ್ತಾರೆ ಎಂಬ ಭ್ರಮೆಯನ್ನು ಸೃಷ್ಟಿ ಮಾಡುವುದನ್ನು ನಿಲ್ಲಿಸಿಲ್ಲ. ಅದೇ ರೀತಿ ಅವರಿಂದ ಹಿಂದೂಗಳ ಮೇಲೆ ದೌಜನ್ಯ ನಡೆಯುತ್ತದೆ ಎಂಬ ಕಥೆಗಳನ್ನೆ ಹೇಳುತ್ತಿದ್ದಾರೆ.
ಮಣಿಪುರದಲ್ಲಿ ಕುಕಿ ಹಾಗೂ ಮೈತಿ ಜನರ ಮಧ್ಯ ಬೆಂಕಿ ಹಚ್ಚಿದ ಮೋದಿ ಸರ್ಕಾರವನ್ನು ಮೋದಿ ಭಕ್ತರು ಸಮರ್ಥನೆ ಮಾಡಿಕೊಳ್ಳುತ್ತಲೇ ಕಥೆಗಳನ್ನು ಇನ್ನೂ ಹೇಳುತ್ತಲೇ ಇದ್ದಾರೆ. ಇದಕ್ಕೆ ಏನು ಹೇಳಬೇಕು? ಅವರ ಮನಸ್ಥಿತಿ ಮನುವಾದಿಗಳಿಂದ ಬೆಳೆದಿದೆ.
ಮೋದಿ ಸರ್ಕಾರ ದೇಶದಲ್ಲಿ ಜನಸಾಮಾನ್ಯರಿಗೆ/ ಮಧ್ಯಮ ವರ್ಗಕ್ಕೆಅನುಕೂಲವಾಗುವಂತಹ ಯೋಜನೆಗಳನ್ನು ತರುವುದಕ್ಕಿಂತ ಶ್ರೀಮಂತರಿಗೆ ಅನುಕೂಲವಾಗುವ ಯೋಜನೆಗಳನ್ನು ತರುತ್ತಿರುವ ಕಾರಣ ಮೋದಿ ಭಕ್ತರಿಗೆ ದೇಶ ಅಭಿವೃದ್ಧಿ ಕಾರಣ ಎಂದೂ ಹೆಮ್ಮೆ ಪಡುತ್ತಿದ್ದಾರೆ. ಪ್ಯಾಸೆಂಜರ್ ರೈಲುಗಳನ್ನು ನಿಲುಗಡೆ ಮಾಡಿ ಬುಲೆಟ್ ಟ್ರೈನ್ ಬಿಡುವುದು ಯಾತ್ರಿ ಸ್ಥಳಗಳಿಗೆ ರೈಲು ಬಿಡುವುದು ದೇಶದ ಪ್ರಗತಿ ಎಂದೂ ಭಾವಿಸಿದ್ದಾರೆ. ಆದರೆ ಜನ ಸಾಮಾನ್ಯರಿಗೆ ಆಗುವ ಆನಾನುಕೂಲ ಇವರಿಗೆ ಕಾಣುವುದಿಲ್ಲ.
ದೆಹಲಿಯಲ್ಲಿ ರೈತರು ಹಲವು ಬೇಡಿಕೆಗಳನ್ನು ಇಟ್ಟು ಹೋರಾಟ ಮಾಡಿದ್ದರೆ ಇವರಿಗೆ ಬೇಡಿಕೆಗಳನ್ನು ಈಡೇರಿಸಲು ಮನಸ್ಸು ಇಲ್ಲದೆ ದೇಶದ್ರೋಹ ಪಟ್ಟ ಕಟ್ಟುವುದು. ಕಾರ್ಪೊರೆಟ್ ಕುಳಗಳಿಗೆ ಅನುಕೂಲವಾಗುವಂತೆ ಮಾರುಕಟ್ಟೆ ನಿಯಮಗಳನ್ನು ಮೋದಿ ಸರ್ಕಾರ ತಂದರೂ ಮೋದಿ ಭಕ್ತರಿಗೆ ರೈತರ ಸಮಸ್ಯೆಗಳು ಕಾಣುವುದಿಲ್ಲ. ಇದಕ್ಕೆ ಬೇರೆ ಕಥೆ ಕಟ್ಟುತ್ತಾರೆ.
ಮೋದಿ ಸರ್ಕಾರ ಚುನಾವಣೆಯಲ್ಲಿ ಗೆಲ್ಲಲು ಎಲೆಕ್ಷನ್ ಬಾಂಡುಗಳನ್ನುತಮ್ಮ ಪಕ್ಷಕ್ಕೆ ಕೋಟಿಗಟ್ಟಲೆ ಹರಿದು ಬರಲು ಹಲವು ಕಂಪನಿಗಳಿಗೆ ಕಾಮಗಾರಿ ನೀಡಿ ಕಳಪೆ ಕಾಮಾಗಾರಿಗಳನ್ನು ಮಾಡಲು ಅವಕಾಶ ನೀಡಿದರು. ಕಳಪೆ ಔಷಧಿ ಕಂಪನಿಗಳನ್ನು ನಡೆಸುವುವರಿಂದ ಚುನಾವಣಾ ಬಾಂಡ್ ಪಡೆದುಕೊಂಡಿದ್ದರು. ಮೋದಿಯಿಂದಲೇ ದೇಶ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದಾರೆ. ಮೋದಿ ಭಕ್ತರ ಭ್ರಮೆಗಳು ಇಷ್ಟೆ ಅಂತಾ ಹೇಳಲು ಸಾಧ್ಯವಿಲ್ಲ.
- N.S. ಈಶ್ವರಪ್ರಸಾದ್, ನೇರಳೇಕೆರೆ, ಮಧುಗಿರಿ ತಾಲೂಕು




