ತೆರಿಗೆ ಹಂಚಿಕೆ ಅಸಮಾನತೆ ವಿರೋಧಿಸಿ ಕಾಲ್ನಡಿಗೆ ಜಾಥಾ

2 years ago

ನಮ್ಮ ತೆರಿಗೆ ನಮ್ಮ ಹಕ್ಕು

ಪ್ರಿಯ ನಾಗರಿಕ ಬಂಧುಗಳೇ,

2020ರವರೆಗೆ ದಕ್ಷಿಣ ಭಾರತದ ಬೇರೆಲ್ಲ ರಾಜ್ಯಗಳಿಗಿಂತ ಕರ್ನಾಟಕಕ್ಕೆ ಹೆಚ್ಚಿನ ತೆರಿಗೆ ಕೇಂದ್ರದಿಂದ ಪಾವತಿಯಾಗುತ್ತಿತ್ತು. ಹದಿನೈದನೆಯ ಹಣಕಾಸು ಆಯೋಗದ ಮುಖಾಂತರ ಕರ್ನಾಟಕವನ್ನು ತೆರಿಗೆ ವಂಚಿತ ಮೊದಲ ರಾಜ್ಯವನ್ನಾಗಿ ಮಾರ್ಪಡಿಸಲಾಯಿತು. ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಪಾವತಿಸುವ ಮತ್ತು ಕಡಿಮೆ ಪಾಲನ್ನು ಪಡೆಯುವ ರಾಜ್ಯವಾಗಿಸಲು ಬೇಕಾದ ಮಾನದಂಡಗಳನ್ನು ಕರ್ನಾಟಕಕ್ಕೆ ನಿಗದಿಪಡಿಸಲಾಯಿತು.

ಮೋದಿ ಸರ್ಕಾರ ಬಂದ ನಂತರ ಕರ್ನಾಟಕ, ಭಾಷೆಯಿಂದ ಮೊದಲ್ಗೊಂಡು, ಎಲ್ಲ ವಿಚಾರಗಳಲ್ಲು ದಾಳಿಯನ್ನು ಎದುರಿಸುತ್ತಿದ್ದು ತೆರಿಗೆ ಮರುಪಾವತಿ ವಿಚಾರದಲ್ಲಂತು ಅತ್ಯಂತ ಘೋರವಾದ ಹೊಡೆತಕ್ಕೆ ಗುರಿಯಾಗಿದೆ. ಇದೇ ಸಂದರ್ಭದಲ್ಲಿ ಗುಜರಾತ್ ಸರ್ಕಾರ ಕೇಂದ್ರದಿಂದ ಅತಿ ಹೆಚ್ಚು ತೆರಿಗೆ ಹಣವನ್ನು ಪಡೆಯುವ ರಾಜ್ಯವಾಗಿ ಮಾರ್ಪಟ್ಟಿದೆ. ಕರ್ನಾಟಕ ಸಂಗ್ರಹಿಸಿದ ತೆರಿಗೆ ಹಣ 14.04 ಲಕ್ಷ ಕೋಟಿಗಳಾಗಿದ್ದರೆ ಅದಕ್ಕೆ ಪ್ರತಿಯಾಗಿ ಸಿಕ್ಕ ತೆರಿಗೆ ಆದಾಯ ಕೇವಲ 1.56 ಲಕ್ಷ ಕೋಟಿಗಳು. ಅದೇ ಗುಜರಾತ್ ಸರ್ಕಾರ 7.39 ಲಕ್ಷ ಕೋಟಿ ಸಂಗ್ರಹಿಸಿ ಮರಳಿ 1.51 ಲಕ್ಷ ಕೋಟಿ ಮೊತ್ತದ ತೆರಿಗೆಯನ್ನು ಹಿಂಪಡೆದಿದೆ. ಗುಜರಾತಿನ ಪಾಲು 51% ಏರಿಕೆಯಾಗಿದೆ. ಇದಾ ಮೋದಿ ಸರ್ಕಾರ ಚುನಾವಣಾ ಸಮಯದಲ್ಲಿ ಎಲ್ಲೆಡೆ ಬಿಂಬಿಸಿದ ಗುಜರಾತ್ ಮಾದರಿ? ಈ ಮಾದರಿಯನ್ನು ಬೇರೆ ರಾಜ್ಯಗಳಿಗೇಕೆ ಅನ್ವಯಿಸುತ್ತಿಲ್ಲ ಮೋದಿ ಸರ್ಕಾರ?

ಭಾರತದ ಅಭಿವೃದ್ಧಿಯ ಮಾಡಲ್ ಎಂದು ಗುಜರಾತನ್ನು ಬಿಂಬಿಸಿದ ಮೋದಿ ಮತ್ತವರ ಪಟಾಲಂ ಈಗಾಗಲೆ ಅಭಿವೃದ್ಧಿ ಹೊಂದಿದ್ದ! ರಾಜ್ಯಕ್ಕೇ ಅಗಾಧ ಪ್ರಮಾಣದಲ್ಲಿ ದೇಶದ ಇತರೆ ರಾಜ್ಯಗಳಿಗೆ ಸೇರಿದ ಸಂಪತ್ತನ್ನೆಲ್ಲ ಕ್ರೋಢೀಕರಿಸಿ ಸುರಿಯುತ್ತಿರುವುದರ ಹಿಂದಿನ ಉದ್ದೇಶವೇನು? ತೆರಿಗೆಯ ಹಕ್ಕು ಗುಜರಾತಿಗಳಿಗೆ ಮಾತ್ರ ಸೇರಿದ್ದೆ? ಹಾಗಿದ್ದರೆ ಅದಕ್ಕೆ ಕಾರಣವೇನು? ಕನ್ನಡಿಗರು ದೇಶಕ್ಕೆ ಮಾಡಿದ ದ್ರೋಹವದೇನು? ಈ ಸರ್ಕಾರಕ್ಕೆ ಮತ ನೀಡಿದ್ದೇ ಕನ್ನಡಿಗರ ತಪ್ಪೆ?

ಕರ್ನಾಟಕ ಸರ್ಕಾರ ಹಾಗೂ ವಿವಿಧ ಜನಚಳುವಳಿಗಳು ನಮ್ಮ ಪಾಲಿನ ತೆರಿಗೆಯನ್ನು ನಮಗೆ ನೀಡುವಂತೆ ಪ್ರಬಲ ಒತ್ತಾಯ ಮಾಡಿದಾಗಲು ಕೇಂದ್ರದ ತೆರಿಗೆ ನಿರಾಕರಣೆ ನೀತಿ ಮುಂದುವರೆಯುತ್ತಿರುವುದು ಅತ್ಯಂತ ಖಂಡನಾರ್ಹ.

ಈ ಕುರಿತು ಬಾಯಿ ಬಿಡದೆ ದಿವ್ಯ ಮೌನ ವಹಿಸಿದ ರಾಜ್ಯದ ಎಂಪಿಗಳ ನಡೆಯಂತು ನಾಚಿಕೆಗೇಡು. ನಮ್ಮ ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾಗಿರುವ ತೆರಿಗೆಯನ್ನೆ ತರಲಾಗದೆ ಹೋದ ಈ ರಣಹೇಡಿಗಳು ರಾಜ್ಯಕ್ಕೆ ಇನ್ನೇನು ಕೊಡುಗೆ ಕೊಡಲಾದೀತು?

ನಮ್ಮ ತೆರಿಗೆಯಲ್ಲಿ ನಮ್ಮ ಪಾಲಂತು ಇದ್ದೇ ಇದೆ. ಬಾಕಿ ಉಳಿದಿರುವ ನಮ್ಮ ಪಾಲನ್ನು ನಮ್ಮಿಂದ ವಂಚಿಸಲು ನಾವು ಅವಕಾಶ ನೀಡುವುದಿಲ್ಲ.

ನಮ್ಮ ತೆರಿಗೆ ನಮ್ಮ ಹಕ್ಕು ಕನ್ನಡಿಗರ ಸ್ವಾಭಿಮಾನಿ ಜಾಥಾ

ದಿನಾಂಕ: 17-4-2024, ಬುಧವಾರ, ಬೆಳಗ್ಗೆ: 10 ಗಂಟೆಗೆ ಸ್ಥಳ: ಶಂಕರ್ ನಾಗ್ ಸರ್ಕಲ್, ಮಾಳಗಾಳ, ನಾಗರಬಾವಿ 2 ನೇ ಹಂತ, ಬೆಂಗಳೂರು – 91.

ಸ್ವಾಭಿಮಾನಿ ಕನ್ನಡಿಗರೇ ಬನ್ನಿ, ಭಾಗವಹಿಸಿ.

  • ಪ್ರೊ. ಎಸ್‌.ಜಿ. ಸಿದ್ದರಾಮಯ್ಯ, ಬಿ.ಟಿ. ಲಲಿತಾ ನಾಯಕ್, ಜಾಣಗೆರೆ ವೆಂಕಟರಾಮಯ್ಯ, ಕಾ.ತ. ಚಿಕ್ಕಣ್ಣ, ಡಾ. ಕೆ.ಶರೀಫಾ, ಡಾ. ತಲಕಾಡು ಚಿಕ್ಕರಂಗೇಗೌಡ, ಡಾ. ವಸುಂಧರಾ ಭೂಪತಿ, ಡಾ. ಬೈರಮಂಗಲ ರಾಮೇಗೌಡ, ಡಾ.ಎಚ್‌.ಎಲ್. ಪುಷ್ಪ, ಪ್ರಭಾ ಬೆಳವಂಗಲ, ಪ್ರೊ. ನಾರಾಯಣಘಟ್ಟ, ಎಸ್. ಬೈರೇಗೌಡ, ನಾಗೇಶ್ ಅರಳಕುಪ್ಪೆ, ಕುಣಿಗಲ್‌ ರಾಮಚಂದ್ರ, ಜಗದೀಶ್ ಜಾಣ ಜಾಣೆಯರು, ಉದಂತ ಶಿವಕುಮಾರ್, ತಾ.ಸಿ. ತಿಮ್ಮಯ್ಯ, ಡಾ. ಬ್ಯಾಡರಹಳ್ಳಿ ಶಿವರಾಜ್, ಮುದಲ್ ವಿಜಯ್, ಕೆ.ಎಂ.ನಾಗರಾಜ, ರವಿ ತೊಂಡಗೆರೆ, ಸದಾಶಿವಪ್ಪ ಮಾರಬಘಟ್ಟ, ಗೋವಿಂದರಾಜ ಪಟೇಲ್, ಬಿಜೆಜೆ ಸತ್ಯಶ್ರೀ, ಜಯರಾಮಯ್ಯ ಬಿ.ಎಂ. ಗೋಪಾಲಕೃಷ್ಣ ಹಾಗೂ ಎಲ್. ಎನ್. ಮುಕುಂದರಾಜ್

Leave a Reply