ಸಿದ್ದರಾಮಯ್ಯ, ಯತೀಂದ್ರ ವಿರುದ್ಧ ಜೆಡಿಎಸ್ – ಬಿಜೆಪಿ ಜಂಟಿ ದಾಳಿ

3 years ago

#JDS #BJP #joint #attack #against #Siddaramaiah #Yatindra

ಬೆಂಗಳೂರು: ಸರ್ಕಾರದ ಮಟ್ಟದಲ್ಲಿನ ಕೆಲಸವೊಂದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮೊಬೈಲ್ನ ಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಷಯ ಇದೀಗ ವಿವಾದದ ಕಿಡಿ ಏಳಿಸಿದೆ.

ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಗ್ರಾಮದಲ್ಲಿ ಜನ ಸಂಪರ್ಕ ಸಭೆ ನಡೆಸುವ ವೇಳೆ ಯತೀಂದ್ರ ದೂರವಾಣಿಯಲ್ಲಿ ಮಾತನಾಡಿದ್ದು, ಆರಂಭದಲ್ಲೇ ಹಲೋ ಅಪ್ಪಾ ಎಂದು ಮಾತು ಶುರು ಮಾಡಿದ್ದಾರೆ. ವಿವೇಕಾನಂದನಾ ಎಲ್ಲಿಗೆ… ಇಲ್ಲಪ್ಪ ಇದ್ಯಾವುದು ಕೊಟ್ಟಿಲ್ಲ. ಯಾರು ಆ ಮಹದೇವ್… ? ಕೊಡಿ ಅವನಿಗೆ, ಅದಕ್ಕೆ ಹೇಳಿದ್ದು, ಕೊಡಿ ಆ ಮಹದೇವ್ಗೆಯ ಹೇಳ್ತೀನಿ. ನಾನು ಕೊಟ್ಟಿರೋದೆ ಐದು, ಅಲ್ಲಿ ಕೊಡಿ ಅದು ಎಂಬ ಸಂಭಾಷಣೆ ನಡೆದಿದೆ.

ಮತ್ತೊಂದು ಕಡೆಯಿಂದ ಮೊಬೈಲ್ ಕೈ ಬದಲಾದಂತೆ ಕಂಡು ಬರುತ್ತಿದ್ದು, ಹಲೋ ಮಹದೇವ್ ಎಂದು ಯತೀಂದ್ರ ಮಾತು ಮುಂದುವರೆಸಿದ್ದಾರೆ ಎನ್ನಲಾಗಿದೆ. ಮಹದೇವ್ ಯಾಕೆ ಯಾವುದ್ಯಾವುದೋ ಕೊಡ್ತಾ ಇದ್ದೀರಿ? ಮತ್ತೆ ಇದೆಲ್ಲಾ ಯಾರು ಕೊಡ್ತಿರೋದು, ಲಿಸ್ಟ್ ಅಲ್ಲಿ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ, ಅಷ್ಟೇ ಮಾತ್ರ ಮಾಡಿ, ಓಕೆ ಎಂದು ಹೇಳಿ ಯತೀಂದ್ರ ಮೊಬೈಲ್ ಅನ್ನು ಸಹಾಯಕರಿಗೆ ಕೊಡುತ್ತಾರೆ ಎಂದು ಹೇಳಲಾಗಿದೆ. ಈ ಸಂಭಾಷಣೆ ಯಾವ ವಿಚಾರ ಕುರಿತು ಎಂಬುದು ಖಚಿತವಾಗಿಲ್ಲ.

ವರ್ಗಾವಣೆ ದಂಧೆಯ ಆರೋಪ: ಈ ಸಂಭಾಷಣೆ ಆಧರಿಸಿ, ಬಿಜೆಪಿ ಇದನ್ನು ವರ್ಗಾವಣೆ ದಂಧೆ ಎಂದು ವ್ಯಾಖ್ಯಾನಿಸಿದೆ. ಯತೀಂದ್ರ ಮೊದಲಿನಿಂದ ಅಕಾರಿಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅದು ಮತ್ತೂ ಮುಂದುವರೆದಿದೆ, ಎಲ್ಲಾ ಕಾಲದಲ್ಲೂ ಇದು ನಡೆದಿದೆ. ಕಾಂಗ್ರೆಸ್ ಆಡಳಿತದಲ್ಲಿ ಇದು ಸ್ವಲ್ಪ ಹೆಚ್ಚಾಗಿದೆ ಎಂದು ಮಾಜಿ ಸಚಿವ ಸಿ.ಎನ್.ಅಶ್ವಥ್ ನಾರಾಯಣ್ ಆರೋಪ ಮಾಡಿದ್ದಾರೆ.

ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದಾಗಿ ಅವರು ಹೇಳಿದ್ದು, ಅದಕ್ಕೂ ಮೊದಲೇ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸುವ ಸಂಬಂಧ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.

ಸಿಎಂ ರಾಜೀನಾಮೆಗೆ ಜೆಡಿಎಸ್ ಆಗ್ರಹ: ಇದೇ ವಿಷಯ ಕುರಿತು ಪಟ್ಟು ಹಿಡಿದಿರುವ ಜೆಡಿಎಸ್, ಇದನ್ನು ವರ್ಗಾವಣೆ ದಂಧೆ ಎಂದು ಟೀಕಿಸಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ವರ್ಗಾವಣೆ ದಂಧೆ ಆರೋಪಕ್ಕೆ ಈ ವಿಡಿಯೋಗಿಂತ ಮತ್ತೊಂದು ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದರಲ್ಲದೆ, ಆತ್ಮಸಾಕ್ಷಿ ಇದ್ದರೆ, ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ನಾಡಿನ ಜನತೆ ಒಳ್ಳೆಯ ರೀತಿಯಲ್ಲಿ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಲೂಟಿ ಮಾಡಲು ಅಲ್ಲ. ಯತೀಂದ್ರ ಅವರು ಶಾಲೆಗಳ ಸಿಎಸ್ಆ ರ್ ನಿಧಿ ಬಗ್ಗೆ ಮಾತನಾಡಿದ್ದಾರೆ. ವರ್ಗಾವಣೆ ಬಗ್ಗೆ ಅಲ್ಲ ಎನ್ನುವುದಾದರೆ ದಾಖಲೆಗಳನ್ನು ಜನರ ಮುಂದಿಡಿ. ಮೈಸೂರು ಜಿಲ್ಲೆಯ ಡಿಡಿಪಿಐಗೆ ಕಳುಹಿಸಿರುವ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಸೂಲಿ ಬ್ಯುಸಿನೆಸ್ ಹಾದಿ ಬೀದಿಗೆ ಬಂದಿದೆ. ನೈತಿಕತೆ ಮೌಲ್ಯ ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಹಾದಿ ಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಾರ್ವಜನಿಕ ಸಭೆಯಲ್ಲೇ ಹೆಗ್ಗಿಲ್ಲದೆ ನಾಚಿಕೆ, ಮಾನ, ಮರ್ಯಾದೆ ಬಿಟ್ಟು ವರ್ಗಾವಣೆ ದಂಧೆ ನಡೆಸುವ ಮುಖ್ಯಮಂತ್ರಿ ಮತ್ತವರ ಸುಪುತ್ರ ಸಿಎಂ ಕಚೇರಿಯ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂಡಿದೆ. ಬೀದಿಯಲ್ಲೇ ಇಷ್ಟಾದರೆ ನಾಲ್ಕು ಗೋಡೆಗಳ ಮಧ್ಯೆ ಇನ್ನೆಷ್ಟು ವ್ಯವಹಾರ ನಡೆಸುತ್ತಿರಬಹುದು ಎಂದರು.

Leave a Reply