ನವದೆಹಲಿ: ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಖರ್ ಅವರು ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಆಡಳಿತಾರೂಢ ಎನ್ಡಿಎ ಅಭ್ಯರ್ಥಿಯಾಗಲಿದ್ದಾರೆ ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಇಂದು ಘೋಷಿಸಿದ್ದಾರೆ.
“ಎಲ್ಲಾ ಪರಿಗಣನೆಗಳು ಮತ್ತು ಸಮಾಲೋಚನೆಗಳ ನಂತರ, ನಾವು ಕಿಸಾನ್ ಪುತ್ರ (ರೈತರ ಮಗ) ಜಗದೀಪ್ ಧನಕರ್ ಅವರನ್ನು ಬಿಜೆಪಿ ಮತ್ತು NDA ಯ ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಲು ನಿರ್ಧರಿಸಿದ್ದೇವೆ,” ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷ ತೃಣಮೂಲ ಕಾಂಗ್ರೆಸ್ ಜೊತೆಗಿನ ಅವರ ವಿವಾದಿತ ಸಂಬಂಧಕ್ಕಾಗಿ ಶ್ರೀ ಧಂಖರ್ ಆಗಾಗ್ಗೆ ಗಮನ ಪಡೆದುಕೊಂಡಿದ್ದರು.




