ಮಂಗಳೂರು: 2010 ರಲ್ಲಿದ್ದ ತಾಯಿ, ಶಿಶು ಮರಣದ ಅನುಪಾತ 59% ದಿಂದ ಇಂದು 16% ಇಳಿಸಿದ ಕೀರ್ತಿ ಆಶಾ ಕಾರ್ಯಕರ್ತೆಯರದ್ದು. ಆದರೆ ಸರಕಾರ ತನ್ನ ಎದೆಯನ್ನು ತಾನು ತಟ್ಟಿಕೊಳ್ಳುತ್ತದೆಯೇ ವಿನಃ. ಈ ಬೆಳವಣಿಗೆಗೆ ಕಾರಣರಾದ ಆಶಾ ಕಾರ್ಯಕರ್ತೆಯರ ಬದುಕಿನ ಭದ್ರತೆಗಾಗಲಿ, ಅವರಿಗೆ ಕನಿಷ್ಠ ವೇತನ ನೀಡುವ ಬಗ್ಗೆಯಾಗಲಿ ಯೋಚಿಸದ ಸರಕಾರದ ಕಾರ್ಮಿಕ ವಿರೋಧಿ ನಡೆಯನ್ನು ಖಂಡಿಸಿ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಜಾರಿಗೆ ಹೋರಾಟ ನಡೆಸಲು ಆಶಾ ಕಾರ್ಯಕರ್ತೆಯರು ಸಿದ್ಧರಾಗಬೇಕು ಎಂದು ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘ ರಿ (ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಮಂಗಳೂರು ನಾಸಿಕ್ ಬಂಗೇರ ಭವನದಲ್ಲಿ ನಡೆದ ಸಿಐಟಿಯು ನೇತೃತ್ವದಲ್ಲಿ ನಡೆದ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತಾಡಿದ ಅವರು, ಸರಿಯಾದ ವೇತನ, ಗ್ರಾಚ್ಯುಟಿ ಮೊದಲಾದ ಸವಲತ್ತು ಪಡೆಯಲು ಸಿಐಟಿಯು ಸಂಘಟನೆ ಕಟ್ಟುವುದು ಆಶಾ ಕಾರ್ಯಕರ್ತೆಯರಿಗೆ ಅಗತ್ಯವಿದೆ ಎಂದರು.
ಇಂದು ಅಂಗನವಾಡಿಯವರಿಗೆ ವೇತನ ಹೆಚ್ಚಳ. ಗ್ರಾಚ್ಯವಿಟಿ ದೊರೆಯಲು, ಬಿಸಿಯೂಟ ನೌಕರರಿಗೆ ನಿವೃತ್ತಿ ಸಮಯ ಇಡುಗಂಟು ಸಿಗಲು ಸಿಐಟಿಯುನ ಸಂಘಟಿತ ಹೋರಾಟವೇ ಕಾರಣ ಎಂಬ ಸತ್ಯವನ್ನು ಆಶಾ ಕಾರ್ಯಕರ್ತೆಯರು ಎಂದರು.
ದುಡಿಮೆಗೆ ತಕ್ಕ ಮತ್ತು ಬದುಕಲು ತಕ್ಕ ವೇತನ ನೀಡಬೇಕಾದ್ದು ಸರಕಾರದ ಆದ್ಯ ಕರ್ತವ್ಯ. ಇದಕ್ಕಾಗಿ ಸರಕಾರ ತನ್ನ ಕರ್ತವ್ಯ ಪಾಲಿಸುವಂತೆ ಮಾಡಲು ಯಾವ ತ್ಯಾಗಮಯ ಹೋರಾಟ ನಡೆಸಲು ಸಿಐಟಿಯು ಸಿದ್ದವಿದೆ ಎಂದರು.
ಉದ್ಯಮಪತಿ ಕೋಟ್ಯಾಧೀಶರಿಗೆ ಕೇಂದ್ರ ಸರಕಾರ ಹೆಚ್ಚುವರಿ 2% ತೆರಿಗೆ ವಿಧಿಸಿದರೆ ಆಶಾ, ಅಂಗನವಾಡಿ, ಬಿಸಿಯೂಟ ನೌಕರರಿಗೆ ಮಾಸಿಕ ರೂ 25.000 ಸಂಬಳ ನೀಡಲು ಸಾಧ್ಯ. ಆದರೆ ಕೇಂದ್ರ ಸರಕಾರ ಈ ಕೋಟ್ಯಾಧಿಪತಿ ಕಾರ್ಪೊರೇಟ್ ಕಂಪೆನಿಗಳಿಗೆ 12 ಲಕ್ಷ ಕೋಟಿ ರೂ. ತೆರಿಗೆ ವಿನಾಯತಿ ನೀಡಿ ನಮ್ಮಂತಹ ದುಡಿದು ಬದುಕುವವರಿಗೆ ಸಂಬಳವನ್ನೂ ನೀಡದೆ ವಂಚನೆ ಮಾಡುತ್ತಿದೆ. ಇಂತಹ ಸರಕಾರದ ವಿರುದ್ಧ ನಮ್ಮ ಧ್ವನಿ ಮೊಳಗಬೇಕಿದೆ. ಯಾಕೆಂದರೆ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಸಿಐಟಿಯು ಎಂದೆಂದೂ ಸಹಿಸುವುದಿಲ್ಲ ಎಂದರು.
ಸಿಐಟಿಯು ಜಿಲ್ಲಾ ಉಪಾದ್ಯಕ್ಷ ಬಿ.ಎಂ.ಭಟ್ ಮಾತಾಡಿ, ನಮ್ಮ ಅಜ್ಜ, ಅಪ್ಪನ ಕಾಲದ ಅವರ ಹೋರಾಟದಿಂದ ಪಡೆದ ಕಾನೂನು ಸವಲತ್ತುಗಳ ಮುಳುಗಿಸಲು ತುದಿ ಕಾಲಲ್ಲಿ ನಿಂತಿರುವ ಸರಕಾರದ ನಡೆಯನ್ನು ಸೋಲಿಸಿ ನಮ್ಮ ಮುಂದಿನ ಪೀಳಿಗೆಗೆ ಈ ಕಾನೂನು ಸವಲತ್ತು, ಉದ್ಯೋಗ ಭದ್ರತೆ ಉಳಿಸಿ, ರಕ್ಷಿಸಿ ಬೆಳೆಸಲು ನಮಗೆ ಸಾಧ್ಯವಾಗಬೇಕು ಎಂದರು.
ಸಿಐಟಿಯು ಜಿಲ್ಲಾ ಪ್ರಧಾನಕಾರ್ಯದರ್ಶಿ ಸುನೀಲ್ ಕುಮಾರ್ ಮಾತಾಡಿ, ಸಿಐಟಿಯು ಶ್ರಮಜೀವಿಗಳ ಆಶಾ ಕಿರಣ. ಆಶಾ ಕಾರ್ಯಕರ್ತೆಯರು ಸಿಐಟಿಯು ಸಂಘ ಕಟ್ಟಿ ಹೋರಾಡುತ್ತಾ ಭದ್ರತೆಯ ಬದುಕು ಪಡೆಯಬೇಕು ಎಂದರು.
ರೈತ ಮುಖಂಡ ಯಾದವ ಶೆಟ್ಟಿ ಅವರು ಶುಭಕೋರಿ ಮಾತಾಡಿದರು. ವೇದಿಕೆಯಲ್ಲಿ ಬೆಳ್ತಂಗಡಿಯ ರೇಖಾ, ಪುತ್ತೂರು ತುಳಸಿ, ಸುಮಿತ್ರ, ವಿಟ್ಲದ ಪ್ಲೋಸಿ, ರಾಜೀವಿ, ಕಡಬದ ಜಯಂತಿ ರೈ, ಬಂಟ್ವಾಳದ ರೂಪ, ಮುತ್ತಮ್ಮ, ಮಂಗಳೂರು ಕುಸುಮ, ಮಮತ ಮೊದಲಾದ ಆಶಾ ಸಂಘಟನೆಯ ನಾಯಕರು ಮತ್ತು ಸಿಐಟಿಯು ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಈಶ್ವರಿ, ಉಷಾ ಮೊದಲಾದವರು ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆಯನ್ನು ಆಶಾ ಕಾರ್ಯಕರ್ತೆ ದೇವಕಿ ಅವರು ವಹಿಸಿದ್ದರು. ಜಿಲ್ಲಾ ಸಮಾವೇಶದಲ್ಲಿ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಮೊದಲಿಗೆ ರೇಖಾ ಸ್ವಾಗತಿಸಿ, ಕೊನೆಗೆ ಕಾರ್ಯದರ್ಶಿ ಕುಸುಮ ವಂದಿಸಿದರು. ಸಭೆಯ ಬಳಿಕ ಡಿ.ಎಚ್.ಓ. ಮೂಲಕ ಸರಕಾರಕ್ಕೆ ಬೇಡಿಕೆಗಳ ಮನವಿ ನೀಡಲಾಯಿತು.




