ಕಿದ್ವಾಯ್ ಆಸ್ಪತ್ರೆಯ ಧರ್ಮ ಶಾಲೆಯ ಕಟ್ಟಡ ದುರಸ್ತಿಯಾಗಲಿ ಮತ್ತು ಮಕ್ಕಳ ಕ್ಯಾನ್ಸರ್ ವಿಭಾಗದ ತುರ್ತು ಚಿತಿಕ್ಷ ವಿಭಾಗದಲ್ಲಿ ಔಷಧಿಗಳ ಕೊರತೆ ನೀಗಿಸಬೇಕಿದೆ. ಭಾರತ ದೇಶದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಬೆಂಗಳೂರಿನಲ್ಲಿರುವ ಕಿದ್ವಾಯಿ ಆಸ್ಪತ್ರೆಯೂ ಒಂದಾಗಿರುತ್ತದೆ. ಇಲ್ಲಿ ಬಡವರಿಗೆ ಸಾಕಷ್ಟು ರೀತಿಯಲ್ಲಿ ಚಿಕಿತ್ಸೆ ವಿವಿಧ ರೀತಿಯಲ್ಲಿ ದೊರೆಯುತ್ತಿದೆ. ನಿಜಕ್ಕೂ ಕ್ಯಾನ್ಸರ್ ಕಾಯಿಲೆಗೆ ಗುರಿಯಾಗುವ ಬಡವರಿಗೆ ಇಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ. ಇದರ ನಡುವೆ ಇಲ್ಲಿ ರೋಗಿಗಳ ಆರೈಕೆಗಾಗಿ ಬರುವ ಮಂದಿಗಾಗಿ ಉಳಿದುಕೊಳ್ಳಲು ಎರಡು ಧರ್ಮ ಶಾಲೆಗಳನ್ನ ನಿರ್ಮಿಸಿರುತ್ತಾರೆ. ಈ ಎರಡು ಧರ್ಮ ಶಾಲೆಗಳು ಬಹಳ ಹಳೆಯದಾಗಿರುತ್ತದೆ. ಕಟ್ಟಡ ದುರಸ್ತಿಯನ್ನ ಕಾಣಬೇಕಾಗಿದೆ. ಆದುದರಿಂದ ಸರ್ಕಾರ ಗಮನಹರಿಸಿ ಧರ್ಮಶಾಲೆಯ ಎರಡು ಕಟ್ಟಡಗಳನ್ನ ದುರಸ್ತಿ ಮಾಡುವಂತಹ ಕೆಲಸದ ಕಡೆ ಗಮನವನ್ನು ಹರಿಸಬೇಕಿದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಜೊತೆಗೆ ಮಕ್ಕಳ ಕ್ಯಾನ್ಸರ್ ಘಟಕದಲ್ಲಿ ತುರ್ತು ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳಿಗೆ ಸಾಕಷ್ಟು ಔಷಧಗಳು ಆಸ್ಪತ್ರೆಯಲ್ಲಿ ದೊರೆಯುತ್ತಿಲ್ಲ, ಔಷಧಿಗಳನ್ನು ಪದೇಪದೇ ಬರೆದುಕೊಡುತ್ತಿದ್ದೀರಿ. ಇದರಿಂದ ಬಡವರು ಹಣ ಪಾವತಿಸಿ ಔಷಧಿಗಳನ್ನ ಖರೀದಿಸಲು ಸಾಧ್ಯವಾಗುತ್ತಿಲ್ಲ. ಔಷಧಿಗಳ ಲಭ್ಯತೆ ಇರುವುದಿಲ್ಲವೆಂಬ ಮಾತುಗಳನ್ನು ಇಲ್ಲಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ದಯಮಾಡಿ ಸರ್ಕಾರ ಔಷಧಿಗಳ ಸರಬರಾಜು ಮಾಡುವವರ ಜೊತೆಯಲ್ಲಿ ಕೂಡಲೇ ಸಂಪರ್ಕಿಸಿ ಅಗತ್ಯವಾದಂತಹ ಎಲ್ಲ ಔಷಧಿಗಳು ಬಡವರಿಗೆ ಉಚಿತವಾಗಿ ದೊರಕಿಸಿಕೊಡಬೇಕು.
ಗ್ರಾಮೀಣ ಪ್ರದೇಶದಿಂದ ಬಂದಿರುವವರು ಮತ್ತು ವಿಶೇಷವಾಗಿ ಬಡವರ ಮನೆಗಳಿಂದ ಬಂದಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇವರ ಪೋಷಕರು ಪ್ರತಿದಿನವೂ ವೈದ್ಯರು ಬರೆದುಕೊಡುವ ಔಷಧಿಗಳನ್ನ ಹೊರಗಡೆಯಿಂದ ಹಣ ಪಾವತಿಸಿ ತಂದು ಕೊಡುವುದು ಕಷ್ಟದ ಕೆಲಸವಾಗಿದೆ. ಮೊದಲೇ ತಮ್ಮ ಮಕ್ಕಳಿಗೆ ಇಂತಹ ಕಾಯಿಲೆ ಬಂದಿರುವುದರಿಂದ ಮಾನಸಿಕವಾಗಿ ಸಾಕಷ್ಟು ನೊಂದಿರುತ್ತಾರೆ. ಇಂತಹ ನೊಂದ ಮನಸ್ಸುಗಳಿಗೆ ಮತ್ತಷ್ಟು ದುಃಖವನ್ನು ಕೊಡುವುದು ಸರಿಯಲ್ಲ. ದಯಮಾಡಿ ಈ ನಿಟ್ಟಿನಲ್ಲಿ ತುರ್ತಾಗಿ ಗಮನವನ್ನು ಹರಿಸಬೇಕು.
– ಕೆ ಎಸ್ ನಾಗರಾಜ್, ಬೆಂಗಳೂರು




