ಧಾರವಾಡ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಧಾರವಾಡ ಜಿಲ್ಲೆಯ ಹಸಿವು ಮತ್ತು ಭಯ ಮುಕ್ತ ಚಳುವಳಿಯಾಗಿರುವ ಎಸ್ಡಿಪಿಐ ಪಕ್ಷದ 2024-27 ಅವಧಿಗೆ ನಡೆದ ಆಂತರಿಕ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಬ್ರಾಂಚ್ ಪದಾಧಿಕಾರಿಗಳು ಮತ್ತು ಬ್ಲಾಕ್ ಸಮಿತಿಗಳ ಸದಸ್ಯರುಗಳ ನಾಯಕರುಗಳ ಸಭೆ ಧಾರವಾಡದಲ್ಲಿ ನಡೆಯಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಪ್ಸರ್ ಕೊಡ್ಲಿಪೇಟೆ ಯವರು ಪ್ರಸ್ತುತ ಸನ್ನಿವೇಶದಲ್ಲಿ ಪರ್ಯಾಯ ರಾಜಕಾರಣದ (Alternative politics) ಅಗತ್ಯತೆ ಮತ್ತು ಬೆಳಗಾವಿ ಜಿಲ್ಲಾದ್ಯಕ್ಷರಾದ ಮಕ್ಸೊದ್ ಮಕಾಂದಾರ್ ರವರು ಪರಿಣಾಮಕಾರಿ ನಾಯಕತ್ವ ದ ಬಗ್ಗೆ ತರಗತಿಗಳನ್ನು ನೀಡಿದರು.
ಈ ಸಂಧರ್ಭದಲ್ಲಿ ನಾಯಕರುಗಳನ್ನು ಉದ್ದೇಶಿಸಿ ಮಾತನಾಡಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ನೂತನವಾಗಿ ಆಯ್ಕೆಯಾಗಿರುವ ನಾಯಕರುಗಳು ಸ್ಥಳೀಯ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಹೋರಾಟ ಮಾಡುವ ಮೂಲಕ ಅವರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಬೇಕು ಎಂದು ಕಿವಿಮಾತು ಹೇಳಿದರು.
ಮುಂದಿನ ವರ್ಷ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ISRO) ನಡೆಸಲಿರುವ ಗಗನಯಾನದಲ್ಲಿ ಧಾರವಾಡದ ನೊಣಗಳು ತೆರಳಲಿದ್ದು, ಇಸ್ರೋದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಹಲವು ಅಧ್ಯಯನಗಳು ನಡೆಯಲಿದ್ದು, ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಸಂಶೋಧನೆ ಮತ್ತು ಫಲಿತಗಳಲ್ಲಿ ಅತ್ಯಂತ ಉತ್ತಮ ಸಾಧನೆ ಮಾಡುವ ಮೂಲಕ ದೇಶದ ಉತ್ಕೃಷ್ಟ 10 ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿರುವ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಜೀವಶಾಸ್ತ್ರ ವಿಭಾಗದ ಯುವ ವಿಜ್ಞಾನಿ ಡಾ.ರವಿ ಕುಮಾರ್ ಹೊಸಮನಿ ಮತ್ತು ತಂಡ ಶೋಧಿಸಿ ಸಿದ್ಧಪಡಿಸಿರುವ ಹಣ್ಣಿನ ನೊಣಗಳಿರುವ ಕಿಟ್ ಆಯ್ಕೆಯಾಗಿರುವುದಕ್ಕೆ ವಿಜ್ಞಾನಿಗಳ ತಂಡಕ್ಕೆ ಅವರು ಅಭಿನಂದನೆಗಳು ಸಲ್ಲಿಸಿದರು.
ದೇಶದ ಎಲ್ಲಾ 75 ಕೃಷಿ ವಿಶ್ವವಿದ್ಯಾನಿಲಯಗಳು ನೀಡಿದ ವಿವಿಧ ಮಾದರಿಗಳ ಪೈಕಿ ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಜೀವಶಾಸ್ತ್ರ ವಿಭಾಗದ ಈ ಕಿಟ್ ಆಯ್ಕೆಯಾಗಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಹಣ್ಣಿನ ನೊಣಗಳ ದೇಹ ರಚನೆಗೂ ಮಾನವ ದೇಹ ರಚನೆಗೂ ಹೋಲಿಕೆ ಇದೆ. ಶೂನ್ಯ ಗುರುತ್ವದಲ್ಲಿ ನೊಣಗಳ ದೇಹದಲ್ಲಿ ಆಗುವ ಬದಲಾವಣೆಗಳು ಮಹತ್ವದ ಮಾಹಿತಿ ಒದಗಿಸಲಿವೆ. ಇದು ಭವಿಷ್ಯದ ಮಾನವ ಸಹಿತ ಗಗನಯಾನಕ್ಕೆ ನೆರವಾಗಲಿದೆ.
ಈ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಲೀಂ ಅರಳಿಕಟ್ಟಿ , ಉಪಾಧ್ಯಕ್ಷರಾದ ಸಮೀರ್ ಬೆಟ್ಟಗೇರಿ, ಧಾರವಾಡ ನಗರ ಬ್ಲಾಕ್ ಸಮಿತಿ ಅಧ್ಯಕ್ಷ ಸಲೀಂ ಹುಲಗುರ, ಕಾರ್ಯದರ್ಶಿ ಅಲ್ತಾಪ್ ಗೋಟ್ಯಾಳ, ಜಿಲ್ಲಾ ಸಮಿತಿ ಸದಸ್ಯರಾದ ಇಸ್ಮಾಯಿಲ್ ನಾಲಬಂದ್, ರಫೀಕ್ ಲಷ್ಕರ
ಉಪಸ್ಥಿತರಿದ್ದರು.




