ಬೆಂಗಳೂರು: ವಿದ್ಯುತ್ ಚಾಲಿತ ವಾಹನ ತಯಾರಿಕೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಏಥರ್ ಕಂಪನಿ ರಾಜ್ಯವನ್ನು ಬಿಟ್ಟು ಮಹಾರಾಷ್ಟ್ರಕ್ಕೆ ಸ್ಥಳಾಂತರಗೊಳ್ಳುವ ನಿರ್ಧಾರ ಮಾಡಿರುವುದಕ್ಕೆ ಈ ಹಿಂದಿನ ಬಿಜೆಪಿ ಸರಕಾರದ ವೈಫಲ್ಯವೇ ಕಾರಣವಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
- ಹಾರಿಕಾ ಮಂಜುನಾಥ್ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದಿದ್ದಾರೆಯೇ?
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್.ಅಶೋಕ
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
ಬಿಜೆಪಿ ನಾಯಕರ ಆರೋಪ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಶ್ರೀ ಬಸವರಾಜ ಬೊಮ್ಮಾಯಿ ಸರಕಾರವಿದ್ದಾಗ ಏಥರ್ ಕಂಪನಿಯು ತನ್ನ ಘಟಕ ನಿರ್ಮಾಣಕ್ಕೆ 50 ಎಕರೆ ಜಮೀನು ಕೇಳಿತ್ತು. ಅವರ ಸರಕಾರವು ಕೇವಲ 35 ಎಕರೆ ಮಂಜೂರು ಮಾಡಿತು. ಇದರಲ್ಲೂ 5 ಎಕರೆ ವಿವಾದಕ್ಕೆ ಒಳಗಾಗಿತ್ತು. ಇದರಿಂದ ರೋಸಿಹೋದ ಕಂಪನಿಯು ತನ್ನ 35 ಎಕರೆಯನ್ನು ಸರಕಾರಕ್ಕೆ ವಾಪಸ್ ಒಪ್ಪಿಸಿ ಕಂಪನಿಯು ರಾಜ್ಯವನ್ನು ಬಿಟ್ಟು ಮಹಾರಾಷ್ಟ್ರಕ್ಕೆ ತೆರಳಿತು ಎಂದು ಮಾಹಿತಿ ನೀಡಿದ್ದಾರೆ.
2017ರಲ್ಲಿ ಕಾಂಗ್ರೆಸ್ ಸರ್ಕಾರ EV ನೀತಿ ರೂಪಿಸಿತ್ತು. ಆನಂತರ ಬಂದ ಬಿಜೆಪಿ ಸರಕಾರವು ಸೂಕ್ತ ತೀರ್ಮಾನಗಳನ್ನು ಕೈಗೊಳ್ಳದೆ, ಎಲ್ಲದರಲ್ಲೂ ವಿಫಲವಾಯಿತು. ಈಗ ಆ ಪಕ್ಷದ ನಾಯಕರು ಏಥರ್ ಕಂಪನಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಕಾಲದಲ್ಲಿ ಓಲಾ ಕಂಪನಿಯು ರಾಜ್ಯದಿಂದ ತಮಿಳುನಾಡಿಗೆ ಹೋಯಿತು ಎಂದು ಹೇಳಿದ್ದಾರೆ.
ಏಥರ್ ಕಂಪೆನಿಯನ್ನು ರಾಜ್ಯದಲ್ಲೇ ಉಳಿಸಿಕೊಳ್ಳಲು ನಮ್ಮ ಸರ್ಕಾರ ಹರಳೂರು-ಮುದ್ದೇನಹಳ್ಳಿ ನಡುವೆ 50 ಎಕರೆ ಜಮೀನು ಕೊಡುವ ಭರವಸೆ ನೀಡಿದೆವು. ಆದರೆ ಆ ವೇಳೆಗಾಗಲೇ ಅವರು ಮಹರಾಷ್ಟ್ರಕ್ಕೆ ತೆರಳಿ ಆಗಿತ್ತು ಎಂದಿದ್ದಾರೆ.
ಸತ್ಯ ಅರಿಯದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ಬಿ.ವೈ.ವಿಜಯೇಂದ್ರ ಹಾಗೂ ಬಿಜೆಪಿ ಶಾಸಕರಾದ ಶ್ರೀ ಅರವಿಂದ ಬೆಲ್ಲದ ಅವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ! ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.




