ಮಾದಕ, ಮದ್ಯವ್ಯಸನಿಗಳ ತಾಣ, ಕಸದ ಗುಂಡಿಯಾದ ಇಂದಿರಾನಗರ ಬಿ.ಡಿ.ಎ. ಕಾಂಪ್ಲೆಕ್ಸ್!

4 years ago

ಬೆಂಗಳೂರು:  ಇದು ಬೆಂಗಳೂರಿನ ಐಷಾರಾಮಿ ಪ್ರದೇಶಗಳಲ್ಲಿ ಒಂದು. ಅತ್ಯಂತ ಹೆಚ್ಚು ಬಾಡಿಗೆ, ಎಲೈಟ್ ಕ್ಲಾಸ್ ಜನ ವಾಸವಾಗಿರುವ ಪ್ರದೇಶ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವತಃ ನಿರ್ಮಿಸಿರುವ ಬಿಡಿಎ ಕಾಂಪ್ಲೆಕ್ಸ್ ನ ಪರಿಸ್ಥಿತಿ ಅಧೋಗತಿಗೆ ಇಳಿದಿದೆ.

ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ನಲ್ಲಿ ದುರಸ್ಥಿಯಲ್ಲಿರುವ ಕಟ್ಟಡಗಳು ಹಾಗೂ ಮೂಲ ಸೌಲಭ್ಯಗಳಿಲ್ಲದೇ ಕಿಡಿಗೇಡಿಗಳು ರಾತ್ರಿ ಹೊತ್ತಿನಲ್ಲಿ ಗುಂಪುಗುಂಪಾಗಿ ಗಾಂಜಾ ಮತ್ತು ಮದ್ಯಪಾನ ಮಾಡಿ ಬಿಡಿಎ ಜಾಗವನ್ನು ಹಾಳು ಮಾಡುತ್ತಿದ್ದಾರೆ.

ಈ ಎಲ್ಲಾ ಸಮಸ್ಯೆಗಳು ಸರ್ಕಾರಕ್ಕೆ ಗೊತ್ತಿದ್ದರೂ ಕಣ್ಣು ಕಾಣದಂತೆ ಜಾಣ ಕುರುಡನಂತೆ ವರ್ತಿಸುತ್ತದೆ. ಸ್ಥಳೀಯ ಬಾಡಿಗೆದಾರರು ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಸರ್ಕಾರ ಮತ್ತು ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸಾರ್ವಜನಿಕರು ಈ ಬಿಡಿಎ ಸಂಕೀರ್ಣದೊಳಗೆ ಬರಲು ಭಯಪಡುವ ವಾತಾವರಣ ನಿರ್ಮಾನವಾಗಿದೆ. ಇತ್ತೀಚಿಗೆ ಮಳೆಯಿಂದ ಗಿಡಮರಗಳು ಬೆಳೆದು ಹಾವು ಹಾಗೂ ಕ್ರಿಮಿಕೀಟಗಳು ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಹಾಗಾಗಿ ಇಲ್ಲಿನ ಬಾಡಿಗೆದಾರರಿಗೆ ತುಂಬಲಾರದ ನಷ್ಟವಾಗಿದ್ದು, ಇದರ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿ ಎಂದು ಬಹುಜನ ಅಂಬೇಡ್ಕರ್  ಜನ, ರಾಜ್ಯಾಧ್ಯ ರಂಗಣ್ಣ ಹಾಗೂ ಇಂದಿರಾನಗರ ಬಿಡಿಎ ಅಂಗಡಿ ಬಾಡಿಗೆದಾರರಾದ ಬಿ.ಆರ್.ಹರೀಶ್ ಮತ್ತು ಕೃಷ್ಣೇಗೌಡ ಹಾಗೂ ಬಿಡಿಎ ಅನೇಕ  ಬಾಡಿಗೆದಾರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Leave a Reply