ಬೆಂಗಳೂರು: ಪಂಚಾಯತ್ ಸದಸ್ಯ ಸ್ಥಾನದಿಂದ AICC ಅಧ್ಯಕ್ಷ ಸ್ಥಾನದವರೆಗೆ ಏರಿದ ರಾಜ್ಯದ ಒಬ್ಬ ಧೀಮಂತ ನಾಯಕ ಖರ್ಗೆಯವರನ್ನು ಟಾರ್ಗೆಟ್ ಮಾಡಿ ಅವರ ತೇಜೋವಧೆ ಮಾಡುವುದು ಬಿಜೆಪಿ-ಆರ್.ಎಸ್.ಎಸ್. ಹುನ್ನಾರ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಛಲವಾದಿ ನಾರಾಯಣ ಸ್ವಾಮಿಯವರ ವಿರುದ್ಧದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಎಂ.ಬಿ.ಪಾಟೀಲ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿರುಗೇಟು ನೀಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲೇ ಪ್ರತಿಕ್ರಿಯೆ ನೀಡಿರುವ ಎಂ ಬಿ ಪಾಟೀಲ, ಛಲವಾದಿ ನಾರಾಯಣಸ್ವಾಮಿಯವರು ಕೇವಲ ಕೈಗೊಂಬೆ. ಅವರದೇ ಇತಿಹಾಸ ಈ ರೀತಿ ಇದೆ ಎಂದು ತಿಳಿಯದೆ ಈ ಹುನ್ನಾರದಲ್ಲಿ ಭಾಗಿಯಾಗಿ ಅವರೇ ಈಗ ಹರಕೆಯ ಕುರಿಯಾಗಿದ್ದಾರೆ ಎಂದಿದ್ದಾರೆ.
ಲಿಂಗಾಯತರನ್ನೂ ಒಳಗೊಂಡಂತೆ ಹಿಂದುಳಿದವರನ್ನು ಬಳಸಿ ಬಿಸಾಡುವ ಬಿಜೆಪಿಯವರ ಸಂಸ್ಕೃತಿ ಎಲ್ಲರಿಗೂ ತಿಳಿದಿದೆ. ಒಬ್ಬ ಹಿಂದುಳಿದ ಸಮುದಾಯದ ನಾಯಕನ ಏಳಿಗೆ ಸಹಿಸದೆ ಅವರದ್ದೇ ಸಮುದಾಯವರನ್ನು ಬಳಸಿಕೊಂಡು ತೇಜೋವಧೆ ಮಾಡಿಸುವ ಮೂಲಕ, ಸಮುದಾಯದ ನಾಯಕರಲ್ಲಿ ವೈಷಮ್ಯ ಮೂಡಿಸುವುದೇ ಇವರ ಅಜೆಂಡಾ ಎಂದಿದ್ದಾರೆ.
ಖರ್ಗೆಯವರನ್ನು ಟಾರ್ಗೆಟ್ ಮಾಡಿದ್ದಕ್ಕೆ ಹಾಗೂ ಛಲವಾದಿ ನಾರಾಯಣಸ್ವಾಮಿಯವರನ್ನು ಹರಕೆಯ ಕುರಿ ಮಾಡಿದ್ದಕ್ಕೆ ಬಿಜೆಪಿ-ಆರ್.ಎಸ್.ಎಸ್. ಬಹಿರಂಗವಾಗಿ ಪರಿಶಿಷ್ಟ ಜಾತಿ ಸಮುದಾಯದವರ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.



