ಕರಾಮುವಿಯಲ್ಲಿ ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೆ ಪ್ರವೇಶಕ್ಕೆ ಡಿಸೆಂಬರ್ 10 ಕೊನೆ ದಿನಾಂಕ

4 years ago

ಮೈಸೂರು: ಮೈಸೂರಿನ ಕರಾಮುವಿಯ 2021-22 ನೇ ಶೈಕ್ಷಣಿಕ ಸಾಲಿನ (ಜುಲೈ ಆವೃತ್ತಿ) ಪ್ರವೇಶಾತಿ ದಂಡ ಶುಲ್ಕವಿಲ್ಲದೆ ನಡೆಯುತ್ತಿದೆ. ಕೆಎಸ್‌ಒಯು ವಿಶ್ವವಿದ್ಯಾಲಯ ಧನಸಹಾಯ ಅಯೋಗದ (UGC) ಮಾನ್ಯತೆ ಪಡೆದಿದೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿರುತ್ತದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಸಕ್ತ 2021-22ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿನ ಸ್ನಾತಕ/ ಸ್ನಾತಕೋತ್ತರ ಕೋರ್ಸ್ ಗಳಾದ 1. B.A., B.Com., B.B.A., B.C.A., B.Sc., (General, IT, Home Science) B.Lib.I.Sc., M.A/MCJ., M.Com (Dual Specialization- 1. Accounting & Finance/HRM  2. Marketing Management & HRM/Finance) ಎಂ.ಬಿ.ಎ ( AICTE Approved) (Specialization – •Finance • HRM • Marketing Management • Operations • Tourism • Corporate Law • Information Technology), M.Lib.I.Sc., M.Sc., PG Diploma., Diploma., Certificate Programs ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ.

ಅರ್ಜಿ ಸಲ್ಲಿಕೆ ಹೇಗೆ?

ಮೇಲೆ ತಿಳಿಸಿದ ಯಾವುದೇ ಕೋರ್ಸ್‌ಗಳ ಪ್ರವೇಶಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ನಂತರ ಕಡ್ಡಾಯವಾಗಿ ನಿಮ್ಮ ಹತ್ತಿರದ ಪ್ರಾದೇಶಿಕ ಕೇಂದ್ರಕ್ಕೆ ಅಥವಾ KSOU ಕೇಂದ್ರ ಕಚೇರಿ ಮೈಸೂರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ನಂತರ Debt Card/Cradit Card ಮೂಲಕ ಪ್ರವೇಶಾತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆದುಕೊಳ್ಳಬಹುದು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕರಾಮುವಿ ಆನ್‌ಲೈನ್‌ ಪೋರ್ಟಲ್ ಡೈರೆಕ್ಟ್‌ ಲಿಂಕ್‌ ಈ ಕೆಳಗಿನಂತಿದೆ.

KSOU Online Admission Portal http://ksouportal.com/views/StudentHome.aspx or www.ksoumysuru.ac.in.

ಈ ಮೇಲ್ಕಂಡ ಕೋರ್ಸ್ ‍ಗಳ ಪ್ರಥಮ ವರ್ಷದ ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೆ ಕೊನೆ ದಿನಾಂಕ 10/12/2021.

ಸೂಚನೆಗಳು:

  1. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಮತ್ತು ಎಕ್ಸ್ ಸರ್ವಿಸ್ ಮನ್ ಹಾಗೂ ಡಿಫೆನ್ಸ್ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇಕಡ 15ರಷ್ಟು ವಿನಾಯಿತಿ ನೀಡಲಾಗುವುದು.
  2. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಪ್ರವೇಶಾತಿ ಶುಲ್ಕದಲ್ಲಿ ವಿನಾಯಿತಿ ಪಡೆಯಬಹುದು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಕಚೇರಿ ಮತ್ತು ಪ್ರಾದೇಶಿಕ ಕೇಂದ್ರಗಳು ಸರ್ಕಾರಿ ರಜಾ ದಿನಗಳಾದ ಭಾನುವಾರ ಮತ್ತು 2ನೇ ಶನಿವಾರ ಹಾಗೂ 4ನೇ ಶನಿವಾರ ಕಛೇರಿ ತೆರೆಯುವ ಮೂಲಕ ಪ್ರವೇಶಾತಿ ಮಾಡಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗೆ

ಡಾ. ಲೋಕೇಶ. ಆರ್.

ಪ್ರಾದೇಶಿಕ ನಿರ್ದೇಶಕರು, ಕ.ರಾ.ಮು.ವಿ ಮಹಿಳಾ ಪ್ರಾದೇಶಿಕ ಕೇಂದ್ರ, ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು, 4ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-03. ದೂರವಾಣಿ- 080 23448811, 9844506629.

Leave a Reply