ಡಿಪ್ಲೊಮೊ: 8 ಹೊಸ ಕೋರ್ಸ್ ಗಳ ಆರಂಭ

5 years ago

ಬೆಂಗಳೂರು: ಪಾಲಿಟೆಕ್ನಿಕ್ ಡಿಪ್ಲೊಮಾದಲ್ಲಿ ಜಾಗತಿ ಮಟ್ಟದ 8 ಹೊಸ ಕೋರ್ಸ್ ಗಳನ್ನು ಪರಿಚಯಿಸಲಾಗಿದೆ. ಇದರಿಂದ ಉದ್ಯೋಗವಕಾಶ ಸೃಷ್ಟಿಯಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಹೇಳಿದರು.

ಆಲ್ಟನೇಟಿವ್ ಎನರ್ಜಿ ಟೆಕ್ನಾಲಜಿ, ಸೈಬರ್ ಭದ್ರತೆ, ಆಹಾರ ಸಂಸ್ಕರಣೆ ಮತ್ತು ಸಂರಕ್ಷಣೆ, ಪ್ರವಾಸೋದ್ಯಮ, ಕ್ಲೌಡ್ ಕಂಪ್ಯೂಟಿಂಗ್, ನಿರ್ದೇಶಕ ಮತ್ತು ಚಿತ್ರಕಥೆ ರಚನೆ, ಟಿವಿ ಕಾರ್ಯಕ್ರಮಗಳ ನಿರ್ಮಾಣ, ಸೈಬರ್ ಭೌತಿಕ ವ್ಯವಸ್ಥೆ ಮತ್ತು ಭದ್ರತೆ ಕೋರ್ಸ್ ಗಳನ್ನು ಆರಂಭಿಸಲಾಗುತ್ತದೆ.

ಅಸ್ತಿತ್ವದಲ್ಲಿರುವ 33 ಪಾಲಿಟೆಕ್ನಿಕ್ ಡಿಪ್ಲೊಮೊ ಕೋರ್ಸ್ ಗಳ ಜೊತೆಗೆ ಹೊಸದಾಗಿ 12 ಹೊಸ ವಿಷಯಗಳನ್ನು ಸೇರಿಸಲಾಗುವುದು. ಇದರಿಂದ 3ನೇ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ನಮ್ಮ ಕಾಲೇಜುಗಳು ಕೂಡ ಹೊಸ ತಂತ್ರಜ್ಞಾನ, ಡಿಜಿಟಲ್ ಕಲಿಕೆ, ಸ್ಮಾರ್ಟ್ ಕ್ಲಾಸ್ ರೂಂಗಳೊಂದಿಗೆ ಸನ್ನದ್ಧವಾಗಿವೆ ಎಂದರು.

Leave a Reply