ಕುವೆಂಪು ಜಯಂತೋತ್ಸವ, ನಾಡಗೀತೆ ಶತಮಾನ ಸಂಭ್ರಮ
ಬೆಂಗಳೂರು: ಮಲ್ಲೇಶ್ವರಂನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಹಾಕವಿ ಕುವೆಂಪು ಪ್ರತಿಮೆ ಮುಂಭಾಗದಲ್ಲಿ ಮಹಾಕವಿ ಕುವೆಂಪು ಜಯಂತೋತ್ಸವ ಮತ್ತು ನಾಡಗೀತೆ ಶತಮಾನ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
- ಕುವೆಂಪುರವರು ರಚಿಸಿದ ಸಾಹಿತ್ಯಕ್ಕೆ ನೋಬಲ್ ಪ್ರಶಸ್ತಿ ಸಿಗಬೇಕು: ಅಶ್ವತ್ಥ್ ನಾರಾಯಣ
- ಕಾಂಗ್ರೆಸ್ ಮುಖಂಡರೇ ತಾತ್ಕಾಲಿಕ ಮನೆ ನಿರ್ಮಿಸಿಕೊಟ್ಟಿದ್ದಾರೆ: ಆರ್.ಅಶೋಕ
- ECI decided not to use this de-duplication software: Sasikant Senthil
- ರೈಲ್ವೆ ಮಾರ್ಗ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು: ಸಿದ್ದರಾಮಯ್ಯ
- ರಾಜ್ಯ ವಿದ್ಯುತ್ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದೆ: ಗೌರವ್ ಗುಪ್ತ
ದಿವ್ಯ ಸಾನಿಧ್ಯ ಶ್ರೀ ಶ್ರೀ ಬಸವರಮಾನಂದ ಮಹಾಸ್ವಾಮಿಗಳು, ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ರವರು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಂಸ್ಥೆ ಅಧ್ಯಕ್ಷರಾದ ನಾಡೋಜ ಡಾ.ವೂಡೇ ಪಿ.ಕೃಷ್ಣ, ನಿವೃತ್ತ ಪೊಲೀಸ್ ಉಪ ಆಯುಕ್ತ ಬಸವರಾಜ್ ಮಾಲಗತ್ತಿ, ಪ್ರಾಂಶುಪಾಲರಾದ ರಶ್ಮಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಹೆಚ್.ಶಿವರಾಮೇಗೌಡರವರು, ಕನ್ನಡಪರ ಹೋರಾಟಗಾರ ಪಾಲನೇತ್ರರವರು, ಸುರೇಶ್ , ಇನ್ಸ್ ಪೆಕ್ಟರ್ ಜಗದೀಶ್ ರವರು ಮಹಾಕವಿ ಕುವೆಂಪು ರವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಶ್ರೀ ಬಸವ ರಮಾನಂದ ಮಹಾಸ್ವಾಮಿಗಳು ಮಾತನಾಡಿ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ನಾಡಗೀತೆ ಶತಮಾನ ಸಂಭ್ರಮ ಮಲ್ಲೇಶ್ವರಂನಲ್ಲಿ ನಡೆಯುತ್ತಿದೆ. ನಾಡು, ನುಡಿ, ಜಲ, ನೆಲದ ಕುರಿತು ಸಂಕಷ್ಟಗಳು ಬಂದಾಗ ಕನ್ನಡ ಪರ ಹೋರಾಟಗಾರರು ಕುಟುಂಬದ ಕಡೆ ಗಮನಹರಿಸದೇ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದರು.
ಕುವೆಂಪುರವರು 99 ವರ್ಷ 10 ತಿಂಗಳು ಬದುಕಿದ್ದರು, ಅವರ ಜೀವನಕ್ಕೆ ಹೆಚ್ಚು ಸಾಹಿತ್ಯ ರಚನೆ ಮಾಡಿದರು. ಕೇಂದ್ರ ಸರ್ಕಾರ ಕುವೆಂಪು ರವರಿಗೆ ಭಾರತರತ್ನ ಪ್ರಶಸ್ತಿ ಕೊಡಬೇಕು ಎಂಬುದು ಕನ್ನಡಿಗರ ಆಶಯವಾಗಿದೆ ಎಂದರು.
ಮಾಜಿಮುಖ್ಯಮಂತ್ರಿಯವರು ಕುವೆಂಪುರವರಿಗೆ ಹೇಳುತ್ತಾರೆ ಬಸವೇಶ್ವರರ ಹೆಸರು ತೆಗೆದುಬಿಡಿ ನಾಡಗೀತೆ ಮಾಡುತ್ತೇನೆ ಎಂದು ಹೇಳುತ್ತಾರೆ. ಕುವೆಂಪುರವರು ಇದನ್ನ ಒಪ್ಪುವುದಿಲ್ಲ ಎಂದರು.
ಭಾರತದಲ್ಲಿ 99 ರಾಮಾಯಣ ಕೃತಿಗಳು ಬಂದಿದೆ, ಕನ್ನಡದಲ್ಲಿ ರಾಮಾಯಣ ದರ್ಶನಂ ಕನ್ನಡದಲ್ಲಿ ಬಂದಿದೆ. ಕುವೆಂಪು ರಚಿಸಿದ ಈ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕುವೆಂಪುರವರು ಬರೆದ ರಾಮಾಯಣ ದರ್ಶನಂ ಮಹಾಕಾವ್ಯರವರನ್ನು ಎಲ್ಲರು ಓದಬೇಕು ಎಂದು ಹೇಳಿದರು.
ಸಿ.ಎನ್.ಅಶ್ವಥ್ ನಾರಾಯಣ ಮಾತನಾಡಿ, ಕುವೆಂಪುರವರು ರಸಕವಿ, ಋಷಿ ಕವಿ ಎಂಬ ಕೀರ್ತಿ ಬಂದಿದೆ. ನಾಡಗೀತೆ ಶತಮಾನ ಸಂಭ್ರಮ ಕಂಡಿದೆ. ನಾಡಿನ ನೆಲ, ಜಲ ಕಾಪಾಡಲು ಕನ್ನಡಿಗರು ಸಂಘಟಿತರಾಗಬೇಕು. ವಿಶ್ವಮಾನವ, ರಾಮಾಯಣ ದರ್ಶನಂ ಎಂಬ ಸಾಹಿತ್ಯ ರಚಿಸಿದ ಕುವೆಂಪುರವರಿಗೆ ಭಾರತರತ್ನ ಕೊಡಬೇಕು ಎಂದು ಎಲ್ಲರ ಅಭಿಪ್ರಾಯವಾಗಿದೆ ಎಂದರು.
ಕುವೆಂಪುರವರು ಜಾತಿ, ಧರ್ಮ ಮೀರಿದ ವಿಶ್ವಮಾನವರವರು, ಒಳ್ಳೆಯ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಬರುತ್ತದೆ. ಕುವೆಂಪುರವರು ರಚಿಸಿದ ಸಾಹಿತ್ಯಕ್ಕೆ ನೋಬಲ್ ಪ್ರಶಸ್ತಿ ಸಿಗಬೇಕು. ಈ ನಿಟ್ಟಿನಲ್ಲಿ ಎಲ್ಲರು ಪ್ರಯತ್ನ ಮಾಡೋಣ ಎಂದರು.
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕುವೆಂಪುರವರ ಹೆಸರು ಶಾಶ್ವತವಾಗಿ ಉಳಿಯಲು ವಾರ್ಡ್ ಗೆ ಕುವೆಂಪು ಹೆಸರು ಇಡಲಾಗಿದೆ. ಎಲ್ಲ ಶಾಲೆ, ಕಾಲೇಜು, ಸರ್ಕಾರದ ಕಛೇರಿಗಳಲ್ಲಿ ನಾಡಗೀತೆ ಶತಮಾನ ಸಂಭ್ರಮ ಆಚರಣೆ ಅಚರಿಸಬೇಕು. ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಬಸವರಾಜ್ ಮಾಲಗತ್ತಿ ಮಾತನಾಡಿ, ಜಗದಕವಿ, ಯುಗದ ಕವಿ, ರಾಷ್ಟ್ರ ಹೆಮ್ಮೆಪಡುವ ರಾಷ್ಟ್ರ ಕವಿ. 21ನೇ ವರ್ಷದಲ್ಲಿ ನಾಡಗೀತೆ ರಚನೆ ಮಾಡಿದರು. ಶೂದ್ರ ಕವಿಗಳು ಕುವೆಂಪುರವರು. ನಿರ್ಭಯದಿಂದ ಸಾಹಿತ್ಯ ರಚನೆ ಮಾಡಿದರು. ಪ್ರಥಮ ಜ್ಞಾನ ಪೀಠ ಪ್ರಶಸ್ತಿ ಶೂದ್ರರಿಗೆ ಸಿಕ್ಕತ್ತಲ್ಲ ಎಂದು ಮೇಲ್ವರ್ಗದ ಜನರು ಕೊರಗಿದರು ಎಂದರು.
ಬೆಂಗಳೂರು ನಗರದಲ್ಲಿ ಕನ್ನಡ ಉಳಿಯಲು ದಾರ್ಶನಿಕರು, ಕನ್ನಡ ಪರ ಹೋರಾಟಗಾರರು ಕಾರಣ. ಭಾಷಣ ಮಾಡುವ ರಾಜಕಾರಣಿಗಳಿಂದ ಕನ್ನಡ ಉಳಿಯಲು ಸಾಧ್ಯವಿಲ್ಲ. ಕನ್ನಡಿಗರಿಗೆ ಮೇಲಿನ ಕೇಸ್ ವಾಪಸ್ಸು ಪಡೆಯಬೇಕು, ಹೋರಾಟಗಾರರಿಗೆ ಉಚಿತವಾಗಿ ನಿವೇಶನ ನೀಡಬೇಕು ಎಂದರು.
ಕರ್ನಾಟಕ ಸರ್ಕಾರ 25 ಸಾವಿರ ವಿದ್ಯಾರ್ಥಿಗಳಿಂದ ನಾಡಗೀತೆ ಹಾಡಿಸಲಾಯಿತು. ನಾಡಿನ ಎಲ್ಲ ಜನರು ನಾಡಗೀತೆ ಸಂಭ್ರಮಾಚರಣೆ ಮಾಡಬೇಕು ಎಂದು ಹೇಳಿದರು.
ಹೆಚ್.ಶಿವರಾಮೇಗೌಡ ಮಾತನಾಡಿ, ಸಾಧನೆ ಮಾಡಲು ಗುರುಗಳ ಆಶೀರ್ವಾದ ಇದ್ದಾಗ ಗುರಿ ಸಾಧಿಸಲು ಸಾಧ್ಯ. ವಿಶ್ವ ಮನುಜಮತ ಸಂದೇಶ ಸಾರಿದ ಕುವೆಂಪುರವರ ಆದರ್ಶ ಗುಣಗಳನ್ನು ಎಲ್ಲರು ಅನುಕರಿಸಬೇಕು. ಎಲ್ಲ ಕನ್ನಡ ಮನಸ್ಸುಗಳ ಒಂದಾಗಬೇಕು ಆಗ ಕನ್ನಡ ಭಾಷೆ ಉಳಿಸಲು ಬೆಳಸಲು ಸಾಧ್ಯ ಎಂದು ಹೇಳಿದರು.




