ಬೆಂಗಳೂರು: ಕನ್ನಡದ ಮಹತ್ವದ ಯುವ ವಿಮರ್ಶಕ ಡಾ.ಪ್ರಕಾಶ್ ಬಡವನಹಳ್ಳಿಯವರ, ಡಾ.ಸುಕನ್ಯಾ ಪ್ರಕಾಶ್ ಸಂಪಾದಿಸಿರುವ ‘ನುಡಿ ಸಂಕಥನ ಡಾ.ಪ್ರಕಾಶ್ ಅವರ ಬರಹಗಳು ಮತ್ತು ಭಾಷಣಗಳು’ ಕೃತಿ ಬಿಡುಗಡೆಯನ್ನು ಬಡವನಹಳ್ಳಿ ಪ್ರಕಾಶ್ ಗೆಳೆಯರು ವತಿಯಿಂದ ಆಯೋಜಿಸಲಾಗಿದೆ.
ದಿನಾಂಕ 1/05/2022ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಡಾ.ಎಚ್.ಎನ್. ಸಭಾಂಗಣದಲ್ಲಿ ಕಾರ್ಯಕ್ರಮ ಬೆಳಿಗ್ಗೆ 10:30ಕ್ಕೆ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ವಿಮರ್ಶಕ ಡಾ.ನಟರಾಜ್ ಹುಳಿಯಾರ್ ಕೃತಿ ಬಿಡುಗಡೆ ಮಾಡಲಿದ್ದಾರೆ. ಕೃತಿ ಪರಿಚಯವನ್ನು ಡಾ.ವೆಂಕಟೇಶ್ ನೆಲ್ಲುಕುಂಟೆ ಮಾಡಿಕೊಡಲಿದ್ದು, ಮುಖ್ಯ ಅತಿಥಿಗಳಾಗಿ ಮಂಜುನಾಥ ಪ್ರಸನ್ನ ಕೋಡಿಉಗುನೆ, ಡಾ.ಅಗ್ರಹಾರ ಕೃಷ್ಣಮೂರ್ತಿ, ಡಾ.ಸುಕನ್ಯಾ ಪ್ರಕಾಶ್, ರೂಪ ಪ್ರಕಾಶನದ ಯು.ಎಸ್.ಮಹೇಶ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಟಕಕಾರ ಡಾ.ರಾಜಪ್ಪ ದಳವಾಯಿ ವಹಿಸಿಕೊಳ್ಳಲಿದ್ದಾರೆ.



