21 ವರ್ಷ ಪೂರೈಸಿದವರಿಗೆ ಸಾಲಸೌಲಭ್ಯದ ಅವಕಾಶ

3 years ago

#Loan #facility #completed #21years

ದೆಹಲಿ: ಮನೆಯಲ್ಲಿ ಕುಳಿತೇ ನೀವು ಸಾಲ ಪಡೆಯಬಹುದಾದ ಸಿಹಿ ಸುದ್ದಿಯೊಂದು ಸದ್ದು ಮಾಡುತ್ತಿದೆ. ಬಂಗಾರ, ಎಲ್.ಐ.ಸಿ ಪತ್ರ, ಆಸ್ತಿ ದಾಖಲೆಗಳನ್ನೆಲ್ಲ ಹಿಡಿದುಕೊಂಡು ಬ್ಯಾಂಕು ಮತ್ತು ಖಾಸಗಿಯವರ ಬಳಿ ಅಲೆದಾಡುತ್ತಿದ್ದ ಪರಿಸ್ಥಿತಿಯಿಂದ ಸಾಲ ಪಡೆಯಲು ಮುಕ್ತಿ ಸಿಗುವ ಸುದ್ದಿ ಇದಾಗಿದೆ. ಹೌದು, ನೀವು ನಿಮ್ಮ ಮನೆಯಲ್ಲಿ ಕಾಲಮೇಲೆ ಕಾಲುಹಾಕಿಕೊಂಡು ಆರಾಮಾಗಿ ಕುಳಿತುಕೊಂಡೇ ಮನೆಯಿಂದ ಒಂದೇ ಒದ್ದು ಹೆಜ್ಜೆಯನ್ನು ಕೂಡ ಇರಿಸದೆ ಸುಲಭವಾಗಿ ಸಾಲ ಪಡೆಯಬಹುದು. ಅದು ಕೂಡ ನಿಮ್ಮ ಮೊಬೈಲ್ ಕರೆ ಮೂಲಕ ಸಾಲ ಪಡೆಯಲು ಹೊಸದೊಂದು ಅವಕಾಶ ನಿರ್ಮಾಣವಾಗಿದೆ.

ಸದ್ಯಕ್ಕೆ ಕೆಲವು ಫಿನ್ಟೆಕ್ ಕಂಪನಿಗಳು ಆನ್‌ಲೈನ್‌ನಲ್ಲಿ ಮಾತ್ರ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಇವುಗಳ ಸಾಲಿನಲ್ಲಿ ಹೀರೋ ಫಿನ್ ಕಾರ್ಪ್ ಕೂಡ ಇದೆ. ಕಂಪನಿಯ ವೆಬ್‌ಸೈಟ್ ಹೇಳಿಕೊಂಡಿರುವ ಪ್ರಕಾರ, ನೀವು 3 ಲಕ್ಷದವರೆಗೆ ಸಾಲ ಪಡೆಯಲು ಅವಕಾಶವಿದೆ. ಕನಿಷ್ಠ 50,000 ದಿಂದ ಗರಿಷ್ಠ 3 ಲಕ್ಷದವರೆಗೆ ಸಾಲ ಪಡೆಯಲು ಅವಕಾಶವಿದೆ. ಸಾಲ ಮರುಪಾವತಿ ಆಯ್ಕೆಗೆ ವಿವಿಧ ಅವಕಾಶಗಳೂ ಇವೆ. ಇದರ ಬಡ್ಡಿ ದರ 12.5% ಎಂದು ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ. ಸಂಸ್ಕರಣ ಶುಲ್ಕ ಸಾಲದ ಮೊತ್ತದ 2.5% ಎಂದು ಹೇಳಲಾಗಿದೆ. ಸ್ವಯಂಚಾಲಿತ ಮರುಪಾವತಿ ಅವಕಾಶವಿದ್ದು, ಸಾಲ ಪಡೆಯಲು ಆಸಕ್ತರು ಹೀರೋ ಫಿನ್ ಕಾರ್ಪ್ ಮೂಲಕ ಸೌಲಭ್ಯ ಪಡೆಯಬಹುದು.

ನಿಮಗಳು ಏನು?:

  • ತಿಂಗಳಿಗೆ ಕನಿಷ್ಠ 15 ಸಾವಿರ ವೇತನ ಪಡೆಯುತ್ತಿರಬೇಕು
  • 21 ರಿಂದ 58 ವರ್ಷದೊಳಗಿನ ವಯಸ್ಸಿನವರಾಗಿರಬೇಕು
  • ಆದಾಯದ ಪುರಾವೆ ಕಡ್ಡಾಯ
  • ನೆಟ್ ಬ್ಯಾಂಕಿಂಗ್ ಮೂಲಕ ಆರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್
  • CIBIL ಸ್ಕೋರ್ 600ಕ್ಕಿಂತ ಹೆಚ್ಚಿಗೆ ಇರಬೇಕು
  • KYC ದಾಖಲೆಗಳು ಅಗತ್ಯ
  • ಆಧಾರ್ ಲಿಂಕ್ ಮಾಡಲಾಗಿರುವ ಮೊಬೈಲ್ ಸಂಖ್ಯೆ
  • ಪ್ಯಾನ್ ಕಾರ್ಡ್

ಮೇಲಿನ ಎಲ್ಲಾ ವಿವರಗಳನ್ನು ಹೊಂದಿರುವವರು ಕಂಪನಿಯ ವೆಬ್‌ಸೈಟ್‌ಗೆ ಭೇಟಿಕೊಟ್ಟು ಸಾಲ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವಿದೆ.

ಸಾಲ ಪಡೆಯಬೇಕಾದವರು ಹೀರೋ ಮೋಟೋಕಾರ್ಪ್ ನೀಡುವ ತ್ವರಿತ ಸಾಲದ ಆಯ್ಕೆಗಳ ಪ್ರಯೋಜನವನ್ನು ಪಡೆಯಬಹುದು. ಜೊತೆಗ, ಕಂಪನಿ ವಿವಿಧ ರೀತಿಯ ಸಾಲಸೌಲಭ್ಯಗಳನ್ನು ಒದಗಿಸುತ್ತಿದೆ. ಉದಾ: ಅಸುರಕ್ಷಿತ ವ್ಯಾಪಾರ ಸಾಲ, ಆಸ್ತಿ ಮೇಲಿನ ಸಾಲ, ದ್ವಿಚಕ್ರ ವಾಹನ ಸಾಲ, ಉಪಯೋಗಿಸಿದ ಕಾರುಗಳ ಮೇಲೆ ಸಾಲ, ಗೃಹ ಸಾಲ ಪಡೆಯಲು ಕೂಡ ಇದೇ ವೇದಿಕೆಯನ್ನು ಬಳಸಬಹುದು. ಹೊಸ ದ್ವಿಚಕ್ರ ವಾಹನ ಖರೀದಿ ಅಥವಾ ಮನೆ ಖರೀದಿಸುವವರಿಗೆ ಕೂಡ ಹೀರೋ ಫಿನ್ ಕಾರ್ಪ್ ವತಿಯಿಂದ ಸಾಲಸೌಲಭ್ಯಾವಕಾಶವಿದೆ.

Leave a Reply