ಕರಣ್ ಥಾಪರ್ ತಪ್ಪೊಪ್ಪಿಗೆ ನಿಜವೇ?

2 years ago

#Factcheck #reality #Modi #KaranThapar #confession #true

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ಪತ್ರಕರ್ತ ಕರಣ್ ಥಾಪರ್ ತಾವು ಹಿಂದೆ ಮಾಡಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಬಿಂಬಿಸುವ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವಾಸ್ತವ ಸಂಗತಿ ಎಂದರೆ ಇವೆಲ್ಲ ಸುಳ್ಳು ಸುದ್ದಿಗಳು. ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆಸಿದ್ದ ಸಂದರ್ಶನದ ವೇಳೆ ಮೋದಿಯವರನ್ನು ಗುಜರಾತ್ ಹತ್ಯಾಕಾಂಡದ ಕುರಿತು ನೇರವಾಗಿ ಪ್ರಶ್ನೆಗಳನ್ನು ಕೇಳುವ ಮೂಲಕ ಇಕ್ಕಟ್ಟಿಗೆ ಸಿಲುಕಿಸಿದ್ದರು. ಈ ವಿಷಯದ ಕುರಿತು ಕರಣ್ ಥಾಪರ್ ಕ್ಷಮೆ ಕೋರಿದ್ದಾರೆ ಎಂಬರ್ಥದ ನಕಲಿ ಸುದ್ದಿಗಳನ್ನು ಫೇಸ್ ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಆದರೆ, WWW.BBC.COM ಮತ್ತು SUNTV ಹೆಸರಿನಲ್ಲಿ ಸುದ್ದಿಗಳು ಪ್ರಕಟವಾಗಿರುವಂತೆ ಭ್ರಮೆ ಹುಟ್ಟಿಸುವ ಸುದ್ದಿಗಳ ಲಿಂಕ್ ಗಳು ಹೆಚ್ಚು ಹಂಚಿಕೆಯಾಗಿವೆ. ಆದರೆ ಆ ಲಿಂಕ್ ಅನ್ನು ಓಪನ್ ಮಾಡಿದರೆ BEUTY ಎಂಬ ಲಿಂಕ್ ಓಪನ್ ಆಗುತ್ತದೆ. ಈ ಮೂಲಕ ಕರಣ್ ಥಾಪರ್ ಅವರ ವಿರುದ್ಧ ಮತ್ತು ಪ್ರಧಾನಿ ಪರವಾಗಿ ಅಲೆಯನ್ನು ಸೃಷ್ಟಿಸುವ ಯತ್ನವನ್ನು ಜಾಲತಾಣಗಳಲ್ಲಿ ಮಾಡಲಾಗುತ್ತಿದೆ. ವಿಶೇಷ ಸಂಗತಿ ಎಂದರೆ ಫೇಸ್ ಬುಕ್ ನಲ್ಲಿ ಈ ನಕಲಿ ಸುದ್ದಿಯನ್ನು ಸ್ಪಾನ್ಸರ್ ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕರಣ್ ಥಾಪರ್, ತಮ್ಮ ವಿರುದ್ಧ ಹರಿದಾಡುತ್ತಿರುವ ಸುಳ್ಳು ಸಂದೇಶ, ಸುದ್ದಿಗಳನ್ನು ನಂಬಬೇಡಿ ಎಂದು ಓದುಗರಲ್ಲಿ ಮನವಿ ಮಾಡಿದ್ದಾರೆ.

Leave a Reply