ಶಾಸಕರು ಹಾದಿಬೀದಿಯಲ್ಲಿ ಹೋಗುವವರು ಮಾತನಾಡುವಂತೆ ಮಾತನಾಡಬಾರದು: ಎಚ್.ಸಿ. ಬಾಲಕೃಷ್ಣ

2 years ago

ಬೆಂಗಳೂರು: ಯಾರೊ ತಮ್ಮ ಬಾಯಿ ಚಪಲ ಹಾಗೂ ತೀಟೆಗೋಸ್ಕರ ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡುತ್ತಾರೆ. ಶಾಸಕರು ಸಹ ಹಾದಿಬೀದಿಯಲ್ಲಿ ಹೋಗುವವರು ಮಾತನಾಡುವಂತೆ ಮಾತನಾಡಬಾರದು ಎಂದು ಶಾಸಕ ಶಾಸಕ ಎಚ್.ಸಿ. ಬಾಲಕೃಷ್ಣ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಪಕ್ಷದ ಹಿರಿಯ ನಾಯಕರು, ಮಂತ್ರಿಗಳುಕಾರ್ಯಕರ್ತರ ಅಭಿಪ್ರಾಯಕ್ಕೆ ಗೌರವ ಕೊಡಬೇಕು. ಅವರ ಮನಸ್ಸಿಗೆ ನೋವಾಗದಂತೆ, ಧಕ್ಕೆಯಾಗದಂತೆ ಮುಖಂಡರು ನಡೆದುಕೊಳ್ಳಬೇಕು ಎಂದರು.

ನಾವುಗಳು, ಯಾರನ್ನೂ ಮುಖ್ಯಮಂತ್ರಿ ಮಾಡೋಕೆ ಆಗಲ್ಲ, ಇಳಿಸೋಕು ಆಗಲ್ಲ. ನಮ್ಮದೇ ಪಕ್ಷದ ತತ್ವ- ಸಿದ್ದಾಂತ ಹಾಗೂ ಹೈಕಮಾಂಡ್ ಇದೆ. ಸಿ.ಎಂ ಸ್ಥಾನದ ಬಗ್ಗೆ ಅವರು ತೀರ್ಮಾನ ಮಾಡುತ್ತಾರೆ. ಅದು ಬಿಟ್ಟು ಹಾದಿಬೀದಿಯಲ್ಲಿ ಮಾತನಾಡುವುದು ಸೂಕ್ತವಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರ ಕೇವಲ ಮಾಧ್ಯಮ ಸೃಷ್ಟಿ. ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ. ಬದಲಿಗೆ, ಪಕ್ಷ ಬಲವರ್ಧನೆ ಕುರಿತು ಚರ್ಚೆಯಾಗಿದೆ.ಅಧ್ಯಕ್ಷ ಸ್ಥಾನ ಮತ್ತು ಸಿ.ಎಂ ಬದಲಾವಣೆ ಬಗ್ಗೆ ಹೈಕಮಾಂಡ್ ತಿರ್ಮಾನ ಮಾಡಲಿದೆ ಎಂದರು.

Leave a Reply