ರಾಜಾಜಿನಗರದಲ್ಲಿ ಸಂಭ್ರಮ, ಸಡಗರ ಗುರುರಾಯರ ರಥೋತ್ಸವ ಕಾರ್ಯಕ್ರಮ

4 years ago

ರಾಜಾಜಿನಗರದಲ್ಲಿ ಸಂಭ್ರಮ, ಸಡಗರ ಗುರುರಾಯರ ರಥೋತ್ಸವ ಕಾರ್ಯಕ್ರಮ

ಬೆಂಗಳೂರು: ರಾಜಾಜಿನಗರ ಶ್ರೀ ವಿಠ್ಠಲ ಮಂದಿರ ಟ್ರಸ್ಟ್, ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನ ಸನ್ನಿದಾನದಲ್ಲಿ ಶ್ರೀ ರಾಘವೇಂದ್ರ ಗುರು ಸೌರ್ವಭೌಮರ 351ನೇ ಆರಾಧನ ಮಹೋತ್ಸವದ ಮೂರು ದಿನದಲ್ಲಿ ಶ್ರೀ ಗುರುರಾಯರ ವೈಭವಯುತ ರಥೋತ್ಸವ ಕಾರ್ಯಕ್ರಮ ನಡೆಯಿತು.

ರಥದಲ್ಲಿ ಶ್ರೀನಿವಾಸ ದೇವರು, ಶ್ರೀ ಗುರುರಾಯರ ಮೂರ್ತಿಗಳನ್ನು ಅಲಂಕಾರದಿಂದ ಶೃಂಗಾರಗೊಳಿಸಲಾಗಿತ್ತು. ವಾದ್ಯ ತಂಡಗಳು ಮತ್ತು ದೇವರನಾಮ ಹಾಡುತ್ತಾ ರಾಜಾಜಿನಗರ ರಾಜ ಬೀದಿಗಳಲ್ಲಿ ರಥೋತ್ಸವ ಮೆರವಣಿಗೆ ಸಾಗಿತು.

ಶ್ರೀ ವಿಠ್ಠಲ ಮಂದಿರ ಟ್ರಸ್ಟ್ ವತಿಯಿಂದ ಶ್ರೀ ಗುರುರಾಯರ ಸನ್ನಿಧಾನದಲ್ಲಿ ಕಳೆದ 30ವರ್ಷಗಳಿಂದ ಶ್ರೀ ಗುರುರಾಯರ ಆರಾಧನಾ ಮಹೋತ್ಸವ ಜರುಗುತ್ತಿದ್ದು, ಈ ಬಾರಿ ಸರಿಸುಮಾರು 75 ಸಾವಿರ ಭಕ್ತಾರು ದೇವಸ್ಥಾನಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದಿದ್ದಾರೆ.

Leave a Reply