ಮೈಸೂರು: ನಂಜನಗೂಡು ಕ್ಷೇತ್ರದ ‘ಕಣೇನೂರು’ ಗ್ರಾಮದಲ್ಲಿ ಅಂದಾಜು ₹10 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕಟ್ಟಡದ ಟಜಿಟಲ್ ಲೈಬ್ರರಿ ನಿರ್ಮಾಣ ಕಾಮಗಾರಿಗೆ ಶಾಸಕರಾದ ‘ಬಿ.ಹರ್ಷವರ್ಧನ್ ಭೂಮಿಪೂಜೆ ನೆರವೇರಿಸಿದ್ದಾರೆ.
ನಂಜನಗೂಡು ತಾಲ್ಲೂಕು ಕಣೇನೂರು ಗ್ರಾಮದ ಪ್ರಾಥಮಿಕ ಶಾಲಾ ಕಟ್ಟಡದ ಶಂಕು ಸ್ಥಾಪನೆಯನ್ನು ದಿನಾಂಕ: 28-05-1960 ರಲ್ಲಿ ಅಂದಿನ ಮೈಸೂರು ರಾಜ್ಯದ ವ್ಯವಸಾಯ ಮತ್ತು ಸಮಾಜ ಕಲ್ಯಾಣ ಮಂತ್ರಿಯಾದ ಎನ್. ರಾಚಯ್ಯ ಅವರಿಂದ ಹಾಗೂ ಮೈಸೂರು ರಾಜ್ಯದ ಗೃಹ ಶಾಖೆ ಉಪ ಮುಖ್ಯಮಂತ್ರಿ ಬಿ.ಬಸವಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಗಿತ್ತು. ಸುಮಾರು 62 ವರ್ಷಗಳ ಈ ನೆನಪಿನ ಕಟ್ಟಡ ಶಿಥಿಲಗೊಂಡು ಉಪಯೋಗಕ್ಕೆ ಯೋಗ್ಯವಿಲ್ಲದಿರುವುದರಿಂದ ಇದನ್ನು ತೆರವು ಮಾಡಿ, ಬಿ.ಬಸವಲಿಂಗಪ್ಪನವರ ಸ್ಮರಣಾರ್ಥ ಅವರು ಭೇಟಿ ನೀಡಿರುವ ಸ್ಥಳದಲ್ಲಿ, ಅವರ ಇಚ್ಛೆಯಂತೆ ಅಂದಾಜು ₹10 ಲಕ್ಷ ರೂ. ವೆಚ್ಚದಲ್ಲಿ ಬಿ.ಬಸವಲಿಂಗಪ್ಪನವರ ಮೊಮ್ಮಗ ಹಾಗೂ ನಂಜನಗೂಡು ಕ್ಷೇತ್ರದ ಶಾಸಕರು ಆದ ಬಿ.ಹರ್ಷವರ್ಧನ್ ಅವರು
ಸುಸಜ್ಜಿತವಾದ ಗ್ರಂಥಾಲಯ ನಿರ್ಮಿಸಲು ಅಡಿಗಲ್ಲು ಹಾಕಿದ್ದಾರೆ.
ಗ್ರಾ.ಪಂ. ಅಧ್ಯಕ್ಷರಾದ ವಿದ್ಯಾ ಪರಶಿವಮೂರ್ತಿ ಉಪಾಧ್ಯಕ್ಷರಾದ ಚಂದ್ರಕಲಾ, ಸದಸ್ಯರಾದ ಭಾನುಪ್ರಿಯ ಮಹೇಶ್, ರಮೇಶ್, ಗಂಗಾಧರ್, ಚಂದ್ರು, ಯಜಮಾನರಾದ ಚಿಕ್ಕೂಸಯ್ಯ, ಸಣ್ಣಸ್ವಾಮಿ, ಆದಿಶಕ್ತಿ ಗುಡ್ಡಪ್ಪ, ಮಲ್ಲೇಶ್, ಮರಿಸ್ವಾಮಿ, ಶಿವು, ಮಲ್ಲ, ಜೆಪಿಹುಂಡಿ ಶಿವಪ್ರಸಾದ್, ನಾಗರಾಜು, ಸಿದ್ದಯ್ಯ, ಚಿಕ್ಕನಂಜಯ್ಯ, ಮಹದೇವಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.



