30-35 ವರ್ಷಗಳಿಂದ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿರುವುದು ನಿಜವೇ?

2 years ago

#true #Modi #celebrating #Diwali #soldiers #Factcheck #reality #Modilies

ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಹಿಮಾಚಲಪ್ರದೇಶದ ಲೆಪ್ಚಾಗೆ ತೆರಳಿ ಸೈನಿಕರೊಂದಿಗೆ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತಾಡಿದ ಅವರು, ಕಳೆದ 30-35 ವರ್ಷಗಳಿಂದ ನಾನು ಪ್ರತಿ ದೀಪಾವಳಿಯನ್ನೂ ಸೈನಿಕರೊಂದಿಗೆ ಆಚರಿಸುತ್ತಿದ್ದೇನೆ ಎಂದು ಹೇಳಿದ್ದರು. ಆದರೆ ಇದು ನಿಜವೇ? ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಆದರೆ 2019ರಲ್ಲಿ ಮುಂಬೈನಲ್ಲಿ ಮಾತನಾಡುತ್ತಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು, ನಾನು ಪ್ರತಿ ದೀಪಾವಳಿಯಂದು ಕಾಡಿಗೆ ತೆರಳುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು. ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸಾಕೇತ್ ಗೋಖಲೆ, ಎರಡು ದಿನಗಳ ಹಿಂದೆ ಪ್ರಧಾನಿ ಮೋದಿಯವರು ಕಳೆದ 30-35 ವರ್ಷಗಳಿಂದ ನಾನು ಪ್ರತಿ ದೀಪಾವಳಿಯನ್ನೂ ಸೈನಿಕರೊಂದಿಗೆ ಆಚರಿಸುತ್ತಿದ್ದೇನೆ ಎಂದಿದ್ದಾರೆ. ಆದರೆ ಎರಡು ವರ್ಷಗಳ ಹಿಂದೆ ಕಾಡಿಗೆ ಹೋಗುತ್ತಿದ್ದೆ ಎಂದು ಹೇಳಿದ್ದಾರೆ. ಇದೀಗ ಯಾವುದು ಸತ್ಯ? ಸೈನಿಕರೊಂದಿಗೆ ದೀಪಾವಳಿ ಆಚರಿಸುವುದೋ ಅಥವಾ ಕಾಡಿನಲ್ಲಿ ದೀಪಾವಳಿ ಆಚರಿಸುವುದೋ? ಎಂದು ಪ್ರಶ್ನಿಸಿದ್ದಾರೆ.

2024ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮೋದಿಯವರು ಎಷ್ಟು ಹತಾಶರಾಗಿದ್ದಾರೆ. ಕಳೆದ 9.5 ವರ್ಷಗಳಿಂದ ಇಂತಹ ಎಷ್ಟು ಸುಳ್ಳುಗಳನ್ನು ಹೇಳಿರಬಹುದು ಊಹಿಸಿ. ಇವರ ಪ್ರತಿಯೊಂದು ಭರವಸೆ ಮತ್ತು ಸಾಧನೆಯೂ ಸುಳ್ಳಿನ ಮೇಲೆಯೇ ನಿಂತಿದೆ. ಚಿಕ್ಕ ವಿಷಯದಲ್ಲಿ ಕೂಡ ಅಪ್ರಮಾಣಿಕನಾಗಿರುವ ವ್ಯಕ್ತಿಗೆ ಸತ್ಯವನ್ನು ಹೇಳುವ ಸಾಮರ್ಥ್ಯವಿರುವುದಿಲ್ಲ ಎಂದಿದ್ದಾರೆ.

ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವುದರಲ್ಲಿ ಯಾವುದು ಸತ್ಯ ಎಂಬ ವಿಷಯವನ್ನು ಚರ್ಚೆಗೆ ಗುರಿಪಡಿಸಿದ್ದಾರೆ.

Leave a Reply