ದಾವಣಗೆರೆ: ಕನ್ನಡದಲ್ಲಿ ಸುಲಲಿತ ವೃತ್ತಿ ರಂಗನಾಟಕಗಳ ತೀವ್ರವಾದ ಕೊರತೆ. ಅಂತಹ ಕೊರತೆ ನೀಗಿಸುವುದರ ಜೊತೆಗೆ ಸೋಪಜ್ಞಶೀಲ ವೃತ್ತಿ ರಂಗಭೂಮಿ ನಾಟಕಗಳನ್ನು ಉತ್ತೇಜಿಸುವ ಮಹತ್ವಾಕಾಂಕ್ಷೆ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ್ದು. ನಮ್ಮೊಂದಿಗೆ ಕರ್ನಾಟಕ ನಾಟಕ ಅಕಾಡೆಮಿಯ ಸಹಕಾರ. ಈ ಎರಡೂ ರಂಗ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯಮಟ್ಟದ “ವೃತ್ತಿ ರಂಗನಾಟಕ ರಚನಾ ಶಿಬಿರ” ಏರ್ಪಡಿಸಲಾಗಿದೆ. ಶಿಬಿರದ ನಂತರ ತಿಂಗಳೊಪ್ಪತ್ತಲ್ಲಿ ಶಿಬಿರಾರ್ಥಿಗಳು ರಚಿಸಿದ ಆಯ್ಕೆಗೊಂಡ ನಾಟಕಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದು ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ತಿಳಿಸಿದ್ದಾರೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಕನ್ನಡ ಓದಲು, ಸುಸ್ಪಷ್ಟವಾಗಿ ಬರೆಯಲು ಬರುವ ಮತ್ತು ರಂಗಸಾಹಿತ್ಯ ಕುರಿತು ಪ್ರಾಥಮಿಕ ಜ್ಞಾನವುಳ್ಳ ಹದಿನೆಂಟು ವರ್ಷ ಮೇಲ್ಪಟ್ಟವರು ಸ್ವಪರಿಚಯದೊಂದಿಗೆ ೨೦ನೇ ಜನವರಿ ೨೦೨೫ ರೊಳಗೆ ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣಕ್ಕೆ ಆಸಕ್ತರು ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ವಸತಿ ಸೌಲಭ್ಯ ಉಚಿತವಾಗಿ ಒದಗಿಸಲಾಗುವುದು.
ಅರ್ಜಿ ಸಲ್ಲಿಕೆ ವಿಳಾಸ:
ನಿರ್ದೇಶಕರು/ವಿಶೇಷಾಧಿಕಾರಿಗಳು
“ವೃತ್ತಿ ರಂಗಭೂಮಿ ರಂಗಾಯಣ”
ಕೊಠಡಿ ಸಂ: 38, ಎ, ಮೊದಲ ಮಹಡಿ,
ಜಿಲ್ಲಾಡಳಿತ ಭವನ, ಪಿ.ಬಿ. ರಸ್ತೆ
ದಾವಣಗೆರೆ – 570006
ಮೊ: 9341010712




