ವಿದ್ಯಾರ್ಥಿಗಳು ಸಾರಿಗೆ ನೌಕರರ ಪರ ಬೀದಿಗಿಳಿಯಿರಿ ಎಂದು ಕರೆ ನೀಡಿದ ಸಾರಿಗೆ ನೌಕರರು

5 years ago

ಬೆಂಗಳೂರು: ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗದ ಶಿಫಾರಸು ಮಾಡಲು ರಾಜ್ಯ ಸರ್ಕಾರ ಹಿಂದೇಟು ಹಾಕಿದೆ. ಇದರ ಬೆನ್ನಲ್ಲೇ ಸಾರಿಗೆ ನೌಕರರ ಪರ ಹೋರಾಡುತ್ತಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಬಂಧಿಸಲಾಗಿದೆ.  ಈ ಎಲ್ಲ ಬೆಳವಣಿಗೆಗಳ ನಡುವೆ ಸಾರಿಗೆ ನೌರರು ತಮ್ಮ ಹೋರಾಟವನ್ನು ಚುರುಕುಗೊಳಿಸಲು ಮುಂದಾಗಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಮತ್ತು ನಾಡಿನ ಜನತೆ ತಮ್ಮ ಪ್ರತಿಭಟನೆಯನ್ನು ಬೆಂಬಲಿಸಬೇಕು ಎಂದು ಕರೆ ನೀಡಲಾಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ “ಆತ್ಮೀಯರೇ ನಾಳೆ ನಮ್ಮ ಪರವಾಗಿ ವಿದ್ಯಾರ್ಥಿಗಳು ಬೀದಿಗಿಳಿಯಬೇಕು. ನಾಡಿನ ಜನತೆ ಬೀದಿಗಿಳಿಯಬೇಕು ಎಲ್ಲಾ ಶಾಲಾ-ಕಾಲೇಜುಗಳ ಮುಂದೆ. ನಮ್ಮ ಮುಷ್ಕರವನ್ನು ಬೆಂಬಲಿಸುವಂತೆ ಮನವಿ ಮಾಡೋಣ… ಮತ್ತು ನಮಗೆ ಗೊತ್ತಿರುವ ಎಲ್ಲಾ ಸಂಘಟನೆಗಳು ರೈತ ಮುಖಂಡರನ್ನು ಮತ್ತು ಸಂಘ ಸಂಸ್ಥೆಗಳ ಮುಖಂಡರನ್ನು ಭೇಟಿಯಾಗಿ ಬೆಂಬಲ ನೀಡಿ ಎಂದು ಕೇಳಿಕೊಳ್ಳೋಣ” ಎಂದು ಮನವಿ ಮಾಡಲಾಗಿದೆ.

ಜೊತೆಗೆ, ನಮ್ಮ ಈ ಹೋರಾಟ ಕೇವಲ ಸಾರಿಗೆ ನೌಕರರಿಗೆ ಸೀಮಿತವಾಗದಿರಲಿ. ಈ ನಮ್ಮ ಹೋರಾಟ ಸಾರ್ವತ್ರಿಕವಾಗಲಿ. ಈ ನಮ್ಮ ಹೋರಾಟ ಮಣ್ಣಿನ ಮಕ್ಕಳ ಹೋರಾಟವಾಗಲಿ. ಈ ನಮ್ಮ ಹೋರಾಟ ಕರುನಾಡಿನ ಹೋರಾಟವಾಗಲಿ. ನಾಳೆಯಿಂದಲೇ ನಮ್ಮ ಅಭಿಯಾನ ಆರಂಭವಾಗಲಿ. ಹೀಗೆ ಈ ಬಗ್ಗೆ ಎಲ್ಲರೂ ಯೋಚಿಸೋಣ. ಈ ಸಂದೇಶವನ್ನು ಎಲ್ಲಾ ಗ್ರೂಪ್ ಗಳಿಗೆ, ಸಾರ್ವಜನಿಕ ಗ್ರೂಪ್ ಗಳು, ಫ್ರೆಂಡ್ಸ್ ಗ್ರೂಪ್ ಗಳು… ಎಲ್ಲಾ ಗ್ರೂಪ್ ಗಳಿಗೆ ತಲುಪಿಸುವ ಕೆಲಸ ಮಾಡಿ ಎಂದು ಮನವಿಯಲ್ಲಿ ಕೋರಲಾಗಿದೆ.

Leave a Reply