ಈ ಬರಹಕ್ಕೆ ಇದೀಗ ಐದು ವರ್ಷ ತುಂಬಿತು.
“ಮಂಜುನಾಥ್ ಥಳೀ”‘ ನಾನು (ನನ್ನ) ಪ್ರೀತಿಸುವ ಗೆಳೆಯರಲ್ಲಿ ಬಹುವಿಶಿಷ್ಟ ವ್ಯಕ್ತಿತ್ವವುಳ್ಳವನು. ಗ್ರಾಮೀಣಭಾಗದ ನೋವು ಸಂಭ್ರಮಗಳನ್ನುಂಡವನು. ಸರಳಜೀವಿ. ಸಂಕೋಚದ ಮನೋಭಾವ. ಮಿತವಾದ ಮಾತು, ಹರಿತವಾದ ನೋಟ, ಎದುರಿರುವವರ ನಾಡಿಮಿಡಿತವನ್ನ ಥಟ್ಟನೆ ಅರಿಯಬಲ್ಲವನು. ನೋಡುಗರ ಕಣ್ಣಿಗೆ ತತ್ವಜ್ಞಾನಿಯಂತಲೋ… ಬದುಕಿನಲ್ಲಿ ಜಿಗುಪ್ಸೆ ಹೊಂದಿದವನೆಂತಲೋ… ಕಾಣಬಲ್ಲ ಈ ಥಳೀ ಮೂಲತಃ ನೆರೆಯ ತಮಿಳುನಾಡಿನ ಹೊಸೂರು ತಾಲೂಕಿನ ಥಳೀಮದಗೊಂಡಹಳ್ಳಿಯವನು… ಇವರ ತಾಯಿಗೆ ಮೂಲತಃ ನಮ್ಮ ಮಾಲೂರು ತಾಲೂಕಿನ ಬರಗೂರು ತವರುಮನೆ ಆಗಿದ್ದರಿಂದ ಮಂಜು ಸಹಜವಾಗಿಯೇ ನಮಗೆ ಹತ್ತಿರವಾಗಲು ಸಾಧ್ಯವಾಯಿತು.
ಮಂಜು ನನಗೆ ಪರಿಚಯವಾದುದ್ದೆ ಕಲಾವಿದ ಗೆಳೆಯ ಪುರ ಮುರಳಿ ಆರ್ಟ್ಸ್ ನಿಂದ. ಥಳೀ ಮಾಡಿದ್ದ ಕ್ಲೆವುಡ್ ಚಿತ್ರಗಳಿಂದ.. ಮತ್ತೆ ಥಳೀ ನನಗೆ ಜೂತೆಯಾಗಿದ್ದು ಆದಿಮ ಮೂಲ ಕುಟೀರ ಕಟ್ಟುತ್ತಿದ್ದ ದಿನಗಳಲ್ಲಿ.. ಇಲ್ಲಿ ನಡೆಯುತ್ತಿದ್ದ ಕೆಲವು ಪ್ರಮುಖ ಮಕ್ಕಳ ನಾಟಕಗಳಿಗೆ (ಚುಕ್ಕಿಮೇಳ) ಬ್ಯಾಕ್ ಸ್ಟೇಜ್ ಆರ್ಟ್ ಡಿಸೈನ್ ಮಾಡುವಾಗ ಇನ್ನೂ ಹತ್ತಿರವಾದ.
ಅನಿಲ್ ಅದ್ದೆಯ ಒಡನಾಟದಿಂದಾಗಿ ಅವರ ಊರಾದ ಅದ್ದೆಯಲ್ಲಿ ನಡೆವ “ಭೂಮಿಹಬ್ಬ” ಕಾರ್ಯಕ್ರಮದ ವೇದಿಕೆಯನ್ನು ದೇಸಿನೆಲೆಯಲ್ಲಿ ಕಟ್ಟಿ ಮೆಚ್ಚುಗೆ ಪಡೆದ ಮಂಜುನಾಥ್ ಬೆಂಗಳೂರಲ್ಲಿ ಆರ್ಟ್ ಬಗ್ಗೆ ಡಿಪ್ಲಮೋ ಪದವಿ ಮುಗಿಸಿದ್ದಾನೆ. ಕೆಲಕಾಲ ಬದುಕಿನ ಭರವಸೆಗಾಗಿ ಅಲೆಮಾರಿಯಂತೆ ಅಲೆದಾಡಿ ಕಡೆಗೂ ಸರವಣನರಂಥ ಗೆಳೆಯರೊಟ್ಟಿಗೆ ಶಶಿಧರ ಅಡಪರಂಥ ಹಿರಿಯರ ಜೂತೆ ಕೆಲವು ಸಿನಿಮಾಗಳಿಗೂ ಆರ್ಟ್ ವರ್ಕ್ ಮಾಡಿರುವ ಥಳೀ ಕಲೆಯಲ್ಲಿ ಪ್ರತಿಭಾವಂತ. ಯಾಕೋ ಸಿನಿಮ ಒಗ್ಗದೆ ನಗರ ಬಿಟ್ಟು ಮತ್ತೆ ಹಳ್ಳಿಗೆ ವಾಪಸ್ಸಾದ ಇವನು ಇದೀಗ ಅಪಾರ್ಟ್ ಮೆಂಟ್ ಗೋಡೆ ವಾಲ್ ಗಳಿಗೆ ಕಮರ್ಶಿಯಲ್ ಆರ್ಟ್ ಟಚ್ ಕೊಡಬಲ್ಲ.
ಇದೀಗ ಬಿಡುವಿಲ್ಲದೆ ಕ್ರಿಯಾಶೀಲನಾಗಿದ್ದಾನೆ.. ಕಳೆದ ಚಿತ್ರ ಸಂತೆಯಲ್ಲಿ ಅವಕಾಶ ಸಿಗಲಿಲ್ಲವೆಂದು ನೊಂದುಕೊಂಡ. ಮುಂದಿನ ಚಿತ್ರ ಸಂತೆಗೆ ಯಾರಾದರೂ ಗುರುತಿಸಬಲ್ಲರೆಂಬ ಆಶಾಭಾವನೆ ಇವನದು. ಕೆಲವೊಮ್ಮೆ ತೀರ ಭಾವುಕನಾಗುವ ಥಳೀ ಪ್ರಕೃತಿ ಚಲನೆ ಕುರಿತ ಬುದ್ಧನ ಫಿಲಾಸಫಿಯನ್ನು ತಾನು ಮಾಡುವ ಕ್ಲೆವುಡ್ ಮುಖವಾಡಗಳ ಮೂಲಕ ಅಚ್ಚರಿ ಹುಟ್ಟಸಬಲ್ಲ ನಿಪುಣ… ತೀವ್ರಥರವಾದ ಆಧುನಿಕ ಬದುಕಿನಿಂದ ಬಹು ದೂರವೇ ಉಳಿದಿರುವ ಇವನು ದಿಕ್ಕುದೆಸೆ ಇಲ್ಲದ ಒಬ್ಬ ಅನಾಥ ಹೆಣ್ಮಗಳನ್ನ ಬಾಳಸಂಗಾತಿಯನ್ನಾಗಿ ಸ್ವೀಕರಿಸಿರುವ ಥಳೀ ನಿಜಕ್ಕೂ ನಮಗೆ ಆದರ್ಶನೀಯ.
ಅವನನ್ನು ನೋಡಿ ಬರೋಣವೆಂದು ಪಕ್ಕದ ಜಯಮಂಗಲಕ್ಕೆ ಹೋದೆ. ಇಟ್ಟಿಗೆ ಫ್ಯಾಕ್ಟರಿಯ ಸಣ್ಣ ಶೆಡ್ಡನ್ನೆ ಕಲಾತಾಣವನ್ನಾಗಿಸಿ ಬದಲಾಯಿಸಿಕೂಂಡಿದ್ದಾನೆ. ಸ್ವಲ್ಪ ಹರಟೆ. ಆದಿಮ ಶಿಬಿರದ ಕೆಲವು ಪ್ರಸಂಗಗಳನ್ನು ನೆನಪಿಸಿಕೂಂಡ.. ಜೂತೆಗೆ ಹರೀಶ್ ಆದಿಮ. ಅನಿಲ್ ಅದ್ದೆ. ನಾಯಕ್. ನಂಜುಂಡ. ಮುಂಚಾಮಿ. ರಾಮಣ್ಣನವರನ್ನು ನೆನಪಿಸಿಕೂಂಡು ಖುಷಿಪಟ್ಟ..
ಯಾರೊಂದಿಗೂ ಅಷ್ಟುಬೇಗನೆ ಒಗ್ಗಿಕೂಳ್ಳದೆ ಕುರಿಯಂತೆ ನೆಲ ನೋಡುವ ಈ ಥಳೀ ಬಹುದಿನಗಳ ನಂತರ ನನ್ನ ಹಾಸ್ಯದ ಮಾತುಗಳಿಗಂತೂ ಹೂಟ್ಟೆಹುಣ್ಣಾಗೋವರೆಗೂ ನಕ್ಕ. ತನ್ನಂಥೆ ಬದುಕಲು ಇಚ್ಛಿಸುವ ಹುಡುಗರಿಗೊಂದು ಬದುಕಿಗೆ ನೆಲೆಯಾಗಬಲ್ಲ “ಬಯಲು ಕಲಾಶಾಲೆ”ಯನ್ನು ಕಟ್ಟಬೇಕೆಂದು ನನ್ನಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡ. ಅವನ ಕನಸು ಸಾಕಾರಗೊಳ್ಳಲಿ ಅಂತ ಪ್ರೀತಿಯಿಂದ ಆಶಿಸುತ್ತೇನೆ.
ಹತ್ತಿರದ ಗೆಳೆಯರು ತಮ್ಮ ಮನೆಗಳಿಗೆ ಬೇಕಾದ ದೇಸಿ ಹಿನ್ನೆಲೆಯ ಆರ್ಟ್ ಡಿಜೈನುಗಳಿಗೆ ಈತನ ಸಂಪರ್ಕ ಸಂಖ್ಯೆಗೆ ಕರೆಮಾಡಿ. ಇವನ ಕನಸುಗಳು ಸಾಕಾರಗೊಳ್ಳಲಿ. 7760488601,9935122808.
- ಗಂಗಪ್ಪ ತಳವಾರ್, ಕವಿ, ಕನ್ನಡ ಅಧ್ಯಾಪಕರು




