ಮೋದಿ ಜನ್ಮದಿನಕ್ಕೆ 1 ರೂ. ರಿಯಾಯಿತಿ ನೀಡಿದ ಕೆಪಿಸಿಸಿ!

5 years ago

ಮೋದಿ ಜನ್ಮದಿನಕ್ಕೆ 1 ರೂ. ರಿಯಾಯಿತಿ ನೀಡಿದ ಕೆಪಿಸಿಸಿ!

ಬೆಲೆ ಏರಿಕೆ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ

ಜನ ಜಾಗೃತಿಗೆ ಯತ್ನಿಸಿದ ಕೆಪಿಸಿಸಿ ಕಿಸಾನ್ ಘಟಕ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜನುಮದಿನದ ಅಂಗವಾಗಿ ಕರ್ನಾಟಕ ಕಾಂಗ್ರೆಸ್ ವತಿಯಿಂದ ಪೆಟ್ರೋಲ್, ಡೀಸೆಲ್ ಬಳಕೆದಾರರಿಗೆ ಲೀಟರಿಗೆ ಒಂದು ರೂಪಾಯಿ ರಿಯಾಯಿತಿಯನ್ನು ಕೊಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ದೇಶದಲ್ಲಿ ಬಿಜೆಪಿ ನೇತೃತ್ವದ ಆಡಳಿತದಲ್ಲಿ ದಿನನಿತ್ಯ ಬಳಕೆ ವಸ್ತುಗಳ ಏರಿಸುವ ಮುಖಾಂತರ ನರೇಂದ್ರ ಮೋದಿ ಬಿಜೆಪಿ ಸರ್ಕಾರ ಜನರಿಗೆ ದ್ರೋಹವೆಸಗಿದೆ ಎಂದು ಕೆಪಿಸಿಸಿ ಕಿಸಾನ್ ಮೋರ್ಚಾ ಅಧ್ಯಕ್ಷ ಸಚಿನ್ ಮೀಗಾ ನೇತೃತ್ವದಲ್ಲಿ ಪ್ರತಿಭಟಿಸಿದ ನಾಯಕರು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಸಾಂಕೇತಿಕವಾಗಿ ಬೆಲೆ ಏರಿಕೆ ಖಂಡಿಸಿ, ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಬೆಳಿಗ್ಗೆ 11.30 ಗಂಟೆಯಿಂದ 1 ಗಂಟೆಯವರೆಗೆ ಡೀಸೆಲ್ ಮತ್ತು ಪೆಟ್ರೋಲ್ ಹಾಕಿಸಿದವರಿಗೆ ಲೀಟರಿಗೆ 1 ರೂಪಾಯಿ ವಿನಾಯಿತಿ ನೀಡುವ ಮೂಲಕ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

Leave a Reply