ಸಾಲ ನಿಯಂತ್ರಿಸಲು ಕರ್ನಾಟಕ ಸಾಲ ಸ್ಥಿರೀಕರಣ ನಿಧಿ ಸ್ಥಾಪಿಸಿ: ದರ್ಶನ್‌ ಪುಟ್ಟಣ್ಣಯ್ಯ

2 months ago

ಬೆಂಗಳೂರು: ಪ್ರತಿ ವರ್ಷ ಬಡ್ಡಿ ಪಾವತಿ ಏರಿಕೆಯಾಗುತ್ತಿದೆ. ಆದಾಯದ 16.9% ಮೊತ್ತವನ್ನು ನಾವು ಬಡ್ಡಿ ರೂಪದಲ್ಲಿ ಪಾವತಿಸುತ್ತಿದ್ದೇವೆ. ಇದು ಹೀಗೇ ಮುಂದುವರೆದರೆ 2029-2030ರ ಹೊತ್ತಿಗೆ 79,000 ಕೋಟಿ ರೂ. ಪಾವತಿಸಬೇಕಾಗುತ್ತದೆ ಎಂದು ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

2026-27ರ ಬಜೆಟ್‌ ಅಧಿವೇಶನದಲ್ಲಿ ಮಾತನಾಡಿದ ಅವರು, Karnataka Debt Stabilisation Fund (ಕರ್ನಾಟಕ ಸಾಲ ಸ್ಥಿರೀಕರಣ ನಿಧಿ) ಅನ್ನು ಸೃಷ್ಟಿಸಿ. 0.25% ಜಿಡಿಎಸ್‌ಪಿಯಷ್ಟು ಮೊತ್ತವನ್ನು ನೇರವಾಗಿ ಈ ಫಂಡ್‌ ನಲ್ಲಿ ಹೂಡಿಕೆ ಮಾಡಿ. ಅದನ್ನು ಪುನರ್‌ ರೂಪಿಸಲು ಮತ್ತು ಹೆಚ್ಚು ಬಡ್ಡಿ ದರ ಇರುವ ಬಾಂಡ್‌ ಗಳ ಸಾಲ ತೀರಿಸಲು ಒಂದು ರೂಪ ಕೊಡಲು ಒಂದು ವ್ಯವಸ್ಥೆಯನ್ನು ರೂಪಿಸಿ ಎಂದು ಮನವಿ ಮಾಡಿದರು.

ಜೊತೆಗೆ ಕೇಂದ್ರ ಸರ್ಕಾರದ 8.5%ಕ್ಕಿಂತ ಹೆಚ್ಚಿರುವ ಸಾಲವನ್ನು ಆದಷ್ಟು ಬೇಗ ತೀರಿಸಿದರೆ ನಾವು ಸೀಲಿಂಗ್‌ ಅನ್ನು ಹಿಟ್‌ ಮಾಡಲು ಅನುಕೂಲವಾಗುತ್ತದೆ. ಈಗಾಗಲೇ ಫಿಸ್ಕಲ್‌ ರೆಸ್ಪಾನ್ಸಿಬಿಲಿಟಿ ರಿವ್ಯೂ ಕಮಿಟಿ ಪ್ರಕಾರ, ಶೇ. 15 ಮಿತಿ ಇದೆ. ನಾವು ಈಗಾಗಲೇ ಅದರ ಮಿತಿಯನ್ನೂ ಮೀರಿದ್ದೇವೆ ಎಂದರು.

ಇನ್ನು ರಾಜ್ಯ ಹಣಕಾಸು ಆಯೋಗದ ಪ್ರಕಾರ, ಹೆಚ್ಚಿನ ಅನುದಾನವನ್ನು ಸ್ತಳೀಯ ಸಂಸ್ಥೆಗಳಿಗೆ ಒದಗಿಸಬೇಕು ಎಂದಿತ್ತು. ಅದರ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿಸಿದ್ದಾರೆ. ಅದರೆ ಅದರ ಪ್ರಮಾಣ ಸಾಲುತ್ತಿಲ್ಲ. ಯುಎಲ್‌ಬಿಗಳಲ್ಲಿ ಪುನರ್ರಚನೆ ಮಾಡಬೇಕು. ಅಲ್ಲಿಗೆ ಹೋಗುವ ಎಲ್ಲ ಹಣ 90% ವೇತನಕ್ಕೆ ಹೋಗುತ್ತದೆ. ಮಿಕ್ಕ 10% ಹಣ ಖರ್ಚು ಮಾಡಬೇಕಾಗಿದೆ. ಅದು ಯಾವುದಕ್ಕೂ ಸಾಕಾವುದಿಲ್ಲ ಎಂದರು.

Leave a Reply