ಶೋಷಿತರಿಗೆ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ರೀತಿ ನನ್ನ ಜನ್ಮದಿನ ಇರಲಿ: ಪ್ರಿಯಾಂಕ್ ಖರ್ಗೆ

2 years ago

#birthday #help #distressed #PriyankKharge

ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದೇನೆ ಸಹಕರಿಸಿ ಎಂದ ಗ್ರಾಮೀಣಾಭಿವೃದ್ಧಿ ಸಚಿವ

ಬೆಂಗಳೂರು: ಎಲ್ಲರಿಗೂ ಆತ್ಮೀಯ ನಮಸ್ಕಾರ, ನಿಮಗೆಲ್ಲ ತಿಳಿದಿರುವ ಹಾಗೆ, ಹಲವು ವರ್ಷಗಳಿಂದ ನಾನು ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ಬಾರಿಯೂ ಕೂಡ ನನ್ನ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, 22 ನವೆಂಬರ್ 2023 (ಬುಧವಾರ)ದಂದು ನಾನು ಕಲಬುರ್ಗಿ ಹಾಗೂ ಬೆಂಗಳೂರಿನಲ್ಲಿ ಭೇಟಿಗೆ ಲಭ್ಯ ಇರುವುದಿಲ್ಲ. ಪ್ರತಿವರ್ಷದಂತೆ, ಈ ವರ್ಷವೂ ಸಹ ನಿಮ್ಮ ಸಹಕಾರ, ಪ್ರೀತಿ ಹಾಗೂ ತಾಳ್ಮೆ ನನ್ನೊಂದಿಗೆ ಹೀಗೇ ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಕೋರಿದ್ದಾರೆ.

ಈಗಾಗಲೇ ಅನೇಕ ಆತ್ಮೀಯರು ಹುಟ್ಟುಹಬ್ಬವನ್ನು ಆಚರಿಸಲು ತಯಾರಿ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ದಯಮಾಡಿ ಇಂತಹ ಆಚರಣೆಗಳಿಗೆ ನಿಮ್ಮ ಶ್ರಮ ಹಾಕಬಾರದು ಎಂದು ಕೇಳಿಕೊಂಡಿದ್ದಾರೆ.

ನೀವು ಮಾಡಲೇಬೇಕು ಎಂದು ನಿರ್ಧರಿಸಿದ್ದರೆ, ನಿಮ್ಮ ಪರಿಶ್ರಮ ಬಡ ಜನರಿಗೆ, ಶೋಷಿತರಿಗೆ, ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ರೀತಿ ಇರಲಿ ಎಂದು ನಿಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನಿಮ್ಮ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಹಾಗೂ ನಮ್ಮ ಕುಟುಂಬ ಸದಾ ಚಿರಋಣಿಯಾಗಿರಲಿದೆ. ಧನ್ಯವಾದಗಳು ಎಂದಿದ್ದಾರೆ.

Leave a Reply