ಡಿಜಿಟಲ್ ಆರ್ಥಿಕತೆ ದೇಶದ ಬೆಳವಣಿಗೆ ಮೂಲ: ಡಾ. ಅರವಿಂದ್ ವೀರಮಾನಿ

3 years ago

#Digital #Economy #Country #Growth #Source #ArvindVeermani

ಬೆಂಗಳೂರು: ಪೂರೈಕೆ ಸರಪಳಿ ವೈವಿಧ್ಯಗೊಳಿಸುವುದು, ಸಾಮಾಜಿಕ ಮತ್ತು ಸರ್ಕಾರಿ ಸೇವೆಗಳ ಜಾಗತೀಕರಣ, ಮಾಹಿತಿ ಮತ್ತು ಜ್ಞಾನ ಆಧಾರಿತ ಆರ್ಥಿಕತೆಯ ಸಾರ್ವತ್ರೀಕರಣ, ಡಿಜಿಟಲ್ ಮತ್ತು ಹೈಬ್ರಿಡ್ ಆರ್ಥಿಕತೆ ಮತ್ತು ಹಸಿರು ಆರ್ಥಿಕತೆಯನ್ನು ಉತ್ತೇಜಿಸುವುದು 2050 ರ ವೇಳೆಗೆ ಭಾರತ ತನ್ನ ಅಭಿವೃದ್ಧಿಯನ್ನು ಸಾಧಿಸಲು ಪ್ರಮುಖ ಹೆಜ್ಜೆಗಳಾಗಿವೆ ಎಂದು ಐಐಎಂ ಬೆಂಗಳೂರಿನಲ್ಲಿ ನೀತಿ ಆಯೋಗದ ಸದಸ್ಯ ಡಾ. ಅರವಿಂದ್ ವೀರಮಾನಿ ಹೇಳಿದರು.

ಬೆಂಗಳೂರಿನ ಐಐಎಂನಲ್ಲಿ ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ (ಸಿಪಿಪಿ) 2023 ರ ಆಗಸ್ಟ್ 22 ರಿಂದ 24 ರವರೆಗೆ ಆಯೋಜಿಸಿರುವ ಸಾರ್ವಜನಿಕ ನೀತಿ ಮತ್ತು ನಿರ್ವಹಣೆಯ 18ನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, 2050 ರ ವೇಳೆಗೆ ಭಾರತ ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರವೆನಿಸಿಕೊಳ್ಳಲು ಅಗತ್ಯ ಮಾರ್ಗಗಳ ಕುರಿತು ವಿಷಯ ಪ್ರಸ್ತಾಪಿಸಿ, 2050 ರ ವೇಳೆಗೆ ಹೆಚ್ಚಿನ ಆದಾಯ ಹೊಂದಿರುವ ದೇಶವಾಗಲು, ಬಡತನವನ್ನು ತೊಡೆದುಹಾಕಲು ಮತ್ತು ಎಲ್ಲರಿಗೂ ಸಮಾನ ಅವಕಾಶವನ್ನು ಒದಗಿಸಲು ಮಹಿಳೆಯರು, ಹಿಂದುಳಿದ ಸಾಮಾಜಿಕ-ಆರ್ಥಿಕ ವರ್ಗಗಳ ಸದಸ್ಯರು ಮತ್ತು ಗ್ರಾಮೀಣ ಪ್ರದೇಶಗಳಿಂದ ಬಂದವರ ಅಭಿವೃದ್ಧಿ ಮುಖ್ಯ ಎಂದರು.

ಆರ್ಥಿಕ ಶಕ್ತಿಯನ್ನು ಪಡೆಯುವುದು ಜನಸಾಮಾನ್ಯರ ಬೆಳವಣಿಗೆಯ ಪ್ರಮುಖ ಅಂಶವಾಗಿದೆ. ಕೌಶಲ್ಯರಹಿತ ಅಥವಾ ಅರೆ-ಕುಶಲ ಕಾರ್ಮಿಕರಿಂದ ಕುಶಲ ಕಾರ್ಮಿಕರೆಡೆಗೆ ದೇಶ ಚಲಿಸುತ್ತಿದೆ, ಭಾರತದಲ್ಲಿ ಪಾಲು ದುಡಿಯುವ ಜನಸಂಖ್ಯೆಯ ಪಾಲು ಈಗ ಏರುತ್ತಿದೆ ಎಂದರು.

ಈ ವರ್ಷದ ಕಾರ್ಯಕ್ರಮವು 21 ಆಗಸ್ಟ್ 2023 ರಂದು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ನಿರ್ದೇಶಕಿ ಪ್ರೊ.ಹರಿಣಿ ನಾಗೇಂದ್ರ ಅವರ ‘ಬೆಂಗಳೂರನ್ನು ಪರಿಸರ ದೃಷ್ಟಿಯಿಂದ ಸ್ಮಾರ್ಟ್ ಸಿಟಿಯನ್ನಾಗಿ ಮಾಡುವುದರ’ ಕುರಿತ ಪ್ರೊ.ಎಂ.ಆರ್.ಕೃಷ್ಣಮೂರ್ತಿ ಸ್ಮಾರಕ ಉಪನ್ಯಾಸದೊಂದಿಗೆ ಪ್ರಾರಂಭವಾಯಿತು.

Leave a Reply