ಬೆಂಗಳೂರು: ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ Mallikarjun Kharge ಅವರನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಬದಲಿಸಬೇಕು ಎಂಬ ಹೇಳಿಕೆ ನೀಡಿದ ರಾಜ್ಯ ಸಭಾಧ್ಯಕ್ಷ ಜಗದೀಪ್ ಧನಕರ್ ಅವರ ಹೇಳಿಕೆಯು ಅವರೊಳಗಿನ ಮನುವಾದದ ಮೇಲಿನ ನಂಬಿಕೆಯನ್ನು ಪುಷ್ಠೀಕರಿಸುತ್ತದೆ ಎಂದು ಕೆಪಿಸಿಸಿ ಹೇಳಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಸಂವಿಧಾನಬದ್ಧವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವರ್ಣ ವ್ಯವಸ್ಥೆಯನ್ನು ಸ್ಥಾಪಿಸುವ ಆರ್ಎಸ್ಎಸ್ ನ ಹವಣಿಕೆಯು ಜಗದೀಪ್ ಅವರ ಬಾಯಲ್ಲಿ ಹೊರಬಂದಿದೆ. ಇದು ಖರ್ಗೆಯವರಿಗೆ ಮಾಡಿದ ಅವಮಾನವಲ್ಲ, ಇಡೀ ಮೂಲನಿವಾಸಿ ಸಮುದಾಯಕ್ಕೆ ಮಾಡಿದ ಘೋರ ಅವಮಾನ ಎಂದಿದೆ.
ಧನಕರ್ ಅವರಿಗೆ ತಿಳಿದಿರಲಿ, ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ಸಮಾಜದ ಕಟ್ಟಕಡೆಯಲ್ಲಿರುವ ಸಮುದಾಯದಿಂದ ಬಂದು ತಮ್ಮ ಸಾಮರ್ಥ್ಯ, ಬದ್ಧತೆ, ಬುದ್ದಿವಂತಿಕೆ ಹಾಗೂ ಜನ ಬೆಂಬಲದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮದೇ ಆದ ವಿಶೇಷ ಸ್ಥಾನಮಾನವನ್ನು ಪಡೆದವರು, ಖರ್ಗೆಯವರು ಪಾರಂಪರಿಕ ವರ್ಣವ್ಯವಸ್ಥೆಯ ಸಂತ್ರಸ್ತರೇ ಹೊರತು ಫಲಾನುಭವಿಯಲ್ಲ, ಆ ವ್ಯವಸ್ಥೆಯ ಬೆಂಬಲದಿಂದ ಸ್ಥಾನವನ್ನು ಪಡೆದವರೂ ಅಲ್ಲ ಎಂದಿದೆ.
ಉಪರಾಷ್ಟ್ರಪತಿಯಾಗಿಯೂ ಸರ್ವಾಧಿಕಾರಿಯೊಬ್ಬನಿಗೆ ನಡುಬಗ್ಗಿಸಿ, ಕೈಕಟ್ಟಿ ನಿಂತು ಹುದ್ದೆಗೇರುವಂತಹವರಿಂದ ಖರ್ಗೆಯವರ ಜ್ಞಾನಕ್ಕೆ ಸರ್ಟಿಫಿಕೇಟ್ ಬೇಕಾಗಿಯೂ ಇಲ್ಲ ಎಂದಿದೆ.




