ಏಪ್ರಿಲ್ (2 ರಿಂದ 6) ತಿಂಗಳಲ್ಲಿ ಮಧುರೈ ಪಟ್ಟಣದಲ್ಲಿ ಸಮಾವೇಶಗೊಳ್ಳಲಿರುವ ಸಿಪಿಐಎಂ ಪಕ್ಷದ 24 ನೇ ಮಹಾ ಅಧಿವೇಶನದಲ್ಲಿ ಮಂಡನೆಯಾಗಲಿರುವ ಕರಡು ರಾಜಕೀಯ ವರದಿಯನ್ನು ಸಿಪಿಐಎಂ ಕೇಂದ್ರ ಸಮಿತಿಯು ಚರ್ಚೆ, ತಿದ್ದುಪಡಿ, ಅಭಿಪ್ರಾಯ ಸಂಗ್ರಹಕ್ಕಾಗಿ ಸಾರ್ವಜನಿಕವಾಗಿ ಪ್ರಕಟಿಸಿದೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಈ ಕರಡು ವರದಿಯಲ್ಲಿ ಬಿಜೆಪಿ ಸರಕಾರದ ಕುರಿತಾದ “ನವ ಫ್ಯಾಸಿಸಂ ಗುಣ ಲಕ್ಷಣಗಳನ್ನು ಪ್ರದರ್ಶಿಸುತ್ತಿದೆ” ಎಂಬ ವಾಕ್ಯ ದೊಡ್ಡ ರೀತಿಯ ಚರ್ಚೆಗೆ ಕಾರಣವಾಗಿದೆ. ಬಹುತೇಕರು ಇಡೀ ಕರಡನ್ನು ಓದದೆ, (ಸಾಮಾಜಿಕ) ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯ “ನವ ಫ್ಯಾಸಿಸಂ” ವಾಕ್ಯದ ಮೇಲೆ ಚರ್ಚೆ, ಅಭಿಪ್ರಾಯಗಳನ್ನು ಕೇಂದ್ರೀಕರಿಸಿದ್ದಾರೆ. ಸುಮಾರು 70 ಪುಟದ (ಸಿಪಿಐಎಂ ವೆಬ್ ಸೈಟ್ ನಲ್ಲಿ ಸಾರ್ವಜನಿಕರಿಗೆ ಲಭ್ಯ ಇದೆ) ಈ ಕರಡು ವರದಿಯಲ್ಲಿ ಬಹಳಷ್ಟು ವಿಷಯಗಳನ್ನು ಆಳವಾದ ಅಧ್ಯಯನದೊಂದಿಗೆ, ಗಂಭೀರವಾಗಿ ಪ್ರಸ್ತಾಪಿಸಲಾಗಿದೆ. ಭಾರತದ ರಾಜಕೀಯ ಪರಿಸ್ಥಿತಿ, ಕಾರ್ಮಿಕರು, ಮಹಿಳೆಯರು, ಯುವಜನರು, ದಲಿತರು, ಆದಿವಾಸಿಗಳ ಈ ಸಂದರ್ಭದ ಸ್ಥಿತಿಗತಿಗಳು, ನಡೆಸಬೇಕಾದ ರಾಜಕಾರಣ, ಆ ಕುರಿತು ಪಕ್ಷದ ನಿಲುವುಗಳು ಬಹಳ ಸ್ಪಷ್ಟವಾಗಿ ಮಂಡಿಸಲಾಗಿದೆ.
ಹಾಗೆಯೆ, ಅಂತರಾಷ್ಟ್ರೀಯ ರಾಜಕಾರಣ. ಸುಮಾರು 15 ಪುಟಗಳಲ್ಲಿ ಜಾಗತೀಕರಣ, ಕಾರ್ಪೊರೀಟೀಕರಣ, ಬಲಪಂಥದ ಮೇಲುಗೈಯ ಈ ಸಂದರರ್ಭದ ಜಗತ್ತಿನ ಇಂದಿನ ಪರಿಸ್ಥಿತಿಯ ಕುರಿತು ಆಳವಾದ ಒಳನೋಟಗಳುಲ್ಲ ಸುಮಾರು 15 ಪುಟಗಳ ವರದಿ ಇದೆ. ಇದೆಲ್ಲವನ್ನು ಪ್ರಜ್ಞಾವಂತರು ಓದಬೇಕು, ಅಭಿಪ್ರಾಯ ತಿದ್ದುಪಡಿಗಳಿದ್ದರೆ ತಿಳಿಸಬೇಕು ಎಂಬುದು ಸಿಪಿಐ ಎಂ ಪಕ್ಷದ ಆಶಯ, ನಿರೀಕ್ಷೆ. ಈ ರೀತಿಯ ಅಭಿಪ್ರಾಯ, ತಿದ್ದುಪಡಿಗಳ ಆಧಾರದಲ್ಲಿ ಈ ರಾಜಕೀಯ ನಿರ್ಣಯದ ಕರಡು ಮಧುರೈ ಮಹಾಧಿವೇಶನದಲ್ಲಿ ಮಂಡನೆ ಆಗಲಿದೆ. ಅಲ್ಲಿ ದೇಶದ ಎಲ್ಲಾ ರಾಜ್ಯಗಳಿಂದ ಸದಸ್ಯತ್ವದ ಪ್ರಮಾಣದ ಆಧಾರದಲ್ಲಿ ಆಯ್ಕೆಯಾಗಿ ಬಂದಿರುವ ಪ್ರತಿನಿಧಿಗಳ ಮುಂದೆ ಮಂಡಿಸಲ್ಪಟ್ಟು ಗಂಭೀರ ಚರ್ಚೆಯ ಆಧಾರದಲ್ಲಿ ಅಗತ್ಯ ತಿದ್ದುಪಡಿ(ಇದ್ದಲ್ಲಿ)ಗಳೊಂದಿಗೆ ಅನುಮೋದನೆಗೊಳ್ಳಲಿದೆ.
ಇದು ಸಿಪಿಐಎಂ ಪಕ್ಷ ಅನುಸರಿಸುವ ಪ್ರಜಾಸತ್ತಾತ್ಮಕ ವಿಧಾನ. ಜನತೆಗೆ ಉತ್ತರದಾಯಿ ಆಗಿರುವ ಒಂದು ರಾಜಕೀಯ ಪಕ್ಷ ಇರಬೇಕಾದದ್ದು ಹೀಗೆಯೆ ತಾನೆ ? ಕನ್ನಡದಲ್ಲಿಯೂ ಈ ನಿರ್ಣಯದ ಪ್ರತಿ ಲಭ್ಯ ಇದೆ. ಬೆಲೆ 30 ರೂಪಾಯಿ. ಹತ್ತಿರದ ಸಿಪಿಐಎಂ ಪಕ್ಷದ ಕಚೇರಿಯಲ್ಲಿ ಲಭ್ಯ ಇರುತ್ತದೆ. ಸಿಪಿಐಎಂ ಪಕ್ಷದ ಸದಸ್ಯರು ಈ ಕರಡು ವರದಿ ಓದುವುದು ಕಡ್ಡಾಯ.
– ಮುನೀರ್ ಕಾಟಿಪಳ್ಳ, ಸಿಪಿಐಎಂ



