ಇಳ್ಳೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ ಕರ್ನಾಟಕ ರಾಜ್ಯ ರೈತ ಸಂಘ
ಒಟ್ಟು 10 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಭರ್ಜರಿ ಜಯ
ದರ್ಶನ್ ಪುಟ್ಟಣ್ಣಯ್ಯ ಅವರ ಸ್ವರಾಜ್ಯ ಸಂಕಲ್ಪಕ್ಕೆ ಬೆಲೆ
ಮಂಡ್ಯ: ಮೇಲುಕೋಟೆ ವಿಧಾನಸಭೆಯ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಪಂಚಾಯಿತಿ ವ್ಯಾಪ್ತಿಯ ಇಳ್ಳೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಇತಿಹಾಸ ಸೃಷ್ಟಿಸಿದೆ. ಒಟ್ಟು 10 ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಭರ್ಜರಿಯಾಗಿ ಗೆದ್ದು, ಗ್ರಾಮೀಣ ರಾಜಕೀಯದಲ್ಲಿ ರೈತರ ಏಕತೆ, ನಾಯಕತ್ವ ಮತ್ತು ಸಂಕಲ್ಪದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
ಈ ಭರ್ಜರಿ ಜಯ ದರ್ಶನ್ ಪುಟ್ಟಣ್ಣಯ್ಯ ಅವರ “ಸ್ವರಾಜ್ಯ ಸಂಕಲ್ಪ”ದ ತತ್ವಗಳು ಗ್ರಾಮ ಮಟ್ಟದಲ್ಲೂ ಬೇರೂರಿರುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಅಧಿಕಾರ ಗ್ರಾಮಕ್ಕೆ, ನಿರ್ಧಾರ ರೈತನಿಗೆ ಮತ್ತು ಅಭಿವೃದ್ಧಿ ಸಹಕಾರ ಸಂಘಗಳಿಂದಲೇ ಪ್ರಾರಂಭವಾಗಬೇಕು ಎಂಬ ಅವರ ಹೋರಾಟಕ್ಕೆ ಇಳ್ಳೆನಹಳ್ಳಿ ಸ್ಪಷ್ಟವಾಗಿ ಬೆಂಬಲ ಸೂಚಿಸಿದೆ.
ಇಳ್ಳೇನಹಳ್ಳಿ ರೈತ ಸಂಘದ ಈ ಗೆಲುವು, ಸಂಘದ ಮೇಲೆ ಜನತೆ ಇಟ್ಟಿರುವ ಅಪಾರ ವಿಶ್ವಾಸ ಮಾತ್ರವಲ್ಲ; ಇದು ಹಣ, ಜಾತಿ, ಕುಟಿಲ ರಾಜಕಾರಣಕ್ಕಿಂತ ರೈತರ ಏಕತೆ ಮತ್ತು ಶುದ್ಧ ನಂಬಿಕೆಗೆ ಜನತೆ ಮೌಲ್ಯ ನೀಡಿದೆ ಎಂಬುದರ ಘೋಷಣೆಯಾಗಿದೆ.
ರೈತ ಸಂಘದ ವಿಜಯ ಕುರಿತು ಪ್ರತಿಕ್ರಿಯೆ ನೀಡಿರುವ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಈ ವಿಜಯಕ್ಕೆ ಕಾರಣರಾದ ಸಂಘದ ಎಲ್ಲ ಸದಸ್ಯರು, ಕಾರ್ಯಕರ್ತರು, ಮುಖಂಡರು, ಮತದಾರರು ಮತ್ತು ಇಳ್ಳೇನಹಳ್ಳಿಯ ರೈತ ಸಮುದಾಯಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲವೇ ನಮ್ಮ ಹೋರಾಟದ ಬಲ ಎಂದಿದ್ದಾರೆ.




