ತೆಲಂಗಾಣ ಸಾರಿಗೆ ನೌಕರರ ರೀತಿಯಲ್ಲಿ ಹೋರಾಟಕ್ಕೆ ಕರೆ

5 years ago

ಬೆಂಗಳೂರು: ಸ್ನೇಹಿತರೆ ನಿಮ್ಮಲ್ಲಿ ಕಳಕಳಿಯ ಮನವಿ. ಸಂಸ್ಥೆ ಕೆಎಸ್ಆರ್ಟಿಸಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೂಟದ ಪದಾಧಿಕಾರಿಗಳನ್ನು ತುಂಬಾ ದೂರದ ಸ್ಥಳಗಳಿಗೆ ವರ್ಗಾವಣೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ನಾವು ಮುಷ್ಕರ ಕೈ ಬಿಟ್ಟು ಮತ್ತೆ ಕರ್ತವ್ಯಕ್ಕೆ ಹೋದರೆ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆಯಿಂದ ಮುಕ್ತಿಗೊಳಿಸುವುದಿಲ್ಲ.  ಮತ್ತು ವಜಾಗೊಂಡ ನೌಕರರನ್ನು ಮತ್ತೆ ವಾಪಸ್ ತೆಗೆದುಕೊಳ್ಳುವುದಿಲ್ಲ. ನಮ್ಮ ಮತ್ತು ನಮ್ಮ ಕುಟುಂಬದವರಿಗೆ ಪರವಾಗಿ ಹೋರಾಟ ಮಾಡಿ ಈ ಕಷ್ಟಕ್ಕೆ ಸಿಲುಕಿದ್ದಾರೆ. ಈಗ ನಾವು ಕೇವಲ ನಮ್ಮ ಕುಟುಂಬದ ಸ್ವಾರ್ಥಕ್ಕಾಗಿ ಮತ್ತೆ ಕರ್ತವ್ಯಕ್ಕೆ ಹೋದರೆ, ಆ ದೇವರು ನಮ್ಮನ್ನು ಕ್ಷಮಿಸುವುದಿಲ್ಲ. ಕರ್ತವ್ಯಕ್ಕೆ ಹೋದವರ ಬಾಳು ನಾಯಿಗಿಂತ ಕಡೆಯಾಗುತ್ತದೆ ಎಂದು ಹೇಳಲಾಗಿದೆ.

ಈಗಾಗಲೇ ಇಷ್ಟು ಬೆದರಿಕೆ ಒಡ್ಡುತ್ತಿರುವ ಸರ್ಕಾರ ಮತ್ತು ಅಧಿಕಾರಿಗಳು ನಾವು ಹೆದರಿ ಕರ್ತವ್ಯಕ್ಕೆ ಹೋದರೆ ನಮ್ಮನ್ನ ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂಬುದು ನಿಮ್ಮ ನೆನಪಿನಲ್ಲಿರಲಿ. ಸೋಮವಾರದಿಂದ ಕಾನೂನಿನ ಮೊರೆ ಹೋಗುತ್ತಿದ್ದಾರೆ. ಈಗ ನಾವು ಮುಷ್ಕರ ಮಾಡುತ್ತಿರುವ ದಿನಗಳ ಸಂಬಳವನ್ನು ಸರ್ಕಾರ ಕೊಡಬೇಕಾಗುತ್ತದೆ. ಆದ ಕಾರಣ ದಯಮಾಡಿ ಒಂದು ತಿಂಗಳೇ ಆಗಲಿ ನಾವು ಕರ್ತವ್ಯಕ್ಕೆ ಹೋಗುವುದು ಬೇಡ ಎಂದು ಕರೆನೀಡಲಾಗಿದೆ.

ತೆಲಂಗಾಣ ನೌಕರರು ಗೆದ್ದ ಇತಿಹಾಸವನ್ನು ಕರ್ನಾಟಕದಲ್ಲಿ ಸೃಷ್ಟಿಸೋಣ. ದಯಮಾಡಿ ಈ ವಿಷಯವನ್ನು ಎಲ್ಲಾ ಗ್ರೂಪ್ ಗಳಿಗೆ ತಲುಪಿಸಿ ಎಂದು ಮನವಿ ಮಾಡಲಾಗಿದೆ.

Leave a Reply