ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಆಸ್ಪತ್ರೆ ಬಡವರ ಪಾಲಿಗೆ ದೇವಾಲಯವಾಗಿರುವ ಜಯದೇವ ಆಸ್ಪತ್ರೆಯ ನಿರ್ದೇಶಕರನ್ನಾಗಿ ಡಾ. ಮಂಜುನಾಥ್ ಅವರನ್ನು ಮುಂದುವರಿಸುವುದು ಲಕ್ಷಾಂತರ ನಾಗರಿಕರ ಆಶಯವಾಗಿರುತ್ತದೆ. ಸರ್ಕಾರಕ್ಕೆ ಇವರನ್ನು ಮುಂದುವರೆಸಲು ಕಾನೂನಿನ ತೊಂದರೆ ಇದ್ದರೆ ಅದಕ್ಕಾಗಿ ತಿದ್ದುಪಡಿಯನ್ನು ಮಾಡಿ ಅಗತ್ಯವೆನಿಸಿದರೆ ಸುಗ್ರೀವಾಜ್ಞೆಯನ್ನು ಹೊರಡಿಸಿ. ಜಯದೇವ ಆಸ್ಪತ್ರೆ ಕೇವಲ ಆಸ್ಪತ್ರೆಯಾಗಿ ಉಳಿದಿಲ್ಲ ಅದು ಬಡವರು ಮತ್ತು ಮಧ್ಯಮ ವರ್ಗದವರ ಪಾಲಿಗೆ ತಮ್ಮ ಜೀವವನ್ನು ಕಾಪಾಡುವ ಪವಿತ್ರವಾದಂತಹ ದೇವಾಲಯವಾಗಿದೆ.
ಜಯದೇವ ಆಸ್ಪತ್ರೆಯಲ್ಲಿ ಮಂಜುನಾಥ್ ಅವರು ಇಲ್ಲ ಎಂದು ಕಲ್ಪಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಅವರು ಈ ಆಸ್ಪತ್ರೆಯ ನಿರ್ದೇಶಕ ಮಾತ್ರವಲ್ಲ, ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಯ ಪಾಲಿಗೆ ಒಂದು ಭರವಸೆಯಾಗಿದ್ದಾರೆ ಯ. ಅವರು ಅಲ್ಲಿದ್ದಾರೆ ಎಂಬ ಧೈರ್ಯದಿಂದ ರೋಗಿಗಳು ನೆಮ್ಮದಿಯಿಂದ ಇದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರದ ಕಾನೂನು ಏನೇ ಹೇಳಲಿ, ಮಂಜುನಾಥ್ ಅವರನ್ನು ನಿರ್ದೇಶಕರಾಗಿ ಮತ್ತೊಂದಷ್ಟು ಕಾಲ ಮುಂದುವರಿಸಿ ಜನರಲ್ಲಿರುವ ಆತಂಕವನ್ನು ದೂರ ಮಾಡಿ. ಈ ಆಸ್ಪತ್ರೆಯು ಒಂದು ವೇಳೆ ಉಳ್ಳವರಿಗೆ ಎಂಬ ರೀತಿ ಬದಲಾಗಿ ಹೃದಯವಂತಿಕೆ ಇಲ್ಲದವರು ಮುಖ್ಯಸ್ಥರಾದರೆ ಲಕ್ಷಾಂತರ ಹೃದಯ ರೋಗಿಗಳ ಪಾಲಿಗೆ ಕಷ್ಟದ ದಿನಗಳು ಎದುರಾಗುತ್ತವೆ.
– ಕೆ ಎಸ್ ನಾಗರಾಜ್, ಬೆಂಗಳೂರು



