ದೆಹಲಿ: ಬಾಲಿವುಡ್ ನಟ ಸೋನು ಸೂದ್ ಮತ್ತು ಅವರ ಸಂಬಂಧಿಕರ ಮನೆ ಮತ್ತು ಕಚೇರಿಗಳ ಮೇಲೆ 6 ಕಡೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಜುಹು ಬೀಚ್ ಬಳಿ ಇರುವ 6 ಅಂತಸ್ತಿನ ನಿವಾಸ ಕಟ್ಟಡವನ್ನು ಅಕ್ರಮವಾಗಿ, ಅನುಮತಿ ಪಡೆಯದೆ ಹೋಟೆಲ್ ಆಗಿ ಪರಿವರ್ತಿಸಿದ್ದಾರೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ಸೋನು ಸೂದ್ ವಿರುದ್ಧ ಆರೋಪಿಸಿತ್ತು.
ಇತ್ತೀಚೆಗೆ ಸೋನು ಸೂದ್ ಅವರು ದೆಹಲಿ ಸರ್ಕಾರದ ಬ್ರಾಂಡ್ ಅಂಬಾಸೆಡರ್ ಆಗಿದ್ದರು. ಇದಕ್ಕೂ ಮುನ್ನ ಕೊರೊನಾ ಅವಧಿಯಲ್ಲಿ ಮುಂಬೈ ಮತ್ತು ಇತರೆಡೆ ಜನಸಾಮಾನ್ಯರ ಕಷ್ಟಗಳನ್ನು ಪರಿಹರಿಸಲು ಉದಾರವಾಗಿ ತೊಡಗಿಸಿಕೊಂಡಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಅವರ ಮೇಲೆ ಐಟಿ ದಾಳಿ ನಡೆದಿರುವುದಾಗಿ ವರದಿಯಾಗಿದೆ.



