ಧಾರವಾಡ: ಐಎಎಸ್ ಹುದ್ದೆಯ ಮಹತ್ವ, ಅದರ ವಿಭಾಗಗಳು, ಆಡಳಿತ ಸೇವೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ, ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಿ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್ ಕರೆನೀಡಿದರು.
ಜಿಲ್ಲೆಯ ಹೆಬ್ಬಳಿ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ವಿಜ್ಞಾನ ಕಾಲೇಜಿಗೆ ದಿಢೀರ್ ಭೇಟಿ ನೀಡಿ, ವಸತಿ ನಿಲಯದ ಸೌಲಭ್ಯ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಿದರು.
ರಾತ್ರಿ ವಿದ್ಯಾರ್ಥಿಗಳೊಡನೆ ವಸತಿ ನಿಲಯದಲ್ಲಿಯೇ ವಸ್ತಿ ಉಳಿದು ಕಾಲೇಜು, ವಿದ್ಯಾರ್ಥಿಗಳ ಆರೋಗ್ಯ ಮತ್ತು ಅವರ ವಿದ್ಯಾಭ್ಯಾಸದ ಪ್ರಗತಿ ಬಗ್ಗೆ ಚರ್ಚಿಸಿದರು.
ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಐಎಎಸ್ ಹುದ್ದೆಯ ಮಹತ್ವ, ಅದರ ವಿಭಾಗಗಳು, ಆಡಳಿತ ಸೇವೆಗಳ ಬಗ್ಗೆ ತಿಳಿಸಿ, ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಲು ಹೇಳಿದರು.
ಅತ್ಯಂತ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಸಹ ಸಮಯ ಮಾಡಿಕೊಂಡು ಶಾಂತ ರೀತಿಯಲ್ಲಿ ವಿದ್ಯಾರ್ಥಿಗಳೊಡನೆ ಚರ್ಚಿಸಿದ ರೀತಿ ಹಾಗೂ ಅವರ ಡೌನ್ ಟು ಅರ್ಥ ಗುಣ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಮಾದರಿ ಆಯಿತು. ಕಾಲೇಜಿನ ಆವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇನ್ನೂ ಉತ್ತಮಗೊಳಿಸಲು ಕೆಲ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಲೆ ಮತ್ತು ಕಾಲೇಜಿನ ಪ್ರಾಂಶುಪಾಲ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




