ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.26ರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ, ದಾವಣಗೆರೆ ದಕ್ಷಿಣ ವಲಯ ಇವರಿಗೆ ಕಾವೇರಮ್ಮ ಹಿರಿಯ ಪ್ರಾಥಮಿಕ ಶಾಲೆ ಅನುಭೋಗದಲ್ಲಿರುವ ದಾವಣಗೆರೆ ಸಿಟಿ 4ನೇ ವಿಭಾಗ, ರಿ.ಸ.ನಂ:802 ರಲ್ಲಿ ಖಾತೆ ಸಂ:851/1, ಹೊಸಖಾತೆ ಸಂ:1636/1 ಅಳತೆ 88+85/2*288 ಅಡಿ ಚ.ಅ ಜಾಗವನ್ನು ಮಂಜೂರು ಮಾಡುವುದರ ಬಗ್ಗೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ 15 ದಿನಗಳೊಳಗಾಗಿ ಲಿಖಿತವಾಗಿ ಮಹಾನಗರಪಾಲಿಕೆ ಕಚೇರಿಗೆ ಸಲ್ಲಿಸಬಹುದೆಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.




