ಕಮಲ್ ಹಾಸನ್ – ಮಣಿರತ್ನಂ ಜೋಡಿಯ ಚಿತ್ರದ ಹೆಸರು ಅಂತಿಮ

2 years ago

ತಮಿಳುನಾಡಿನ ಸಂವೇದನಾಶೀಲ ನಟ ಕಮಲ್ ಹಾಸನ್ ಮತ್ತು ವಿಶಿಷ್ಟ ಅಭಿರುಚಿಯ ನಿರ್ದೇಶಕ ಮಣಿರತ್ನಂ 37 ವರ್ಷದ ಬಳಿಕ ಮತ್ತೊಮ್ಮೆ ಒಂದಾಗಿದ್ದಾರೆ. ಕಮಲ್ ಹಾಸನ್ ಅಭಿನಯದ, ಮಣಿರತ್ನಂ ನಿರ್ದೇನದ ಚಿತ್ರಕ್ಕೆ ಥಗ್ ಲೈಫ್ ಎಂದು ಹೆಸರಿಡಲಾಗಿದೆ. 2.55 ನಿಮಿಷದ ವಿಡಿಯೋ ಬಿಡುಗಡೆಯ ಮೂಲಕ ಇದು ಬಹಿರಂಗವಾಗಿದೆ.

ರಂಗರಾಯ ಸತ್ಯವೇಲ್ ನಾಯಕನ್ ಆಗಿ ನಟಿಸಿರುವ ಕಮಲ್ ಹಾಸನ್ ತಾವು ಗ್ಯಾಂಗ್ ಸ್ಟರ್ ಎಂದು ಪರಿಚಯ ಮಾಡಿಕೊಳ್ಳುತ್ತಾರೆ. ಭರ್ಜರಿ ಆಕ್ಷನ್ ಮೂಲಕ ವಿರೋಧಿಗಳಿಗೆ ಟಕ್ಕರ್ ಕೊಡುವ ಉಳಗನಾಯಗನ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಥಗ್ ಲೈಫ್ ಚಿತ್ರದಲ್ಲಿ ತ್ರಿಷಾ ಕೃಷ್ಣನ್, ದುಲ್ಕರ್ ಸಲ್ಮಾನ್, ಜಯಂರವಿ ತಾರಾಗಣದಲ್ಲಿದ್ದಾರೆ. ರಾಜ್ ಕಮಲ್ ಇಂಟರ್ ನ್ಯಾಷನಲ್ ಫಿಲ್ಮಂಸ್ ಹಾಗೂ ಮದ್ರಾಸ್ ಟಾಕೀಸ್ ನಡಿ ಕಮಲ್ ಹಾಸನ್, ಮಣಿರತ್ನಂ, ಆರ್ ಮಹೇಂದ್ರನ್ ಮತ್ತು ಶಿವ ಅನಂತಿ ನಿರ್ಮಾಣದ ಹೊಣೆಹೊತ್ತಿದ್ದಾರೆ.

ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ಪ್ರಸ್ತುತಪಡಿಸಿದ್ದು, ಎಆರ್ ರೆಹಮಾನ್ ಸಂಗೀತ ನಿರ್ದೇಶನ, ಶ್ರೀಕರ್ ಪ್ರಸಾದ್ ಸಂಕಲನ, ರವಿ ಕೆ ಚಂದ್ರನ್ ಛಾಯಾಗ್ರಾಹಣ ಈ ಚಿತ್ರಕ್ಕಿದೆ.

1987ರಲ್ಲಿ ಬಿಡುಗಡೆಯಾದ ‘ನಾಯಗನ್’ ಸಿನಿಮಾ ನಂತರ 37 ವರ್ಷಗಳ ನಂತರ ಕಮಲ್ ಮತ್ತು ಮಣಿರತ್ನಂ ಒಂದಾಗಿದ್ದಾರೆ.

Leave a Reply