ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಅವಧಿ ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಕೊಲೆ, ಸುಲಿಗೆ, ಅತ್ಯಾಚಾರ, ಕಮೀಷನ್ ಸೇರಿದಂತೆ ಹಲವು ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಚಾರ್ಜ್ ಶೀಟ್ ಬಿಡುಗಡೆ ಮಾಡಿದೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪಕ್ಷದ ವಕ್ತಾರ ಅಶ್ವತ್ಥ ನಾರಾಯಣ ಸೇರಿದಂತೆ ಮತ್ತಿತರರು ಕಾಂಗ್ರೆಸ್ ಸರ್ಕಾರದ ವಿರುದ್ದ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿ ಇದೊಂದು ರೈತ ವಿರೋಧಿ, ಜನವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಅಶೋಕ್ ಮಾತನಾಡಿ, ಕಾಂಗ್ರೆಸ್ಗೆ ಖಜಾನೆ ಫುಲ್ ಕ್ಲಿಯರ್. ಸರ್ಕಾರಕ್ಕೆ ವರ್ಷ, ಸಮಸ್ಯೆಗಳು ನೂರೊಂದು. ವರ್ಷಕ್ಕೆ ಲೂಟಿ ಎಷ್ಟು ಎಂದು ಜನ ಲೆಕ್ಕ ಹಾಕುತ್ತಿದ್ದಾರೆ, ನೇಹಾ, ಮೀನಾ, ಅಂಜಲಿ ಆಯ್ತು ಮುಂದೆ ಯಾರು ಎನ್ನುವ ಸ್ಥಿತಿ ಇದೆ. ಕಾಲೇಜಿಗೆ ಹೋದರೆ ಗ್ಯಾರಂಟಿ ಇಲ್ಲ, ಮನೆಯಿಂದ ಹೊರ ಬಂದರೆ ಗ್ಯಾರಂಟಿ ಇಲ್ಲ, ನಿಶ್ಚಿತಾರ್ತವಾದರೂ ಗ್ಯಾರಂಟಿ ಇಲ್ಲ, ಈ ಮೂಲಕ ಸರ್ಕಾರ ಜನರಿಗೆ ಕೊಲೆ ಭಾಗ್ಯ ನೀಡಿದೆ ಎಂದರು.
ಮಹಿಳೆಯರ ಬದುಕುವ ಅವಕಾಶ ಕಿತ್ತುಕೊಂಡು ಯಾವ ಗ್ಯಾರಂಟಿ ಕೊಟ್ಟರೆ ಏನು ಭಾಗ್ಯ? ಅಂಜಲಿ ಕೊಲೆಗೆ ಪೊಲೀಸ್ ಲೋಪವಿದೆ ಎಂದು ಗೃಹ ಸಚಿವ ಪರಮೇಶ್ವರ್ ಒಪ್ಪಿಕೊಂಡಿದ್ದಾರೆ, ಹಾಗಾದರೆ ನಿಮಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇದೆಯಾ? ಗೃಹ ಇಲಾಖೆಯನ್ನು ಮೋದಿ ನಿರ್ವಹಿಸುತ್ತಿದ್ದಾರಾ? ವರ್ಷದಲ್ಲಿ ನೀವು ಮಾಡಿದ್ದೇನು? ಎಂದು ಪ್ರಶ್ನಿಸಿದರು.
ಈ ಹಿಂದೆ ದೇಶದ ಗಡಿಯಲ್ಲಿ ಪಾಕ್ ಜಿಂದಾಬಾದ್ ಎನ್ನುತ್ತಿದ್ದರು. ಆದರೆ ಈಗ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಹಾಕಲು ಅನುಮತಿಸಿದ್ದಾರೆ. ಅಲ್ಲಾ ಹೋ ಅಕ್ಬರ್ ಎನ್ನದಿದ್ದರೆ ಹಲ್ಲೆ ಮಾಡಲಾಗುತ್ತದೆ. ಹನುಮಾನ್ ಚಾಲೀಸ ಹಾಕಿದ್ದಕ್ಕೆ ಹಲ್ಲೆಯಾಗಿದೆ. ಈ ಸರ್ಕಾರ ಬಂದು ವರ್ಷವಾಯಿತು, ಮಗು ಕೂಡ ಹುಟ್ಟಿದ ವರ್ಷದಲ್ಲಿ ಅಂಬೆಗಾಲಿಡಲಿದೆ. ಆದರೆ ಈ ಸರ್ಕಾರ ಅಂಬೆಗಾಲನ್ನೂ ಇಡುತ್ತಿಲ್ಲ ಎಂದರು.
ರಾಜ್ಯದಲ್ಲಿ ಬರ ಬಂದಿದೆ, ಸಿದ್ದರಾಮಯ್ಯ ಮತ್ತು ಬರಕ್ಕೆ ಏನೋ ಸಂಬಧ ಇದೆ. ಆದರೆ ಈ ಬಾರಿ ಮಕ್ಕಳು ಪಾಸಾಗಲೂ ಬರ, ಮಾರ್ಕಸ್ ಗೂ ಬರ ಬಂದಿದೆ, 25 ಪರ್ಸೆಂಟ್ ಬಂದರೆ ಪಾಸ್, ಮುಂದಿನ ವರ್ಷ 100 ಅಂಕ ಕೃಪಾಂಕ ಕೊಡಿ, ಓದನ್ನೂ ಫ್ರೀ ಮಾಡಿ, ಓದದೆ ಪಾಸು ಮಾಡಿ ಎಂದರು.
ಪಕ್ಷದ ಅಧ್ಯಕ್ಷ ವಿಜಯೇಂದ್ರ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಅವೆಲ್ಲ ಹುಸಿಯಾಗಿವೆ. ಇನ್ನು ಮುಂದಾದರೂ ಬೆನ್ನು ತಟ್ಟಿಕೊಳ್ಳುವುದನ್ನು ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಿ, ಜನ ನಿಮಗೆ ಆಶೀರ್ವಾದ ಮಾಡಿದ್ದನ್ನು ಉಳಿಸಿಕೊಳ್ಳಿ, ಭರವಸೆ ಉಳಿಸಿಕೊಳ್ಳಿ ಎಂದರು.
ಸ್ಪಷ್ಟ ಬಹುಮತದ ಕಾಂಗ್ರೆಸ್ ಸರ್ಕಾರದ ಮೇಲೆ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ನುಡಿದಂತೆ ನಡೆದ ಸರ್ಕಾರ ಎಂದು ಹೊಗಳುಭಟರ ಮೂಲಕ ಬೆನ್ನು ತಟ್ಟಿಸಿಕೊಳ್ಳುತ್ತಿರುವುದೇ ಇವರ ಸಾಧನೆ. ಒಂದು ವರ್ಷದ ಸಾಧನೆ ಶೂನ್ಯ, ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ, ಯಾವುದೇ ಹೊಸ ಯೋಜನೆಗಳಿಗೆ ಚಾಲನೆ ಕೊಟ್ಟಿಲ್ಲ ಎಂದರು.
652ಕ್ಕೂ ಹೆಚ್ಚಿನ ರೈತರು ಆತಹತ್ಯೆ ಮಾಡಿಕೊಂಡರೂ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಂಡಿಲ್ಲ, ರಾಜ್ಯ ಸರ್ಕಾರ ರೈತರ ಬಗ್ಗೆ ಅಸಡ್ಡೆ ತೋರಿದೆ, ರಾಜ್ಯ ಸರ್ಕಾರದಿಂದ ರೈತರಿಗೆ ಯಾವ ರೀತಿ ಪರಿಹಾರ ಒದಗಿದೆ ಎಂದರು.




